ಮಹೀಂದ್ರ ಮಾನ್ಸೂನ್ ಕೊಡುಗೆ - ಮಹೀಂದ್ರ ಮೊಜೊ?

Written By:

ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ ಮುಂಬರುವ ಮಳೆಗಾಲ ಆರಂಭದಲ್ಲಿ ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಮಹೀಂದ್ರ ಟು ವೀಲರ್ಸ್, ನೂತನ ಬೈಕ್‌ವೊಂದನ್ನು ಕೊಡುಗೆಯಾಗಿ ನೀಡಲಿದೆ. ಈಗಾಗಲೇ ಸೆಂಚುರೊ ಪ್ರಯಾಣಿಕ ಬೈಕ್‌ನ ಯಶಸ್ಸಿನಿಂದ ಬೀಗುತ್ತಿರುವ ಮಹೀಂದ್ರ, ಜೂನ್ ತಿಂಗಳಲ್ಲಿ ಮೊಜೊ ಲಾಂಚ್ ಮಾಡುವ ಸಾಧ್ಯತೆಯಿದೆ ಎಂಬ ಬಗ್ಗೆ ವರದಿಗಳು ಬಂದಿವೆ.

ಈ ಹಿಂದೆ 2012ರಲ್ಲಿ ಮೊದಲ ಬಾರಿಗೆ ಪ್ರದರ್ಶನಕ್ಕಿರಿಸಿದ್ದ ಮಹೀದ್ರದ ನಿರ್ವಹಣಾ ನೆಕ್ಡ್ ಸ್ಟ್ರೀಟ್ ಬೈಕ್‌ನ ಲಾಂಚ್ ಹಲವಾರು ಕಾರಣಗಳಿಂದಾಗಿ ವಿಳಂಬವಾಗಿತ್ತು. ಇತ್ತೀಚೆಗಷ್ಟೇ ನಡೆದ 2014 ದೆಹಲಿ ಆಟೋ ಎಕ್ಸ್ ಪೋದಲ್ಲೂ ತನ್ನ ಸಾಮರ್ಥ್ಯ ಪ್ರದರ್ಶಿಸಿರುವ ಮಹೀಂದ್ರ, ನಿಕಟ ಭವಿಷ್ಯದಲ್ಲೇ ಮೊಜೊ ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

Mahindra Mojo

ಇದೀಗ ಲಭ್ಯವಿರುವ ಮಾಹಿತಿಗಳ ಪ್ರಕಾರ, ನಿರ್ಮಾಣ ಸಿದ್ಧ ಮಹೀಂದ್ರ ಮೊಜೊ ಬೈಕ್, ಜೂನ್ ತಿಂಗಳಲ್ಲಿ ವಿತರಕ ಕೇಂದ್ರವನ್ನು ತಲುಪಲಿದೆ. 295 ಸಿಸಿ ಲಿಕ್ವಿಡ್ ಕೂಲ್ಡ್ ಫ್ಯೂಯಲ್ ಇಂಜೆಕ್ಟಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿರುವ ಮೊಜೊ 27 ಬಿಎಚ್‌ಪಿ (25 ಎನ್‌‍ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ 6 ಸ್ಪೀಡ್ ಟ್ರಾನ್ಸ್‌ಮಿಷನ್ ಪಡೆದುಕೊಳ್ಳಲಿದೆ.

ಟ್ವಿನ್ ಹೆಡ್‌ಲೈಟ್, ಡೇಟೈಮ್ ರನ್ನಿಂಗ್ ಲೈಟ್ಸ್, ಪೈರಲಿ ಸ್ಪೋರ್ಟ್ ಡೈಮನ್ ಟೈರ್, ರಾಡಿಕಲ್ ಬ್ರೇಕ್ ಈ ಬೈಕಿನ ವಿಶೇಷತೆಯಾಗಿರಲಿದೆ. ಇನ್ನು ಬೈಕ್‌ನ ಟ್ರೇಡ್ ಮಾರ್ಕ್ ಎಂಬಂತೆ ಎಂಜಿನ್ ಮೇಲ್ಗಡೆಯಾಗಿ ಎರಡು ಬದಿಗಳಲ್ಲಿ ಸಮಾನಂತರವಾಗಿ ಚಿನ್ನದ ಬಣ್ಣದ ಬಾರ್ ಲಗತ್ತಿಸಲಾಗಿದೆ.

ಅಂದ ಹಾಗೆ ಮಹೀಂದ್ರ ಮೊಜೊ ಆನ್ ರೋಡ್ ದರ 2.25 ಲಕ್ಷ ರು. ಅಂದಾಜಿಸಲಾಗಿದೆ. ಇದು ಇನ್ನಷ್ಟೇ ಬಿಡುಗಡೆಯಾಗಲಿರುವ ಪಲ್ಸರ್ 400 ಸಿಎಸ್, ಕೆಟಿಎಂ ಡ್ಯೂಕ್ 390 ಹಾಗೂ ಸುಜುಕಿ ಇನಾಝುಮಾ 250 ಆವೃತ್ತಿಗಳಿಗೆ ಪ್ರತಿಸ್ಪರ್ಧಿಯಾಗುವ ಸಾದ್ಯತೆಯಿದೆ. ಅದೇ ಹೊತ್ತಿಗೆ ದೇಶದ ನಂ.1 ಸ್ಪೋರ್ಟ್ಸ್ ಬೈಕ್ ಪಲ್ಸರ್‌ಗೆ ಸೆಡ್ಡು ನೀಡಲು ತಯಾರಿ ನಡೆಸುತ್ತಿರುವ ಮಹೀಂದ್ರ ಪ್ರಸಕ್ತ ಸಾಲಿನಲ್ಲೇ 160 ಸಿಸಿ ಮಾದರಿ ರಸ್ತೆಗಿಳಿಸುವ ಸಾಧ್ಯತೆಯಿದೆ.

ಇಂದಿನ ಫೇಸ್‌ಬುಕ್ ವೀಡಿಯೋ

Post by DriveSpark.

English summary
In its final form, the Mojo will look almost identical to the one placed on display at the Expo. More than one version of the Mojo is expected to arrive in the market, differentiated by use of different colour schemes.
Story first published: Wednesday, April 9, 2014, 15:03 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark