ಚಹಾ ಮತ್ತು ಪಕೋಡಗಾಗಿ ಒಂದು ಬೈಕ್ ಸವಾರಿ

By Nagaraja

ಕಳೆದ ಭಾನುವಾರ ಸೋಷಿಯಲ್ ಮೀಡಿಯಾ ವೀಕ್ ಸಹಭಾಗಿತ್ವದಲ್ಲಿ ಇಂಡಿಯಾ ಬೈಕ್ ವೀಕ್ ಅತಿ ವಿಶೇಷವಾದ 'ಚಾಯ್ ಮತ್ತು ಪಕೋಡ' ಮುಂಬೈ ಆವೃತ್ತಿಯ ಬೈಕ್ ಚಾಲನೆಯನ್ನು ಹಮ್ಮಿಕೊಂಡಿತ್ತು.

ಇದೇನು ಮಹಾ ಅತೀರಾ? ಏಕೆಂದರೆ ಹೆಸರು ಕೇಳಿದೇ ತಡ 500ಗಿಂತಲೂ ಹೆಚ್ಚು ಸವಾರರು ಚಾಯ್ ಮತ್ತು ಪಕೋಡ ಅಭಿಯಾನದಲ್ಲಿ ಭಾಗವಹಿಸುವ ಮೂಲಕ ನೆರೆದಿದ್ದವರ ಗಮನ ಸೆಳೆದರು.


ನಿಮಗೆಲ್ಲರಿಗೂ ತಿಳಿದಿರುವಂತೆಯೇ ದೇಶದ ಅತಿ ದೊಡ್ಡ ಬೈಕ್ ಹಬ್ಬವಾಗಿರುವ ಇಂಡಿಯಾ ಬೈಕ್ ವೀಕ್ ಆಯೋಜನೆಗೆ ದಿನಗಣನೆ ಆರಂಭವಾಗಿದೆ. ಇನ್ನೊಂದೆಡೆ ಇಂಡಿಯಾ ಬೈಕ್ ವೀಕ್ ಅಂಗವಾಗಿ ಆಯೋಜನೆಯಾಗುತ್ತಿರುವ 'ನ್ಯಾಷನಲ್ ಸೇಫ್ಟಿ ರೈಡ್' ಈಗಾಗಲೇ 5,000 ಕೀ.ಮೀ. ಕ್ರಮಿಸಿದ್ದು, ಕೋಲ್ಕತ್ತಾ ನಗರವನ್ನು ಪ್ರವೇಶಿಸಿದೆ.

ಈ ನಡುವೆ ವಿಶೇಷವಾದ ಚಾಯ್ ಆಂಡ್ ಪಕೋಡ ವಿಶೇಷ ಚಾಲನೆಯನ್ನು ಮುಂಬೈ ಉಪನಗರವಾಗಿರುವ ಪರ್ಸಿ ಡಾ ದಾಬಾದಲ್ಲಿ ಏರ್ಪಡಿಸಲಾಗಿತ್ತು. ಇದು ಮುಂಬೈನಿಂದ 150 ಕೀ.ಮೀ. ದೂರದ ರಾಷ್ಟ್ರೀಯ ಹೆದ್ದಾರಿ 8ರಲ್ಲಿ ಸ್ಥಿತಗೊಂಡಿದೆ.

IBW Chai And Pakoda Ride

ಎಲ್ಲ ಬೈಕ್ ಉತ್ಸಾಹಿಗಳನ್ನು ಒಂದುಗೂಡಿಸುವುದು ಚಾಯ್ ಆಂಡ್ ಪಕೋಡ ಚಾಲನೆಯ ಉದ್ದೇಶವಾಗಿತ್ತು. ಇಲ್ಲಿ ನಿಮ್ಮ ಬಳಿ ಯಾವ ಬೈಕ್ ಇದೆ ಎಂಬುದು ಮುಖ್ಯವಲ್ಲ. ಬದಲಾಗಿ ಪಲ್ಸರ್‌ನಿಂದ ಹಿಡಿದು, ಹರ್ಲಿ ಡೇವಿಡ್ಸನ್, ಕೆಟಿಎಂ, ಟ್ರಯಂಫ್ ಅಷ್ಟೇ ಯಾಕೆ ಸೂಪರ್ ಬೈಕ್ ಪ್ರೇಮಿಗಳು ಸಹ ಭಾಗವಹಿಸಿದ್ದರು.

ತಮ್ಮ ಮಕ್ಕಳು, ಕಚೇರಿ ಸಹೋದ್ಯೋಗಿಗಳು ಮತ್ತು ಸ್ನೇಹಿತರೊಂದಿಗೆ ಭಾಗವಹಿಸಿದ್ದ ಸವಾರರು ಉಪಹಾರ ಸೇವಿಸುವ ಮೂಲಕ ಸಂಭ್ರಮಿಸಿದರು. ಇದೇ ವೇಳೆ ಇಂಡಿಯಾ ಬೈಕ್ ವೀಕ್ 2015 ಟಿಕೆಟ್ ಮಾರಾಟವು ಅಕ್ಟೋಬರ್ 7ರಿಂದ ಆರಂಭವಾಗಲಿದೆ ಎಂಬುದನ್ನು ಘೋಷಣೆ ಮಾಡಲಾಗಿತ್ತು.

More from DriveSpark

Article Published On: Wednesday, September 24, 2014, 14:07 [IST]
English summary
The Mumbai edition of the Chai and Pakoda ride saw over 500 bikers participate on Sunday morning. India Bike Week, India's largest motorcycle festival, organized the gathering, in association with Social Media Week.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+