ಕೆಟಿಎಂ ಆರ್‌ಸಿ 390, ಆರ್‌ಸಿ 200 ಜಂಟಿ ಬಿಡುಗಡೆಗೆ ರೆಡಿ

By Nagaraja

ಭಾರತೀಯ ಮಾರುಕಟ್ಟೆಗೆ ಎರಡು ಕ್ರೀಡಾ ಬೈಕ್‌ಗಳು ಆಗಮನಕ್ಕೆ ತುದಿಗಾಲಲ್ಲಿ ನಿಂತಿದೆ. ಇದೀಗ ಎಲ್ಲವೂ ಅಂತಿಮಗೊಂಡಿದ್ದು, ಕೆಟಿಎಂ ಆರ್‌ಸಿ 390 ಮತ್ತು ಕೆಟಿಎಂ ಆರ್‌ಸಿ 200 ಜಂಟಿಯಾಗಿ ಬಿಡುಗಡೆಯಾಗಲಿದೆ.

ಈ ಮೂಲಕ ದೇಶದ ಕ್ರೀಡಾ ವಾಹನ ಪ್ರೇಮಿಗಳಿಗೆ ಡಬಲ್ ಢಮಾಕಾ ಎನಿಸಿಕೊಳ್ಳಲಿದೆ. ಈ ಎರಡು ಬಹುನಿರೀಕ್ಷಿತ ಬೈಕ್‌ಗಳು ಸೆಪ್ಟೆಂಬರ್ 9ರಂದು ಬಿಡುಗಡೆಯಾಗಲಿದೆ ಎಂಬುದನ್ನು ಸಂಸ್ಥೆ ತಿಳಿಸಿದೆ.

KTM

ಇಟಲಿಯಲ್ಲಿ ಕಳೆದ ವರ್ಷ ನಡೆದ ಮಿಲಾನ್ ಮೋಟಾರು ಶೋದಲ್ಲಿ ಅನಾವರಣಗೊಂಡಿದ್ದ ಈ ಬೈಕ್‌ಗಳು ಅಕ್ಟೋಬರ್ ತಿಂಗಳ ಹಬ್ಬದ ಆವೃತ್ತಿಯ ವೇಳೆ ಗ್ರಾಹಕರನ್ನು ತಲುಪಲಿದೆ.

ಪವರ್ ಪ್ಲಾಂಟ್ ಮತ್ತು ಸ್ಟೈಲಿಷ್, ಕೆಟಿಎಂ ಆರ್390 ಮತ್ತು ಆರ್‌ಸಿ200 ಆವೃತ್ತಿಯ ಮುಖ್ಯಾಂಶವಾಗಿದೆ. ಇದು ಸಂಪೂರ್ಣ ಫೇರ್ಡ್ ಸ್ಟೈಲಿಂಗಗ್ ಹೊಂದಿರಲಿದ್ದು ದೇಶದ ಗ್ರಾಹಕರನ್ನು ಹೆಚ್ಚು ಸೆಳೆಯಲು ಸಾಧ್ಯವಾಗಲಿದೆ.

ಕೆಟಿಎಂ ಆರ್‌ಸಿ 390 ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ 375 ಸಿಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 43.6 ಅಶ್ವಶಕ್ತಿ (35 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಅದೇ ರೀತಿ ಕೆಟಿಎಂ 200 ಡ್ಯೂಕ್ 199.5ಸಿಸಿ ಎಂಜಿನ್ (25.3 ಪಿಎಸ್, 19.2 ಎನ್‌ಎಂ ಟಾರ್ಕ್) ಪಡೆಯಲಿದೆ.

More from DriveSpark

Article Published On: Thursday, August 28, 2014, 10:55 [IST]
English summary
Launch of KTM RC 200 and KTM RC 390 in Pune on 9th Sept 2014
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+