ಪಿಯಾಜಿಯೊದಿಂದ 'ವೆಸ್ಪಾ ಕೇರ್' ಕಾರ್ಯಕ್ರಮಕ್ಕೆ ಚಾಲನೆ

By Nagaraja

ಇಟಲಿ ಮೂಲದ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯಾಗಿರುವ ಪಿಯಾಜಿಯೊ, ತನ್ನ ಕ್ಲಾಸಿಕ್ ವೆಸ್ಪಾ ಸ್ಕೂಟರ್ ಬ್ರಾಂಡ್ ಅನ್ನು ಭಾರತದಲ್ಲೂ ಮಾರಾಟ ಮಾಡುತ್ತಿದೆ. ಅಷ್ಟೇ ಅಲ್ಲದೆ ವೆಸ್ಪಾ ಪ್ರೀಮಿಯಂ ಸ್ಕೂಟರ್‌ಗಳಿಗೆ ದೇಶದ ಗ್ರಾಹಕರಿಂದ ಉತ್ತಮ ಮನ್ನಣೆ ಕೂಡಾ ವ್ಯಕ್ತವಾಗಿದೆ.

ಹಾಗಿರುವಾಗ ತನ್ನ ಗ್ರಾಹಕ ಅನುಭವವನ್ನು ಇನ್ನಷ್ಟು ಭದ್ರವಾಗಿಸುವ ಇರಾದೆ ಹೊಂದಿರುವ ಇಟಲಿಯ ಪಿಯಾಜಿಯೊ ಸಂಸ್ಥೆಯು, ದೇಶದೆಲ್ಲೆಡೆ 'ವೆಸ್ಪಾ ಕೇರ್' ರಸ್ತೆ ಬದಿಯ ಸಹಾಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ.

vespa

ವೆಸ್ಪಾ ಸ್ಕೂಟರ್ ಖರೀದಿ ಮಾಡಿದ ಗ್ರಾಹಕರು ಈ ಸೇವೆಯ ಪ್ರಯೋಜನವನ್ನು ಪಡೆಯಬಹುದಾಗಿದೆ. ಸಂಸ್ಥೆಯ ಪ್ರಕಾರ ವರ್ಷದ ಉದ್ದಕ್ಕೂ ದಿನದ 24 ಗಂಟೆಗೂ ವೆಸ್ಪಾ ಕೇರ್ ಸೇವೆ ಲಭ್ಯವಾಗಲಿದೆ.

ದೇಶದ 51 ನಗರಗಳಲ್ಲಿ ವೆಸ್ಪಾ ಕೇರ್ ರೋಡ್ ಸೈಡ್ ಅಸಿಸ್ಟನ್ಸ್ ಕಾರ್ಯಕ್ರಮವನ್ನು ತೆರೆಯಲಾಗಿದೆ. ಇಲ್ಲಿ ಪಿಯಾಜಿಯೊದಿಂದ ತರಬೇತಿ ಪಡೆದ ನುರಿತ ವೃತ್ತಿಪರರು ಸಮಸ್ಯೆಗೀಡಾದ ವೆಸ್ಪಾ ಸ್ಕೂಟರನ್ನು ಪರಿಶೀಲಿಸಲಿದ್ದಾರೆ.

ಪ್ರಸ್ತುತ ತಂಡವು ಅಗತ್ಯ ಬಂದ್ದಲ್ಲಿ ಆ ನಿರ್ದಿಷ್ಠ ಜಾಗಕ್ಕೆ ತೆರಳಿ ಇಂಧನ ಕೂಡಾ ಪೂರೈಸಲಿದ್ದಾರೆ. ಹಾಗೆಯೇ ವೆಸ್ಪಾ ಮಾಲಿಕರು ಕೀ ಕಳೆದುಕೊಂಡಲ್ಲಿ ಬದಲಿ ಕೀಲಿಯ ವ್ಯವಸ್ಥೆ ಕೂಡಾ ಮಾಡಲಿದ್ದಾರೆ.

More from DriveSpark

Article Published On: Monday, October 13, 2014, 12:30 [IST]
English summary
Piaggio initiated Vespa Care road side assistance program
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+