ಯಮಹಾದಿಂದ 2014 ಫೇಜರ್ ವರ್ಷನ್ 2.0 ಬಿಡುಗಡೆ
ಜಪಾನ್‌ನ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಯಮಹಾ, ದೇಶದ ಮಾರುಕಟ್ಟೆಯಲ್ಲಿ ಹೆಚ್ಚಿನ ಜನಪ್ರಿಯತೆ ಗಿಟ್ಟಿಸಿಕೊಂಡಿದೆ. ವಿಶೇಷವಾಗಿಯೂ ಯುವ ಗ್ರಾಹಕರ ಮನ ಗೆಲ್ಲುವಲ್ಲಿ ಯಹಹಾ ದ್ವಿಚಕ್ರ ವಾಹನಗಳಿಗೆ ಸಾಧ್ಯವಾಗಿದೆ.
ಇದನ್ನೇ ಮನಗಂಡಿರುವ ಜಪಾನ್‌ನ ಈ ದೈತ್ಯ ಸಂಸ್ಥೆಯು, ಭಾರತದಲ್ಲಿ ಮಗದೊಂದು ಆಕರ್ಷಕ ಮಾದರಿ ಬಿಡುಗಡೆ ಮಾಡಿದೆ. ಇದೀಗ ಸಂಸ್ಥೆಯು 2014 ಸೆಪ್ಟೆಂಬರ್ 17ರಂದು ಹೊಸತಾದ ಫೇಜರ್ ವರ್ಷನ್ 2.0 ಮಾದರಿಯನ್ನು ಬಿಡುಗಡೆ ಮಾಡಿದೆ.

ದೆಹಲಿ ಎಕ್ಸ್ ಶೋ ರೂಂ ಬೆಲೆ - 83,850 ರು.
ಹೊಸ ಯಮಹಾ ಫೇಜರ್ 149 ಸಿಸಿ ಏರ್ ಕೂಲ್ಡ್ ಏಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು ಫ್ಲೂಯಲ್ ಇಂಜೆಕ್ಷನ್ ವ್ಯವಸ್ಥೆಯನ್ನು ಪಡೆಯಲಿದೆ. ಅಲ್ಲದೆ ಕೆಲವೊಂದು ಕಾಸ್ಮೆಟಿಕ್ ಬದಲಾವಣೆಗಳನ್ನು ಪಡೆದುಕೊಂಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಯಮಹಾ ಮೋಟಾರು ಇಂಡಿಯಾ ಸೇಲ್ಸ್ ಪ್ರೈವೇಟ್ ಲಿಮಿಟೆಡ್ ಸೇಲ್ಸ್ ಆಂಡ್ ಮಾರ್ಕೆಟಿಂಗ್ ಉಪಾಧ್ಯಕ್ಷರಾಗಿರುವ ರಾಯ್ ಕುರಿಯನ್, "ಗ್ರಾಹಕರ ಬೇಡಿಕೆಗಳಿಗಾನುಸಾರವಾಗಿ ಹೊಸ ಮಾದರಿಯನ್ನು ಪ್ರಸ್ತುತ ಪಡಿಸಲಾಗಿದೆ" ಎಂದಿದ್ದಾರೆ.
2014 ಫೇಜರ್ ವರ್ಷನ್ 2.0 ಬ್ಲೂ ಕೋರ್ ಟೆಕ್ನಾಲಜಿ ಪಡೆದುಕೊಂಡಿದ್ದು, ಹೆಚ್ಚಿನ ಇಂಧನ ಕ್ಷಮತೆ ನೀಡುವಲ್ಲಿ ನೆರವಾಗಲಿದೆ. ಇದು ಬೇಗನೇ ವೇಗವರ್ಧಿಸಲು ಸಹಕಾರಿಯಾಗಲಿದೆ.
ಸಂಸ್ಥೆಯ ಪ್ರಕಾರ ಹೊಸ ಯಮಹಾ ಮಾದರಿಯು ಹೆಚ್ಚಿನ ಸ್ಥಿರತೆಯೊಂದಿಗೆ ಉತ್ತಮ ಹ್ಯಾಂಡ್ಲಿಂಗ್ ಪಡೆದುಕೊಳ್ಳಲಿದೆ. ಹಾಗೆಯೇ ಮೂರು ಆಕರ್ಷಕ ಬಣ್ಣಗಳಲ್ಲಿ ಲಭ್ಯವಾಗಲಿದೆ. ಅವುಗಳೆಂದರೆ ಬ್ಲ್ಯಾಕ್ ಹಾಕ್, ರೆಡ್ ಡಾನ್ ಮತ್ತು ವೈಟ್ ಕ್ಲೌಡ್.


Click it and Unblock the Notifications