ಟ್ರಕ್ ಚಾಲಕರ ಸುರಕ್ಷಿತ ಚಾಲನೆಗೆ ಯಮಹಾ ಗುರಿ
ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಯಮಹಾ, ದೇಶದ ಟ್ರಕ್ ಚಾಲಕರ ಚಾಲನಾ ಕೌಶಲ್ಯವನ್ನು ವೃದ್ಧಿಸುವಲ್ಲಿಯೂ ಗಮನ ಕೇಂದ್ರಿತವಾಗಿದೆ.
ಕಳೆದ 20 ತಿಂಗಳಿಂದ ಇದೇ ಕಾರ್ಯಕ್ರಮದಲ್ಲಿ ತೊಡಗಿರುವ ಯಮಹಾ ಈಗಾಗಲೇ 800ರಷ್ಟು ಚಾಲಕರಿಗೆ ತರಬೇತಿ ನೀಡಿದೆ. ಯಮಹಾದ ಡ್ರೈವರ್ಸ್ ಸೇಫ್ಟಿ ಟ್ರೈನಿಂಗ್ ಪ್ರೋಗ್ರಾಂ (ವೈಡಿಎಸ್‌ಟಿ) ಯೋಜನೆಯಡಿ ಯಮಹಾ ಈ ಗುರಿಯನ್ನಿಟ್ಟುಕೊಂಡಿದೆ.

ಘನ ವಾಹನದ ಚಾಲಕರಿಗೆ ನುರಿತ ತರಬೇತಿ ನೀಡುವ ಮೂಲಕ ಭಾರತೀಯ ರಸ್ತೆಯನ್ನು ಹೆಚ್ಚು ಸುರಕ್ಷಿತಗೊಳಿಸುವುದು ಯಮಹಾ ಇರಾದೆಯಾಗಿದೆ. ಈ ಸಂಬಂಧ ಚೋಲಾ ಎಂಎಸ್ ರಿಸ್ಕ್ ಸರ್ವಿಸಸ್ ಜೊತೆಗೂ ಸಹಭಾಗಿತ್ವವನ್ನು ಹೊಂದಿದೆ.
ಇನ್ನು ಚಾಲಕರ ಮಾನಸಿಕ ಸ್ಥಿತಿಯನ್ನು ಸುಧಾರಿಸುವ ಸಲುವಾಗಿ ವಿಶೇಷ ಚಾಲನಾ ಕೌಶಲ್ಯ ಶಿಬಿರವನ್ನು ಏರ್ಪಡಿಸಲಾಗುತ್ತಿದೆ. ಈ ಮೂಲಕ ವಾಹನಗಳ ಜೊತೆ ಪಾದಚಾರಿಗಳ ಸುರಕ್ಷತೆಗೂ ಆದತ್ಯೆ ಕೊಡಲಾಗಿದೆ.
ಅಂತೆಯೇ ಮಳೆ, ಮಂಜು ಮುಂತಾದ ಕಠಿಣ ಪರಿಸ್ಥಿತಿಯಲ್ಲೂ ಚಾಲನೆ ಹೇಗೆ ಮಾಡಬೇಕೆಂಬ ಬಗ್ಗೆ ತರಬೇತಿ ನೀಡಲಾಗುತ್ತದೆ. ಈ ಎಲ್ಲದರ ಮೂಲಕ ಅಪಘಾತ ಪ್ರಮಾಣ ಕಡಿತಗೊಳಿಸುವ ಗುರಿ ಇಟ್ಟುಕೊಳ್ಳಲಾಗಿದೆ. 2013ರಲ್ಲಿ 125 ತರಬೇತಿ ಕ್ಲಾಸ್‌ಗಳನ್ನು ಕೈಗೊಂಡಿದ್ದ ಯಮಹಾ ಪ್ರಸಕ್ತ ಸಾಲಿನಲ್ಲಿ ಈ ವರೆಗೆ 77 ಕ್ಲಾಸ್‌ಗಳನ್ನು ಆಯೋಜಿಸಿದೆ.


Click it and Unblock the Notifications