ಸದ್ಯದಲ್ಲೇ ವೆಸ್ಪಾ ಎಲೆಗಂಟ್ ಸ್ಕೂಟರ್ ಬಿಡುಗಡೆ
ತನ್ನ ಸ್ಟೈಲಿಶ್ ಸ್ಕೂಟರ್‌ಗಳಿಂದ ಯುವ ಮನಸ್ಕರ ಮನ ಗೆದ್ದಿರುವ ಇಟಲಿ ಮೂಲದ ಪಿಯಾಜಿಯೊ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯು, ನಿರಂತರ ಅಂತರಾಳದಲ್ಲಿ ದೇಶದ ಮಾರುಕಟ್ಟೆಗೆ ವೆಸ್ಪಾ ಮಾದರಿಗಳ ಸ್ಕೂಟರುಗಳನ್ನು ಪರಿಚಯಿಸುತ್ತಿದೆ. ಇದರ ಮುಂದುವರಿದ ಭಾಗವೆಂಬಂತೆ ವೆಸ್ಪಾ ಎಲೆಗಂಟ್ ಸ್ಕೂಟರನ್ನು ಮುಂಬರುವ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡುವ ಯೋಜನೆ ಹೊಂದಿದೆ.
ನಿಮ್ಮ ಮಾಹಿತಿಗಾಗಿ, ಇದುವರೆಗೆ ವೆಸ್ಪಾ ಮೂರು ಮಾದರಿಗಳನ್ನು ದೇಶಕ್ಕೆ ಪರಿಚಯಿಸಿದೆ. ಅವುಗಳೆಂದರೆ ವೆಸ್ಪಾ ವಿಎಕ್ಸ್, ಎಸ್ ಮತ್ತು ಸೀಮಿತ ಆವೃತ್ತಿಯ ಎಕ್ಸ್‌ಕ್ಲೂಸಿವ್ ಆಗಿದೆ.

ಇದೀಗ ಆಗಮನವಾಗಲಿರುವ ನಾಲ್ಕು ವೆಸ್ಪಾ ಮಾದರಿಯು ಇಟಲಿಯ ಐಕಾನಿಕ್ ಸಂಸ್ಥೆಯ ಸಾಂಪ್ರದಾಯಿಕ ವಿನ್ಯಾಸವನ್ನು ಕಾಪಾಡಿಕೊಂಡಿದೆ. ಅಲ್ಲದೆ ಆಧುನಿಕ ತಂತ್ರಜ್ಞಾನವನ್ನು ಆಳವಡಿಸಲಾಗಿದೆ.
ನೂತನ ವೆಸ್ಪಾ ಎಲೆಗಂಟ್ ಸ್ಕೂಟರನ್ನು 125 ಸಿಸಿ ಏರ್ ಕೂಲ್ಡ್ ಎಂಜಿನ್ ಆಳವಡಿಸಲಾಗುವುದು. ಇದು 9.91 ಅಶ್ವಶಕ್ತಿ (10.6 ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಅಂತೆಯೇ ನಿರಂತರ ವೆರಿಯಬಲ್ ಟ್ರಾನ್ಸ್‌ಮಿಷನ್ ಸಹ ಇರಲಿದೆ.
ಹೊಸತಾದ ವೆಸ್ಪಾ ಎಲೆಗಂಟ್ ತನ್ನದೇ ಆದ ವಿಶಿಷ್ಟ ತ್ರಿಕೋನಾಕೃತಿಯ ಹೆಡ್ ಲೈಟ್ ಪಡೆದುಕೊಳ್ಳಲಿದೆ. ಅಲ್ಲದೆ ಅತ್ಯಧಿಕ ಕ್ರೋಮ್ ಸ್ಪರ್ಶ ನೀಡಲಾಗಿದೆ. ಇನ್ನುಳಿದಂತೆ ಡಿಸ್ಕ್ ಬ್ರೇಕ್ ಸ್ಟಾಂಡರ್ಡ್ ಆಗಿ ದೊರಕಲಿದೆ. ಅಂತೆಯೇ ಟ್ಯೂಬ್‌ಲೆಸ್ ಚಕ್ರವು ಹೆಚ್ಚಿನ ಸ್ಥಿರತೆ ಹಾಗೂ ಗ್ರಿಪ್ ನೀಡುವಲ್ಲಿ ಯಶಸ್ವಿಯಾಗಲಿದೆ. ಇವೆಲ್ಲದರ ಜೊತೆಗೆ ಮಲ್ಟಿ ಸ್ಪೋಕ್ ಅಲಾಯ್ ವೀಲ್‌ಗಳು ಸಹ ಇರಲಿದೆ. ಅಂತಿಮವಾಗಿ ನೀಲಿ, ಬಿಳಿ ಹಾಗೂ ಹಳದಿ ಬಣ್ಣಗಳಲ್ಲಿ ಆಗಮನವಾಗಲಿದೆ.


Click it and Unblock the Notifications








