ನಿರ್ಮಾಣ ಸಾಮರ್ಥ್ಯ ಹೆಚ್ಚಿಸಲಿರುವ ರಾಯಲ್ ಎನ್‌ಫೀಲ್ಡ್

By Nagaraja

ಭಾರತದ ಐಕಾನಿಕ್ ಮೋಟಾರುಸೈಕಲ್ ಬ್ರಾಂಡ್ ಆಗಿರುವ ರಾಯಲ್ ಎನ್‌ಫೀಲ್ಡ್, ಎರಡು ಕಾರಣಗಳಿಗಾಗಿ ಹೆಚ್ಚು ಜನಪ್ರಿಯತೆ ಹಾಗೂ ಅಷ್ಟೇ ಅಪಖ್ಯಾತಿಗೂ ಒಳಗಾಗಿತ್ತು. ಮೊದಲಯನೇದಾಗಿ ದೇಶದ ನಂಬರ್ ವನ್ ಬುಲೆಟ್ ಒಂಬ ಪ್ರಖ್ಯಾತಿ ಗಿಟ್ಟಿಸಿಕೊಂಡಿದ್ದರೆ ವಿಪರೀತ ಕಾಯುವಿಕೆ ಅವಧಿಯಿಂದಾಗಿ ಗ್ರಾಹಕರಲ್ಲಿ ಬೇಸರಕ್ಕೆ ಕಾರಣವಾಗಿತ್ತು.

ಈ ಎಲ್ಲ ಸಮಸ್ಯೆಗಳನ್ನು ಕೊನೆಗೂ ಆಲಿಸಿಕೊಂಡಿರುವ ಇಚಾರ್ ಮೋಟಾರ್ಸ್ (Eicher Motors), ಜನಪ್ರಿಯ ರಾಯಲ್ ಎನ್‌ಫೀಲ್ಡ್ ನಿರ್ಮಾಣ ಸಾಮರ್ಥ್ಯ ಹೆಚ್ಚಿಸಲು ನಿರ್ಧರಿಸಿದೆ.


ಇದೀಗ ಬಂದಿರುವ ವರದಿಗಳ ಪ್ರಕಾರ, ಬರೋಬ್ಬರಿ 600 ಕೋಟಿ ರುಪಾಯಿಗಳನ್ನು ಹೂಡಿಕೆ ಮಾಡಲಿರುವ ಇಚಾರ್ ಮೋಟಾರ್ಸ್, ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ಈ ಮೂಲಕ ಕಾಯುವಿಕೆ ಅವಧಿಯನ್ನು ಗಣನೀಯವಾಗಿ ಇಳಿಕೆ ಮಾಡಲಿದೆ.

ಪ್ರಸ್ತುತ ರಾಯಲ್ ಎನ್‌ಫೀಲ್ಡ್ ಎರಡು ಘಟಕಗಳನ್ನು ಹೊಂದಿದೆ. ಇವೆರಡು ತಮಿಳುನಾಡಿನ ತಿರುವೋಟ್ಟಿಯೂರ್ ಹಾಗೂ ಓರಗಡಂನಲ್ಲಿ ಸ್ಥಿತಗೊಂಡಿದೆ. ಇದರಂತೆ ಮುಂದಿನ ಎರಡು ವರ್ಷಗಳಲ್ಲಿ ಇವೆರಡು ಘಟಕಗಳಿಗೆ ಯೋಜನಬದ್ಧವಾಗಿ ಹೂಡಿಕೆ ಮಾಡಲಿದೆ.

