ಹಬ್ಬದ ಆವೃತ್ತಿಗೆ ಉತ್ತೇಜನ ತುಂಬಿದ ಯಮಹಾ ಬೈಕ್‌ಗಳ ಮಾರಾಟ

By Nagaraja

ಯಾವುದೇ ಒಂದು ವಾಹನ ತಯಾರಿಕ ಸಂಸ್ಥೆಯ ಏಳಿಗೆಗೆ ಉತ್ತಮ ಮಾರಾಟ ಕಾಯ್ದುಕೊಳ್ಳುವುದು ಅತಿ ಅಗತ್ಯವಾಗಿರುತ್ತದೆ. ಇನ್ನು ಹಬ್ಬದ ಆವೃತ್ತಿಯಂತಹ ವಿಶೇಷ ಸಂದರ್ಭಗಳು ಬರುವಾಗ ಸುಸ್ಥಿರ ಮಾರಾಟ ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯ.

ಜಪಾನ್ ಮೂಲದ ಮುಂಚೂಣಿಯ ದ್ವಿಚಕ್ರ ತಯಾರಿಕ ಸಂಸ್ಥೆಯಾಗಿರುವ ಯಮಹಾ ಮೋಟಾರು ಇಂಡಿಯಾ ಸೇಲ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಸಹ 2014 ಸೆಪ್ಟೆಂಬರ್ ತಿಂಗಳಲ್ಲಿ ಶೇಕಡಾ 27ರಷ್ಟು ಮಾರಾಟ ಏರಿಕೆ ದಾಖಲಿಸುವ ಮೂಲಕ ದೀಪಾವಳಿ ಹಬ್ಬದ ಆವೃತ್ತಿಗೆ ಉತ್ತೇಜನ ತುಂಬಿದೆ.

yamaha fazer fi version

ಇತ್ತೀಚೆಗಷ್ಟೇ 'ಮಿಷನ್ 10,000 ಕೀ.ಮೀ.' ಮತ್ತು 'ಯಮಹಾ ಮಕ್ಕಳ ಸುರಕ್ಷತೆ ಮತ್ತು ಕುಟುಂಬ ಚಾಲನೆ ತರಬೇತಿ ಶಿಬಿರ'ಗಳಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದ ಸಂಸ್ಥೆಯು 'ಆಲ್ಪಾ' ಸ್ಕೂಟರ್‌ನೊಂದಿಗೆ ಎಫ್‌ಝಡ್ ಶ್ರೇಣಿಯ 'ಬ್ಲೂ ಕೋರ್' ತಂತ್ರಜ್ಞಾನ ಮತ್ತು ಫ್ಲೂಯಲ್ ಇಂಜೆಕ್ಷನ್ - ಎಫ್‌ಝಡ್ 2.0, ಎಫ್‌ಝಡ್ ಎಸ್ ವರ್ಷನ್ 2.0 ಮತ್ತು ಫೇಜರ್ ವರ್ಷನ್ 2.0 ಪರಿಚಯಿಸಿತ್ತು.

ಅಷ್ಟಕ್ಕೂ 2014 ಸೆಪ್ಟೆಂಬರ್ ತಿಂಗಳಲ್ಲಿ ಯಮಹಾ ಸಂಸ್ಥೆಯು 59,325 ಯುನಿಟ್‌ಗಳ ಮಾರಾಟ ಕಂಡುಕೊಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 46,790 ಯುನಿಟ್‌ಗಳ ಮಾರಾಟ ದಾಖಲಿಸಿತ್ತು. ಈ ಮೂಲಕ ಶೇಕಡಾ 27ರಷ್ಟು ಏರಿಕೆ ಕಂಡಿದೆ.

Article Published On: Saturday, October 4, 2014, 10:59 [IST]
English summary
Continuing with its upward sales growth trend, Yamaha Motor India Sales Pvt. Ltd. has registered a growth of 27% in domestic sales during September 2014 as compared to the corresponding period last year. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+