ಸೆಂಚುರೊ ಕಮಾಲ್; ತಟಕ್ಕನೆ ಮೇಲೇರಿದ ಮಹೀಂದ್ರ ಸೇಲ್ಸ್
ಇತ್ತೀಚೆಗಿನ ಕೆಲವು ತಿಂಗಳು ಮಹೀಂದ್ರ ಟು ವೀಲರ್ಸ್ ಸಂಸ್ಥೆಯ ಪಾಲಿಗೆ ಶುಭಕರವಾಗಿ ಪರಿಣಮಿಸಿದೆ. ಈ ಪೈಕಿ ಮಾರುಕಟ್ಟೆಯಲ್ಲಿ ಸೆಂಚುರೊ ಪ್ರಯಾಣಿಕ ದ್ವಿಚಕ್ರ ವಾಹನ ಅತಿ ಹೆಚ್ಚು ಸದ್ದು ಮಾಡುತ್ತಿರುವುದು ಮಹೀಂದ್ರ ಮಾರಾಟ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದೆ.
ವರದಿಗಳ ಪ್ರಕಾರ ಸಂಸ್ಥೆಯು ಕಳೆದ ಡಿಸೆಂಬರ್ ತಿಂಗಳಲ್ಲಿ ಒಟ್ಟು 19.715 ಯುನಿಟ್ ಮಾರಾಟ ಕಂಡುಕೊಂಡಿದೆ. ಈ ಪೈಕಿ 19,054 ಯುನಿಟ್ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಸಾಧಿಸಿದೆ. ಇದು ಕಳೆದ ಬಾರಿಗೆ ಹೋಲಿಸಿದರೆ ಶೇಕಡಾ 267ರಷ್ಟು ಭರ್ಜರಿ ವರ್ಧನೆ ಕಂಡುಬಂದಿದೆ. ಅಲ್ಲದೆ ಗ್ರಾಹಕರಿಂದ ಬೇಡಿಕೆ ಹೆಚ್ಚಿರುವುದರ ಹಿನ್ನಲೆಯಲ್ಲಿ ಸೆಂಚುರೊ ನಿರ್ಮಾಣ ಸಾಮರ್ಥ್ಯವನ್ನು ಹೆಚ್ಚಿಸಲು ಕಂಪನಿ ನಿರ್ಧರಿಸಿದೆ.

ಮಹೀಂದ್ರ ಈಗಾಗಲೇ ಸರ್ವೀಸ್ ಪಾಯಿಂಟ್‌ಗಳ ಸಂಖ್ಯೆಯನ್ನು 1000ಕ್ಕೆ ಏರಿಸಿದೆ. ಇದು ಗ್ರಾಮೀಣ ಪ್ರದೇಶದಲ್ಲೂ ನೆರವಿಗೆ ಬರಲಿದೆ. ಈಗಾಗಲೇ ಲಾಂಚ್ ಆಗಿರುವ ಆರು ತಿಂಗಳೊಳಗೆ ಟಾಪ್ 10 ಬೈಕುಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ ಸೆಂಚುರೊ ಬಲದಿಂದ ಮಹೀಂದ್ರ ಟು ವೀಲರ್ಸ್ 2013ನೇ ಸಾಲನ್ನು ಯಶಸ್ಸಿನಿಂದ ಕೊನೆಗೊಳಿಸಿದೆ.
ನಿಮ್ಮ ಮಾಹಿತಿಗಾಗಿ, ಮಹೀಂದ್ರ ಸೆಂಚುರೊ ಎಂಸಿಐ-5 (ಮೈಕ್ರೋ ಚಿಪ್ ಇಗ್ನೈಟೆಡ್-5 ಕರ್ವ್) ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 8.5 ಬಿಎಚ್‌ಪಿ (8.5 ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ ಪ್ರತಿ ಲೀಟರ್‌ಗೆ 85.4 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ.
ಇದರಲ್ಲಿ ಆಂಟಿ ಥೆಫ್ಟ್ ಅಲಾರಂ, ಎಂಜಿನ್ ಮೊಬಿಲೈಜರ್, ರಿಮೋಟ್ ಪ್ಲಿಪ್ ಕೀ, ಫೈಂಡ್ ಮಿ ಲ್ಯಾಂಪ್, ಡಿಜಿಟಲ್ ಡ್ಯಾಶ್ ಬೋರ್ಡ್ ಜತೆ ಡಿಸ್ಟಾನ್ಸ್ ಟು ಎಮ್ಟಿ ಇಂಡಿಕೇಟರ್, ಸರ್ವೀಸ್ ರಿಮೈಂಡರ್ ಮತ್ತು ಎಕಾನಮಿ ಮೋಡ್ ಇಂಡಿಕೇಟರ್‌ಗಳಂತಹ ಅತ್ಯಾಧುನಿಕ ವೈಶಿಷ್ಟ್ಯಗಳಿವೆ. ಇವೆಲ್ಲವೂ ಸೇರಿ ದೆಹಲಿ ಎಕ್ಸ್ ಶೋ ರೂಂ ದರ 46,500 ರು.ಗಳಿಗೆ ಗ್ರಾಹಕರ ಕೈಸೇರಲಿದೆ.


Click it and Unblock the Notifications








