ಹಾರ್ಲೆ ರಾಕ್ ರೈಡರ್ಸ್‌ನಲ್ಲಿ ಮಿಂಚಲಿರುವ ರಜಪೂತನ ಕಸ್ಟಮ್ಸ್

By Nagaraja

ಈ ಬಾರಿಯ ಹಾರ್ಲೆ ರಾಕ್ ರೈಡರ್ಸ್ ಆವೃತ್ತಿಯು ಹಲವಾರು ಕಾರಣಗಳಿಂದಾಗಿ ಗಮನಾರ್ಹವೆನಿಸಲಿದೆ. ಏಕೆಂದರೆ ಈ ಬಾರಿಯ ಹಾರ್ಲೆ ರಾಕ್ ರೈಡರ್ಸ್ ಐದನೇ ಆವೃತ್ತಿಯಲ್ಲಿ ವಿಶೇಷ ಕಸ್ಟಮೈಸ್ಡ್ ಬೈಕ್‌ವೊಂದು ಪ್ರದರ್ಶನಗೊಳ್ಳಲಿದೆ.

ಹೌದು, 2014 ನವೆಂಬರ್ 15 ಹಾಗೂ 16ರಂದು ಸಾಗಲಿರುವ ಹರ್ಲಿ ಡೇವಿಡ್ಸನ್ ರೈಡರ್ಸ್ ಸೀಸನ್ 5ರಲ್ಲಿ ರಜಪೂತನ ಕಸ್ಟಮ್ಸ್ ಸಂಸ್ಥೆಯು ತನ್ನ ಚೊಚ್ಚಲ ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ 750 ಕಸ್ಟಮೈಸ್ ಮಾದರಿಯನ್ನು ಪರಿಚಯಗೊಳಿಸಲಿದೆ.


ನಿಮ್ಮ ಮಾಹಿತಿಗಾಗಿ ರಜಪೂತನ ಕಸ್ಟಮ್ಸ್, ಭಾರತದಲ್ಲಿ ಹರ್ಲಿ ಬೈಕ್‌ಗಳನ್ನು ಪುನರ್ ನಿರ್ಮಾಣಗೊಳಿಸುವ ಏಕಮಾತ್ರ ಸ್ವತಂತ್ರ ಸಂಸ್ಥೆಯಾಗಿದೆ. ನಿಸ್ಸಂಶವಾಗಿಯೂ ಇದು ಹರ್ಲಿ ಸ್ಟ್ರೀಟ್ 750 ವಾಹನ ಪ್ರೇಮಿಗಳ ಗಮನ ಸೆಳೆಯಲಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಹಳೆಯ ಹಾರ್ಲೆ ಬೈಕ್‌ಗಳಿಂದ ಸ್ಪೂರ್ತಿ ಪಡೆದು ಇದನ್ನು ರಚಿಸಲಾಗಿದೆ.

ಈ ಸಂದರ್ಭದಲ್ಲಿ ಹಾರ್ಲೆಯಿಂದ ಇಂತಹದೊಂದು ಅವಕಾಶ ಸಿಕ್ಕಿರುವುದಕ್ಕೆ ಧನ್ಯವಾದ ಸಲ್ಲಿಸಿರುವ ರಜಪೂತ ಕಸ್ಟಮ್ಸ್‌ನ ವಿಜಯ್ ಸಿಂಗ್, "ಸ್ವತಂತ್ರ ಬೈಕ್ ನಿರ್ಮಿಸುವ ನಮ್ಮಂತವರಿಗೆ ಇಂದೊಂದು ಉತ್ತಮ ವೇದಿಕೆಯಾಗಿದ್ದು, ನಮ್ಮ ಕೌಶಲ್ಯವನ್ನು ತೋರ್ಪಡಿಸಲಿದ್ದೇವೆ" ಎಂದಿದ್ದಾರೆ.

Harley Davidson Forty Eight

"ಹಾರ್ಲೆ 750 ಸ್ಟ್ರೀಟ್ ಮೋಟಾರ್‌ಸೈಕಲ್‌ಗಳನ್ನು ಕಸ್ಟಮೈಸ್ ಮಾಡಲು ಅನೇಕ ಅವಕಾಶಗಳಿವೆ. ಇದಕ್ಕೆ ಮತ್ತಷ್ಟು ಅಂದತೆಯನ್ನು ನೀಡಲು ಶ್ರಮಿಸಲಿದ್ದೇನೆ" ಎಂದಿದ್ದಾರೆ.

ಅಂದ ಹಾಗೆ ಇದು ಮೊದಲ ಬಾರಿಯೇನಲ್ಲ ವಿಜಯ್ ಇಂತಹದೊಂದು ಪ್ರಯತ್ನಕ್ಕೆ ಮುನ್ನುಗ್ಗುತ್ತಿರುವುದು. ಈ ಹಿಂದೆ ಹಾರ್ಲೆ ಫೋರ್ಟಿ ಎಯ್ಟ್ ಮತ್ತು ಹಾರ್ಲೆ ಐಯಾನ್ 883 ಮೋಟಾರ್‌ಸೈಕಲ್ ಸಹ ಮಾರ್ಪಾಡುಗೊಳಿಸಿದ್ದರು.

Article Published On: Wednesday, October 29, 2014, 9:28 [IST]
English summary
Motorcycle enthusiasts are in for a treat during Harley Rock Riders-Season 5, which is due to take place on the 15th and 16th of November this year, with Rajputana Customs showcasing their first ever Harley-Davidson Street 750. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+