ರಾಯಲ್ ಎನ್‌ಫೀಲ್ಡ್ ಸವಾರಿ; ಶೇ. 65ರಷ್ಟು ಮಾರಾಟ ವೃದ್ಧಿ
ದೇಶದ ನಂ.1 ಬುಲೆಟ್ ತಯಾರಿಕ ಸಂಸ್ಥೆಯಾಗಿರುವ ಚೆನ್ನೈ ಮೂಲದ ರಾಯಲ್ ಎನ್‌ಫೀಲ್ಡ್, 2014 ಸೆಪ್ಟೆಂಬರ್ ತಿಂಗಳ ಮಾರಾಟದಲ್ಲಿ ಶೇಕಡಾ 65ರಷ್ಟು ಭರ್ಜರಿ ಏರಿಕೆ ದಾಖಲಿಸಿದೆ.
ದೇಶದ ಅತಿ ನಂಬಿಕೆಗ್ರಸ್ಥ ಮೋಟಾರ್‌ಸೈಕಲ್ ಸಂಸ್ಥೆಗಳಲ್ಲಿ ಒಂದಾಗಿರುವ ರಾಯಲ್ ಎನ್‌ಫೀಲ್ಡ್, ಕಳೆದ ತಿಂಗಳುಗಳಿಂದ ಮಾರಾಟ ಏರುಗತಿ ದಾಖಲಿಸುವಲ್ಲಿ ಯಶಸ್ವಿಯಾಗಿತ್ತು. ಅಲ್ಲದೆ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿರುವುದು ಮಾರಾಟದಲ್ಲೂ ಪ್ರತಿಫಲಿಸಿದೆ ಅಂದರೆ ತಪ್ಪಾಗಲಾರದು.

ರಾಯಲ್ ಎನ್‌ಫೀಲ್ಡ್ ಸಂಸ್ಥೆಯು 2014 ಸೆಪ್ಟೆಂಬರ್ ತಿಂಗಳಲ್ಲಿ ಒಟ್ಟು 28,020 ಯುನಿಟ್‌ಗಳ ಮಾರಾಟ ದಾಖಲಿಸಿದೆ. ಕಳೆದ ವರ್ಷವಿದು 17,005 ಯುನಿಟ್‌ಗಳಾಗಿತ್ತು. ಈ ಮೂಲಕ ಶೇಕಡಾ 65ರಷ್ಟು ವೃದ್ಧಿ ದಾಖಲಿಸಿದೆ.
ಇತ್ತೀಚೆಗಷ್ಟೇ ಜಾಗತಿಕ ಹಂತದ ವರೆಗೂ ತನ್ನ ವ್ಯಾಪ್ತಿ ವಿಸ್ತರಿಸಿದ್ದ ರಾಯಲ್ ಎನ್‌ಫೀಲ್ಡ್, ಸೆಪ್ಟೆಂಬರ್ ತಿಂಗಳಲ್ಲಿ 480 ಯುನಿಟ್‌ಗಳನ್ನು ರಫ್ತು ಮಾಡಿದೆ. ಕಳೆದ ಬಾರಿಯಿದು 463 ಯುನಿಟ್‌ಗಳಾಗಿತ್ತು. ಭಾರತದಲ್ಲಿ ಮಾತ್ರವಾಗಿ ಸಂಸ್ಥೆಯು 27540 ಯುನಿಟ್‌ಗಳ ಮಾರಾಟ ದಾಖಲಿಸಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಈ ಸಂಖ್ಯೆ 16,542 ಯುನಿಟ್‌ಗಳಾಗಿತ್ತು.


Click it and Unblock the Notifications