ಹೊಸ ಮಹೀಂದ್ರ ಗಸ್ಟೊ ಸ್ಕೂಟರ್ ಬಿಡುಗಡೆ; ಬೆಲೆ 43,000 ರು.
ಬಹುನಿರೀಕ್ಷಿತ ಮಹೀಂದ್ರ ಗಸ್ಟೊ ಸ್ಕೂಟರ್ ಮಾರುಕಟ್ಟೆ ಪ್ರವೇಶವಾಗಿದೆ. ಇದರೊಂದಿಗೆ ಅತ್ಯಂತ ಲಾಭದಾಯಕ ಎಂಟ್ರಿ ಲೆವೆಲ್ ಸ್ಕೂಟರ್ ವಿಭಾಗದಲ್ಲಿ ಪೈಪೋಟಿಗೆ ಹೊಸ ವೇದಿಕೆ ಸಿದ್ಧವಾಗಲಿದೆ.
ಬೀಸುವ ಗಾಳಿಯ ಹೆಸರಿನಲ್ಲಿ ನಾಮಕರಣವಾಗಿರುವ ಹೊಸ ಗಸ್ಟೊ ಬೆಲೆ 43,000 ರು.ಗಳಿಂದ 47,000 ರು.ಗಳ ವರೆಗಿರಲಿದೆ. ಪ್ರಸ್ತುತ ಸ್ಕೂಟರ್ ಡಿಎಕ್ಸ್ ಮತ್ತು ವಿಎಕ್ಸ್‌ಗಳೆಂಬ ಎರಡು ಮಾದರಿಗಳಲ್ಲಿ ಲಭ್ಯವಿರಲಿದೆ.
ಮಹೀಂದ್ರ ಗಸ್ಟೊ ಡಿಎಕ್ಸ್: 43,000 ರು.
ಮಹೀಂದ್ರ ಗಸ್ಟೊ ವಿಎಕ್ಸ್: ರು. 47,000

ಮಹೀಂದ್ರ ಗಸ್ಟೊ ಡಿಎಕ್ಸ್ ಮಾದರಿಗಿಂತಲೂ ದುಬಾರಿಯಾಗಿರುವ ಗಸ್ಟೊ ವಿಎಕ್ಸ್ ಮಾದರಿಯಲ್ಲಿ ಎತ್ತರ ಹೊಂದಾಣಿಸಬಹುದಾದ ಸೀಟು, ರಿಮೋಟ್ ಪ್ಲಿಪ್ ಕೀ ಮತ್ತು ಫೈಮ್ ಮಿ ವೈಶಿಷ್ಟ್ಯಗಳು ಇರಲಿದೆ. ಇದರೊಂದಿಗೆ ಅತ್ಯಂತ ಕಡಿಮೆ ದರಗಳಲ್ಲಿ ಅತಿ ಹೆಚ್ಚಿನ ವೈಶಿಷ್ಟ್ಯಗಳನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ.
ಅಂದ ಹಾಗೆ ಮಹೀಂದ್ರ ಗಸ್ಟೊ ಸ್ಕೂಟರ್ 109.6 ಸಿಸಿ ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ 4 ಸ್ಟ್ರೋಮ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು (ಎಂ-ಟೆಕ್ ಎಂಜಿನ್ ತಂತ್ರಜ್ಞಾನ), 8 ಅಶ್ವಶಕ್ತಿ (8.5 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು 10.3 ಸೆಕೆಂಡುಗಳಲ್ಲೇ ಗಂಟೆಗೆ 0-60 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ.
ಇನ್ನು ಭಾರತ ವಾಹನ ಅಧ್ಯಯನ ಸಂಸ್ಥೆಯ ಮಾನ್ಯತೆಯ ಪ್ರಕಾರ ಹೊಸ ಗಸ್ಟೊ ಪ್ರತಿ ಲೀಟರ್‌ಗೆ 63 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ನೂತನ ಗಸ್ಟೊ ಮುಖಾಂತರ ಮಹೀಂದ್ರ ಸಂಸ್ಥೆಯು ಇಟಲಿಯ ಸ್ಟೈಲಿಂಗ್ ಅನುಸರಿಸಿದೆ.
ಇದು ಎಲ್‌ಇಡಿ ಪೈಲಟ್ ಲೈಟ್, ಸ್ಮಾರ್ಟ್ ಕೀ ಜೊತೆ ಫೈಮಿ ಮಿ ಲೈಟ್ ಫಂಕ್ಷನ್ ಮತ್ತು ಗೈಡ್ ಮಿ ಲೈಟ್ ಫಂಕ್ಷನ್, ಸೀಟು ಲಾಕ್, ಕಿಕ್ ಸ್ಟಾರ್ ಲಿವರ್, ಸುಲಭವಾಗಿ ನಿಭಾಯಿಸಬಹುದಾದ ಸ್ಟೋರೆಜ್ ಪೊಕೆಡ್ ಮುಂತಾದ ವೈಶಿಷ್ಟ್ಯಗಳು ಲಭ್ಯವಿರಲಿದೆ.

ಎಂಜಿನ್: 109.6 ಸಿಸಿ, 4 ಸ್ಟ್ರೋಕ್, ಏರ್ ಕೂಲ್ಡ್
ಪವರ್: 8 ಅಶ್ವಶಕ್ತಿ
ಟಾರ್ಕ್: 8.5 ಎನ್‌ಎಂ
ಗರಿಷ್ಠ ವೇಗತೆ: 80 km/h
ಟ್ರಾನ್ಸ್‌ಮಿಷನ್: ಸಿವಿಟಿ
ಮೈಲೇಜ್: 63 km/l
ಫ್ರೇಮ್: ಅಂಡರ್ ಬಾರ್ಡ್ ಟೈಪ್ (ಸ್ಟೀಲ್)- ಟ್ಯೂಬುಲರ್
ಸಸ್ಪೆಷನ್:
ಫ್ರಂಟ್ - ಟೆಲಿಸ್ಕಾಪಿಕ್, ಹೈಡ್ರಾಲಿಕ್ ವಿಧ
ರಿಯರ್ - ಕಾಯಿಲ್ ವಿಧ, ಹೈಡ್ರಾಲಿಕ್
ಚಕ್ರಗಳು
ಫ್ರಂಟ್ - (90/90-12), ಟ್ಯೂಬ್‌ಲೆಸ್
ರಿಯರ್ - (90/90-12), ಟ್ಯೂಬ್‌ಲೆಸ್
ಬ್ರೇಕ್:
ಫ್ರಂಟ್ - 130 mm ಡ್ರಮ್
ರಿಯರ್ - 130 mm ಡ್ರಮ್

ಆಯಾಮ (ಉದ್ದ x ಅಗಲ x ಎತ್ತರ x ವೀಲ್‌ಬೇಸ್):
1825 mm x 697 mm x 1188 mm x 1275 mm
ಚಾಲನ ಎತ್ತರ:
ವಿಎಕ್ಸ್- 770 mm or 735 mm
ಡಿಎಕ್ಸ್- 770 mm
ಗ್ರೌಂಡ್ ಕ್ಲಿಯರನ್ಸ್: 165 mm
ಇಂಧನ ಟ್ಯಾಂಕ್ ಸಾಮರ್ಥ್ಯ: 6 ಲೀಟರ್
ಬ್ಯಾಟರಿ:
ವಿಎಕ್ಸ್- 6AH, VRLA
ಡಿಎಕ್ಸ್- 4AH, VRLA


Click it and Unblock the Notifications








