ಟೈಗರ್ ವುಡ್ಸ್‌ರಿಂದ ಹೀರೊ ಎಕ್ಸ್‌ಟ್ರೀಮ್ ಸ್ಪೋರ್ಟ್ಸ್ ಅನಾವರಣ

By Nagaraja

ಹೀರೊ ಮೊಟೊಕಾರ್ಪ್ ಜೊತೆ ಜಾಗತಿಕ ಕಾರ್ಪೋರೇಟ್ ಪಾಟ್ನರ್ ಒಪ್ಪಂದಕ್ಕೆ ಸಹಿ ಹಾಕಿರುವ 14 ಬಾರಿಯ ಗಾಲ್ಪ್ ವಿಶ್ವ ಚಾಂಪಿಯನ್ ಟೈಗರ್ ವುಡ್ಸ್ ಇದೀಗ 150 ಸಿಸಿ ಕಾರ್ಯಕ್ಷಮತೆ ಆಧಾರಿತ ಹೀರೊ ಎಕ್ಸ್‌ಟ್ರೇಮ್ ಸ್ಪೋರ್ಟ್ಸ್ ಬೈಕ್ ಅನ್ನು ಅನಾವರಣಗೊಳಿಸಿದ್ದಾರೆ.

ಹೀರೊ ಜಾಗತಿಕ ಮಾರಾಟ ಯೋಜನೆಯ ಅಂಗವಾಗಿ ತನ್ನ ವ್ಯಾಪಾರವನ್ನು ವಿದೇಶದತ್ತವೂ ವ್ಯಾಪಿಸುತ್ತಿದೆ. ಇದೀಗ ಟೈಗರ್ ಜೊತೆಗಿನ ಸಹಯೋಗವು ಸಂಸ್ಥೆಯನ್ನುತನ್ನ ಗುರಿ ಮುಟ್ಟುವಲ್ಲಿ ನೆರವು ಮಾಡುವ ಭರವಸೆಯಿದೆ.

hero xtreme sport

ಅಲ್ಲದೆ ವುಡ್ಸ್ ಸಹಾಯಾರ್ಥ ಸಂಸ್ಥೆಗೆ ನೆರವಾಗುವ ನಿಟ್ಟಿನಲ್ಲಿ ವಲ್ಡ್ ಚಾಲೆಂಜ್‌ಗೆ ಹೀರೊ ಮುಖ್ಯ ಪ್ರಾಯೋಜತಕತ್ವವನ್ನು ವಹಿಸುತ್ತಿದೆ. ನಿಮ್ಮ ಮಾಹಿತಿಗಾಗಿ, 16ನೇ ವಾರ್ಷಿಕ ಹೀರೊ ವಲ್ಡ್ ಚಾಲೆಂಜ್ ಸ್ಪರ್ಧೆಯು ಇಸ್ಲೆವರ್ಥ್ ಗಾಲ್ಪ್ ಆಂಡ್ ಕಂಟ್ರಿ ಕ್ಲಬ್‌ನಲ್ಲಿ ಡಿಸೆಂಬರ್ 3ರಿಂದ 7ರ ವರೆಗೆ ಆಯೋಜನೆಯಾಗಲಿದೆ. ಇದರಲ್ಲಿ ವುಡ್ಸ್ ಅಲ್ಲದೆ ಮಾಜಿ ಚಾಂಪಿಯನ್ ಜಾಕ್ ಜಾನ್ಸನ್ ಜೊತೆಗೆ ಇನ್ನಿತರ ಪ್ರಖ್ಯಾತ ಆಟಗಾರರು ಭಾಗವಹಿಸಲಿದ್ದು, ವಿಜೇತರಿಗೆ 3.5 ಮಿಲಿಯನ್ ಅಮೆರಿಕನ್ ಡಾಲರ್ ಬಹುಮಾನವಿರಲಿದೆ.

ಟೈಗರ್ ವುಡ್ಸ್ ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ಹೀರೊ ಮೊಟೊಕಾರ್ಪ್ ಜೊತೆಗೆ ನಾಲ್ಕು ವರ್ಷಗಳ ಜಾಗತಿಕ ಪ್ರಚಾರ ರಾಯಭಾರಿ ಒಪ್ಪಂದಕ್ಕೆ ಸಹಿ ಹಾಕಿದ್ದರು. ಇದರಂತೆ ಹೀರೊ ಎಕ್ಸ್‌ಟ್ರೀಮ್ ಸ್ಪೋರ್ಟ್ಸ್ ಅನಾವರಣ ವೇಳೆ ಹೀರೊ ಮೊಟೊಕಾರ್ಪ್ ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿರುವ ಪವನ್ ಮುಂಜಾಲ್ ಉಪಸ್ಥಿತರಿದ್ದರು.

ಇನ್ನು ಹೀರೊ ಎಕ್ಸ್‌ಟ್ರೀಮ್ ಸ್ಪೋರ್ಟ್ಸ್ ಬಗ್ಗೆ ಮಾತನಾಡುವುದಾದ್ದಲ್ಲಿ, ಇದು ಇನ್ನಷ್ಟೇ ಭಾರತದಲ್ಲಿ ಬಿಡುಗಡೆಯಾಗಬೇಕಾಗಿದೆ. ಆದರೆ ಡೀಲರ್ ಗಳು ಈಗಾಗಲೇ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಿದ್ದು, ಅಂದಾಜು ಆನ್ ರೋಡ್ ಬೆಲೆ 80,000 ರು.ಗಳಾಗಿವೆ.

149.2 ಸಿಸಿ ಏರ್ ಕೂಲ್ಡ್ ಎಂಜಿನ್‌ನಿಂದ ನಿಯಂತ್ರಿಸ್ಪಡುವ ಎಕ್ಸ್‌ಟ್ರೀಮ್ ಸ್ಪೋರ್ಟ್ಸ್, 15.2 ಬಿಎಚ್‌ಪಿ ಉತ್ಪಾದಿಸಲಿದೆ. ಇದು ಸಾಮಾನ್ಯ ಎಕ್ಸ್‌ಟ್ಕೀಮ್‌ಗಿಂತಲೂ ಹೆಚ್ಚು (ಒಂದು ಬಿಎಚ್‌ಪಿ) ಪವರ್‌ಫುಲ್ ಎನಿಸಿಕೊಂಡಿದೆ. ಹಾಗೆಯೇ 12.8 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಅಲ್ಲದೆ ಬಿಕಿನಿ ಫೇರಿಂಗ್, ಹೆಡ್ ಲ್ಯಾಂಪ್ ಯುನಿಟ್, ಪೈಲಟ್ ಲ್ಯಾಂಪ್, ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬಾಡಿ ಗ್ರಾಫಿಕ್ಸ್ ಗಳಂತಹ ಅನೇಕ ಶೈಲಿಯನ್ನು ಪಡೆದುಕೊಳ್ಳಲಿದೆ.

More from DriveSpark

Article Published On: Monday, December 8, 2014, 10:56 [IST]
English summary
Hero MotoCorp revealed to the audience present their Xtreme Sport motorcycle with their global ambassador Tiger Woods.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+