ಮಹೀಂದ್ರ ಬೈಕ್‌ಗಳಿಗೆ ಬೇಡಿಕೆ ಕುಸಿಯಿತೇ?
ನಿರಂತರ ಏರುಗತಿಯನ್ನು ಕಾಯ್ದುಕೊಂಡಿರುವ ಹೊರತಾಗಿಯೂ ಅದೇ ಆವೇಗ ಕಾಪಾಡಿಕೊಳ್ಳುವಲ್ಲಿ ಮಹೀಂದ್ರ ಟು ವೀಲರ್ಸ್ ವಿಫಲವಾಗುತ್ತಿದೆ. ಎರಡು ತಿಂಗಳ ಹಿಂದೆ ಶೇಕಡಾ 207ರಷ್ಟು ಏರಿಕೆ ದಾಖಲಿಸಿದ್ದ ಮಹೀಂದ್ರ ಸಂಸ್ಧೆಯು 2014 ಎಪ್ರಿಲ್ ತಿಂಗಳ ಮಾರಾಟದಲ್ಲಿ 15,845 ಯುನಿಟ್‌ಗಳ ಮಾರಾಟ ಕಂಡುಕೊಂಡಿದೆ.
ಈ ಮೂಲಕ ಮಹೀಂದ್ರ ಕಳೆದ ವರ್ಷಕ್ಕಿಂತಲೂ ಉತ್ತಮ ಮಾರಾಟ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರೂ ಕಳೆದ ತಿಂಗಳಿಗೆ ಹೋಲಿಸಿದರೆ ಏರುಗತಿಯಲ್ಲಿ ಸ್ವಲ್ಪ ಹಿನ್ನಡೆ ಅನುಭವಿಸಿದೆ.

ದೇಶೀಯ ಮಾರುಕಟ್ಟೆಯಲ್ಲಿ ಮಹೀಂದ್ರ 2014 ಎಪ್ರಿಲ್ ತಿಂಗಳಲ್ಲಿ 14,896 ಯುನಿಟ್ ಮಾರಾಟ ನಡೆಸಿದೆ. ಕಳೆದ ಬಾರಿಯಿದು 5,367 ಯುನಿಟ್‌ಗಳಾಗಿದ್ದವು. ಇದೇ ಅವಧಿಯಲ್ಲಿ 949 ಯುನಿಟ್ ರಫ್ತು ಕೂಡಾ ಮಾಡಿಕೊಂಡಿವೆ. ಈ ಮೂಲಕ ಒಟ್ಟಾರೆಯಾಗಿ ಉತ್ತಮ ಮಾರಾಟ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಸಂಸ್ಥೆಯ ಬೆಳವಣಿಗೆಯಲ್ಲಿ ಮಹೀಂದ್ರ ಸೆಂಚುರೊ ದೊಡ್ಡ ಪಾತ್ರ ವಹಿಸಿದೆ. ಆದರೆ ಕಳೆದ ಕೆಲವು ತಿಂಗಳುಗಳಿಗೆ ಮಾರಾಟ ಆವೇಗದಲ್ಲಿ ಕುಸಿತ ಕಾಣುತ್ತಿರುವುದು ಎಚ್ಚರಿಕೆ ಕರೆಗಂಟೆಯಾಗಿದೆ. ಈ ಹಂತದಲ್ಲಿ ಸೆಂಚುರೊ ಜಬಾಬ್ದಾರಿಯನ್ನು ಬೇರೆ ಮಾದರಿಗೆ ವರ್ಗಾಯಿಸಿಕೊಳ್ಳಬೇಕಾಗಿರುವುದು ಅತಿ ಅಗತ್ಯವೆನಿಸುತ್ತಿದೆ.


Click it and Unblock the Notifications








