ಐಕಾನಿಕ್ ಟ್ರಯಂಪ್ ಭಾರತದಲ್ಲಿ ಶೈನ್ ಆದಿತೇ?
ಬ್ರಿಟನ್‌ನ ಐಕಾನಿಕ್ ದ್ವಿಚಕ್ರ ಬ್ರಾಂಡ್ ಆಂಗಿರುವ ಟ್ರಯಂಪ್ 2012ನೇ ಇಸವಿಯಲ್ಲಿ ದೆಹಲಿಯಲ್ಲಿ ನಡೆದ ಆಟೋ ಎಕ್ಸ್ ಪೋದಲ್ಲಿ ಮೊದಲ ಬಾರಿಗೆ ತನ್ನ ಜನಪ್ರಿಯ ಮಾದರಿಗಳನ್ನು ಅನಾವರಣಗೊಳಿಸಿತ್ತು. ತದಾ ಬಳಿಕ 2013ರಲ್ಲಿ ಬೆಂಗಳೂರು ಹಾಗೂ ಹೈದಾರಾಬಾದ್‌ನಲ್ಲಿ ಡೀಲರ್‌ಶಿಪ್ ತೆರೆದುಕೊಂಡಿತ್ತು.
ಹಾಗೆಯೇ ಪ್ರಸಕ್ತ ಸಾಲಿನಲ್ಲಿ ಏಳು ನೂತನ ಪ್ರದರ್ಶನ ಮಳಿಗೆ ತೆರೆಯುವ ಮೂಲಕ ಡೀಲರ್‌ಶಿಪ್ ಜಾಲ ವೃದ್ಧಿಸಿದ್ದ ಟ್ರಯಂಪ್ ಮೋಟಾರ್‌ಸೈಕಲ್ಸ್, ತನ್ನ ಐಕಾನಿಕ್ ಮಾದರಿಗಳನ್ನು ಬಿಡುಗಡೆಗೊಳಿಸಿತ್ತು.

ಎಲ್ಲ ವಿಧದ ವಾಹನ ಪ್ರೇಮಿಗಳಿಗೆ ಉತ್ತೇಜನವಾಗಿರು ಟ್ರಯಂಪ್, ಸೂಪರ್ ಸ್ಪೋರ್ಟ್ಸ್‌ನಿಂದ ಹಿಡಿದು ಕ್ಲಾಸಿಕ್ ಹಾಗೂ ಕೆಫೆ ರೇಸರ್ ಮಾದರಿಗಳನ್ನು ಮಾರಾಟ ಮಾಡುತ್ತಿದೆ. ಭಾರತದಲ್ಲಿ ಇದರ ದರ ಐದು ಲಕ್ಷ ರು.ಗಳಿಂದ ಹಿಡಿದು 20 ಲಕ್ಷ ರು.ಗಳಷ್ಟು ದುಬಾರಿಯಾಗಿದೆ.
ಭಾರತದಲ್ಲಿ ಯಶಸ್ಸಿನ ರುಚಿ ನೋಡಿರುವ ಟ್ರಯಂಪ್ ತನ್ನ ಆತ್ಮವಿಶ್ವಾಸವನ್ನು ವೃದ್ಧಿಸಿಕೊಂಡಿದೆ. ಅಲ್ಲದೆ 2015-16ರ ಕ್ಯಾಲೆಂಡರ್ ವರ್ಷದಲ್ಲಿ ಸುಲಭವಾಗಿ 2700 ಯುನಿಟ್‌ಗಳನ್ನು ಮಾರಾಟ ಮಾಡುವ ಯೋಜನೆ ಹೊಂದಿದೆ. ಈ ಗುರಿ ತಲುಪುವ ನಿಟ್ಟಿನಲ್ಲಿ ಇನ್ನು ಐದು ಡೀಲರ್‌ಶಿಪ್‌ಗಳನ್ನು ತೆರೆದುಕೊಳ್ಳಲಿದೆ.
ಟ್ರಯಂಪ್ ಈಗಾಗಲೇ 450 ಯುನಿಟ್‌ಗಳನ್ನು ದೇಶದಲ್ಲಿ ಮಾರಾಟ ಮಾಡಿವೆ. ಅಲ್ಲದೆ ಜೂನ್ ತಿಂಗಳಲ್ಲೇ 500ರ ಗಡಿ ದಾಟುವ ನಿರೀಕ್ಷೆಯಲ್ಲಿದೆ. ಹಾಗೆಯೇ 2014-15ರಲ್ಲಿ 1200ರಷ್ಟು ಬೈಕ್ ಸೇಲ್ ಮಾಡುವ ಗುರಿ ಹೊಂದಿದೆ.
ವಿವಿಧ ವಿಭಾಗಗಳಲ್ಲಾಗಿ 11 ಉತ್ಪನ್ನಗಳನ್ನು ಟ್ರಯಂಪ್ ದೇಶದಲ್ಲಿ ಮಾರಾಟ ಮಾಡುತ್ತಿವೆ. ಇವುಗಳಲ್ಲಿ ಟೈಗರ್ ಎಕ್ಸ್‌ಪ್ಲೋರರ್, ಟೈಗರ್ 800ಎಕ್ಸ್‌ಸಿ, ರಾಕೆಟ್ III ರೋಡ್‌ಸ್ಟರ್ ಮತ್ತು ಥಂಡರ್‌ಬರ್ಡ್ ಸ್ಟ್ರೋಮ್ ಕಂಪ್ಲೀಟ್ ಬಿಲ್ಟ್ ಯುನಿಟ್ ಸಿದ್ಧಾಂತದ ಮುಖಾಂತರ ಮಾರಾಟವಾಗುತ್ತಿದೆ. ಹಾಗೆಯೇ ಬೊನೆವಿಲ್ಲೆ, ಬೊನೆವಿಲ್ಲೆ ಟಿ100, ಥ್ರಸ್ಟನ್, ಸ್ಪೀಡ್ ಟ್ರಿಪಲ್ ಮತ್ತು ಡೇಟೋನಾ 675ಆರ್ ಭಾರತದ ಮಾನೇಸರ್ ಘಟಕದಲ್ಲಿ ಜೋಡಣೆಯಾಗುತ್ತಿದೆ.
ಅದೇ ಹೊತ್ತಿಗೆ 2015ರ ವೇಳೆಯಲ್ಲಿ ಕಡಿಮೆ ನಿರ್ವಹಣೆಯ ಅಂದಾಜು ಮೂರರಿಂದ ಐದು ಲಕ್ಷ ರು.ಗಳ ಬಜೆಟ್‌ನಲ್ಲಿ ನೂತನ ಬೈಕ್ ಪರಿಚಯಿಸುವ ಯೋಜನೆಯನ್ನು ಟ್ರಯಂಪ್ ಹೊಂದಿದೆ. ಇದು ಭಾರತವನ್ನು ಪ್ರವೇಶಿಸಿದ್ದಲ್ಲಿ ಟ್ರಯಂಪ್‌ಗೆ ಇನ್ನು ಹೆಚ್ಚಿನ ಯಶ ನೀಡಲಿದೆ.


Click it and Unblock the Notifications