Royal Enfield

ಹಾಗೆ ನೋಡಿದರೆ ಓರಗಡಂ ಘಟಕದ ಆರಂಭದ ಬಳಿಕ ಎನ್‌ಫೀಲ್ಡ್ ಕಾಯುವಿಕೆ ಅವಧಿಯಲ್ಲಿ ಇಳಿಕೆ ಕಂಡುಬಂದಿತ್ತು. ಪ್ರಸ್ತುತ ಬೃಹತ್ ಹೂಡಿಕೆಯಿಂದ ವೇಟಿಂಗ್ ಪಿರೀಡ್‌ನಲ್ಲಿ ಎಷ್ಟು ಪ್ರಮಾಣದ ಇಳಿಕೆಯುಂಟಾಗಲಿದೆ ಎಂಬುದಕ್ಕೆ ಸಂಸ್ಥೆಯಿಂದ ಯಾವುದೇ ಮಾಹಿತಿ ಬಂದಿಲ್ಲವಾದರೂ ಗಣನೀಯವಾದ ಕುಸಿತವುಂಟಾಗಲಿದೆ ಎಂಬುದು ಮಾತ್ರ ತಿಳಿದು ಬಂದಿದೆ. ಅಂದರೆ ಬುಕ್ಕಿಂಗ್ ಮಾಡಿದ ಒಂದು ತಿಂಗಳೊಳಗೆ ಬುಲೆಟ್ ಕೈಗೆಟಲಿದೆ ಎಂಬ ಬಗ್ಗೆಯೂ ಮಾಹಿತಿಯಿದೆ.

ದೇಶೀಯ ಮಾರುಕಟ್ಟೆಯಲ್ಲಿ ಯಾವುದೇ ನಿಖರ ಎದುರಾಳಿ ಇಲ್ಲದಿರುವುದು ಎನ್‌ಫೀಲ್ಡ್ ಬೈಕ್‌ಗಳನ್ನು ಇನ್ನಷ್ಟು ವಿಶಿಷ್ಟವಾಗಿಸಿತ್ತು. ಹಾಗಿದ್ದರೂ ತಮ್ಮ ಬ್ರಾಂಡ್ ಲಾಭ ಹೆಚ್ಚಿಸುಕೊಳ್ಳುವಲ್ಲಿ ಸಂಸ್ಥೆ ವಿಫಲವಾಗಿತ್ತು. ಈ ಎಲ್ಲ ಪರಿಸ್ಥಿತಿಯಲ್ಲೂ ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನ ಒದಗಿಸಲು ಸದಾ ಬದ್ಧತೆ ಪ್ರದರ್ಶಿಸಿತ್ತು.

ಆದರೆ ಇದೀಗ ಬದಲಾದ ಮಾರುಕಟ್ಟೆ ಪರಿಸ್ಥಿತಿಯಲ್ಲಿ ಹೊಸ ಸ್ಪರ್ಧಿಗಳ ಪ್ರವೇಶವಾಗಿದೆ. ಅಮೆರಿಕ ಹಾಗೂ ಬ್ರಿಟನ್ ಬ್ರಾಂಡ್‌ಗಳಾದ ಹರ್ಲಿ ಡೇವಿಡ್ಸನ್ ಹಾಗೂ ಟ್ರಯಂಪ್ ಬೈಕ್‌ಗಳು ಈಗಾಗಲೇ ದೇಶದಲ್ಲಿ ತನ್ನ ಹವಾ ಪಸರಿಸುತ್ತಿದೆ. ಇದರಿಂದಾಗಿ ಆರಂಭದಲ್ಲೇ ಎಚ್ಚೆತ್ತುಕೊಂಡಿರುವ ಎನ್‌ಫೀಲ್ಡ್, ನಿರ್ಮಾಣ ಸಾಮರ್ಥ್ಯಕ್ಕೆ ಉತ್ತೇಜನ ನೀಡುವ ಮೂಲಕ ಇನ್ನಷ್ಟು ಗ್ರಾಹಕರನ್ನು ಸೆಳೆಯುವ ಪ್ರಯತ್ನದಲ್ಲಿದೆ.

More from DriveSpark

Article Published On: Friday, May 30, 2014, 18:17 [IST]
English summary
Royal Enfield is currently owned by Eicher Motors who has decided to boost the production of the iconic motorcycle. They will be investing approximately INR 600 crore in an effort to decrease the waiting period for its buyers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+