ಯಮಹಾ ಆರ್25 ತಯಾರಿ ವೀಡಿಯೋ ನೋಡಲು ಮರೆಯದಿರಿ
ನೀವು ಬೈಕ್ ಓಡಿಸುವುದರಲ್ಲಿ ನಿಸ್ಸೀಮರಾಗಿರಬಹುದು. ಆದರೆ ಅಂತಹ ಒಂದು ಬೈಕ್ ಸೃಷ್ಟಿ ಮಾಡಲು ಎಷ್ಟು ಕೆಲಸ ಅಡಗಿದೆ ಎಂಬುದು ನಿಮಗೆ ಗೊತ್ತೇ? ಇಂತಹದೊಂದು ಕುತೂಹಲ ಎಲ್ಲರಲ್ಲೂ ಮೂಡಬಹುದು.
ವಾಹನ ಪ್ರೇಮಿಗಳಲ್ಲಿ ಬೈಕ್ ತಯಾರಿ ಹೇಗೆ ನಡೆಯುತ್ತದೆ ಎಂಬುದನ್ನು ತಿಳಿಯುತವ ಕುತೂಹಲವಿರುತ್ತದೆ. ಈ ನಿಟ್ಟಿನಲ್ಲಿ ಚಿಂತನೆ ಮಾಡಿರುವ ಜಪಾನ್ ಮೂಲದ ಯಮಹಾ ಸಂಸ್ಥೆಯು ತನ್ನ ಜನಪ್ರಿಯ ಆರ್25 ಬೈಕ್ ತಯಾರಿಯ ವೀಡಿಯೋವನ್ನು ಜನರ ಮುಂದಿಟ್ಟಿದೆ.
ಇಂಡೋನೇಷ್ಯಾ ಮಾರುಕಟ್ಟೆಗೆ ಈಗಾಗಲೇ ಪ್ರವೇಶ ಪಡೆದಿರುವ ಯಮಹಾ ಆರ್25, ಹಾಟ್ ಕೇಕ್ ತರಹನೇ ಮಾರಾಟವಾಗುತ್ತಿದೆ. ಅಷ್ಟೇ ಅಲ್ಲದೆ ಗ್ರಾಹಕರ ಬೇಡಿಕೆಯನ್ನು ಪೂರೈಸಲು ಯಮಹಾ ವಿಫಲವಾಗುತ್ತಿದೆ.
ಟ್ಯೂಬುಲರ್ ಡೈಮಂಡ್ ಚಾಸೀ ಹೊಂದಿರುವ ಯಮಹಾ ಆರ್25, 250ಸಿಸಿ ಪ್ಯಾರಲಲ್ ಟ್ವಿನ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದ್ದು, 36 ಪಿಎಸ್ ಪವರ್ (221. ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಆರು ಸ್ಪೀಡ್ ಟ್ರಾನ್ಸ್‌ಮಿಷನ್ ಹೊಂದಿದೆ. ಇನ್ನುಳಿದಂತೆ ಎದುರುಗಡೆ 41 ಎಂಎಂ ಟೆಲಿಸ್ಕಾಪಿಕ್ ಫಾರ್ಕ್ ಅಂತೆಯೇ ಮೊನೊಶಾಕ್ ರಿಯರ್ ಸಸ್ಪಷನ್ ಪಡೆದುಕೊಂಡಿದೆ.


Click it and Unblock the Notifications








