ಮಹೀಂದ್ರ ಸೆಂಚುರೊ ರಾಕ್‌ಸ್ಟಾರ್ ಎಡಿಷನ್ ಲಾಂಚ್

By Nagaraja

ಕಳೆದ ವರ್ಷಕ್ಕೆ ಹೊಸತಾದ ಸೆಂಚುರೊ ಮೂಲಕ ಜನರ ಪ್ರೀತಿ ಗಿಟ್ಟಿಸಿಕೊಂಡಿದ್ದ ಮಹೀಂದ್ರ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯು ಹೊಸತಾದ ಸೆಂಚುರೊ ರಾಕ್‌ಸ್ಟಾರ್ ಎಡಿಷನ್ ಬಿಡುಗಡೆಗೊಳಿಸಿದೆ. ಹೊಸ ಮಹೀಂದ್ರ ರಾಕ್ ಸ್ಟಾರ್ ಎಡಿಷನ್ ದೆಹಲಿ ಎಕ್ಸ್ ಶೋ ರೂಂ ದರ 43,684 ರು.ಗಳಾಗಿರಲಿದೆ. ಇದು ಇನ್ನು ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲು ನೆರವಾಗಲಿದೆ.

ಹೊಸ ಸೆಂಚುರೊ ರಾಕ್‌ಸ್ಟಾರ್ ಎಡಿಷನ್ 107 ಸಿಸಿ ಏರ್ ಕೂಲ್ಡ್ ಮೈಕ್ರೋಚಿಪ್-ಇಗ್ನೇಟೈಡ್ 5 ಕರ್ವ್ ಎಂಜಿನ್ (ಎಂಸಿಐ-5) ಹೊಂದಿರಲಿದೆ. ಇದು 8.5 ಎನ್‌ಎಂ ಪೀಕ್ ಟಾರ್ಕ್ ಉತ್ಪಾದಿಸಲಿದೆ.

Mahindra Centuro Rockstar Edition

ಭಾರತ ವಾಹನ ಅಧ್ಯಯನ ಸಂಸ್ಥೆಯ (ಎಆರ್‌ಎಐ) ಪ್ರಕಾರ ಮಹೀಂದ್ರ ಸೆಂಚುರೊ ರಾಕ್‌ಸ್ಟಾರ್ ಎಡಿಷನ್ ಪ್ರತಿ ಲೀಟರ್‌ಗೆ 85.4 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ಹೊಸ ಸೆಂಚುರೊ ರಾಕ್‌ಸ್ಟಾರ್ ಎಡಿಷನ್‌ನಲ್ಲಿ ದಿಟ್ಟವಾದ ಡಿಕಾಲ್ಸ್ ಕಂಡುಬರಲಿದೆ. ಇದು ಕಪ್ಪು-ಕೆಂಪು ಬಣ್ಣಗಳ ಮಿಶ್ರಣದೊಂದಿದೆ ಚಿನ್ನದ ವರ್ಣದ ಸ್ಪರ್ಶವನ್ನು ಪಡೆದುಕೊಂಡಿದೆ. ಇನ್ನು ಇದರಲ್ಲಿರುವ ಎಲ್‌ಇಡಿ ಬ್ರೇಕ್ ಲೈಟ್ ರಾತ್ರಿ ಪಯಣದ ವೇಳೆ ಸುರಕ್ಷತೆಗೆ ಕಾರಣವಾಗಲಿದೆ.

ಕಾರಿನಲ್ಲಿರುವಂತಹ ಪ್ಲಿಪ್ ಕೀ ಆಯ್ಕೆಯನ್ನು ಮಹೀಂದ್ರ ಒದಿಗಸಲಿದೆ. ಅಂತೆಯೇ ಹ್ಯಾಂಡಲ್ ಮೌಂಟೆಡ್ ಚಿಕ್, ಎಲೆಕ್ಟ್ರಿಕ್ ಸ್ಟಾರ್ಟ್, ಓವರ್‌ಟೇಕಿಂಗ್ ಪಾಸ್ ಲೈಟ್ ಮತ್ತು ಆಕರ್ಷಕ ಅಲಾಯ್ ವೀಲ್ಸ್ ಹೆಚ್ಚು ಸಂಪನ್ನವಾಗಿಸಲಿದೆ.

ದರ ಮಾಹಿತಿ (ಎಕ್ಸ್ ಶೋ ರು.ದೆಹಲಿ)
1. ಸೆಂಚುರೊ ಕ್ಯೂ1 - 48,808 ರು.
2. ಸೆಂಚುರೊ ಎನ್‌1 - 46,014 ರು.
3. ಸೆಂಚುರೊ ರಾಕ್‌ಸ್ಟಾರ್ - 43,684 ರು.

More from DriveSpark

Article Published On: Tuesday, August 26, 2014, 9:45 [IST]
English summary
Indian automobile manufacturer is a relatively new entrant into the two wheeler segment. Mahindra two wheelers had showcased several new and interesting products at the 2014 Auto Expo held in New Delhi. They had confirmed there will be several new products launched by them.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+