ಭಾರತಕ್ಕೆ ಬರುತ್ತಿದೆ ವೆಸ್ಪಾ ಫ್ಲೂಯಲ್ ಇಂಜೆಕ್ಟಡ್ ಸ್ಕೂಟರ್
ಇನ್ನು ಭಾರತದಲ್ಲಿ ಮಾರಾಟವಾಗಲಿರುವ ವೆಸ್ಪಾ ಸ್ಕೂಟರುಗಳು ಸಹ ಫ್ಲೂಯಲ್ ಇಂಜೆಕ್ಷನ್ ತಂತ್ರಜ್ಞಾನವನ್ನು ಹೊಂದಿರಲಿದೆ. ಈ ಮೂಲಕ ಹಳೆಯದಾದ ಕಾರ್ಬ್ಯುರೇಟರ್ ತಂತ್ರಜ್ಞಾನಕ್ಕೆ ಗುಡ್ ಬೈ ಹೇಳಲಿದೆ.
ಇಟಲಿಯ ಪ್ರಸಿದ್ಧ ವಾಹನ ತಯಾರಕ ಸಂಸ್ಥೆಯಾಗಿರುವ ಪಿಯಾಜಿಯೊದ ಐಕಾನಿಕ್ ಸ್ಕೂಟರ್ ಬ್ರಾಂಡ್ ಆಗಿರುವ ವೆಸ್ಪಾದಿಂದ ವಿಎಕ್ಸ್, ಎಲ್‌ಎಕ್ಸ್ ಮತ್ತು ಎಕ್ಸ್‌ಕ್ಲೂಸಿವ್ ಮಾದರಿಗಳು ಮಾರಾಟದಲ್ಲಿದೆ.

ಇದೀಗ ಭವಿಷ್ಯದಲ್ಲಿ ಮಾರಾಟವಾಗಲಿರುವ ಮಾದರಿಗಳಿಗೆ ಫ್ಲೂಯಲ್ ಇಂಜೆಕ್ಟಡ್ ತಂತ್ರಜ್ಞಾನ ಅನುಸರಿಸಲು ಇಟಲಿ ಮೂಲದ ಸ್ಕೂಟರ್ ತಯಾರಿಕ ಸಂಸ್ಥೆಯು ನಿರ್ಧರಿಸಿದೆ. ಹೊಸತಾದ ಫ್ಲೂಯಲ್ ಇಂಜೆಕ್ಟಡ್ ಎಂಜಿನ್ ಮೂಲಕ ಎಂಜಿನ್ ಸುಧಾರಣೆ ಹಾಗೂ ಹೆಚ್ಚು ಇಂಧನ ಕ್ಷಮತೆ ನೀಡಲು ನೆರವಾಗಲಿದೆ.
ಭಾರತದಲ್ಲಿ ವೆಸ್ಪಾ ಸ್ಕೂಟರುಗಳು 68,272 ರು.ಗಳಿಂದ 76,495 ರು.ಗಳ ವರೆಗಿನ ದರಗಳಲ್ಲಿ ಲಭ್ಯವಾಗುತ್ತದೆ. ಅಂದರೆ ಹೊಸ ಫ್ಲೂಯಲ್ ಇಂಜೆಕ್ಷನ್ ತಂತ್ರಜ್ಞಾನ ಆಗಮನದೊಂದಿಗೆ ದರ ಇನ್ನಷ್ಟು 4,000 ರು.ಗಳಷ್ಟು ದುಬಾರಿಯಾಗುವ ಸಾಧ್ಯತೆಯಿದೆ.
ವೆಸ್ಪಾ ಫ್ಲೂಯಲ್ ಇಂಜೆಕ್ಷನ್ ಎಂಜಿನ್ ಆಳವಡಿಸಲಾದ ಸ್ಕೂಟರ್ 2014 ನವೆಂಬರ್ ಮಧ್ಯಂತರ ಅವಧಿಯಲ್ಲಿ ಮಾರುಕಟ್ಟೆ ತಲುಪುವ ನಿರೀಕ್ಷೆಯಿದೆ.


Click it and Unblock the Notifications








