ಯಮಹಾದಿಂದ ಬರಲಿದೆ ಆರ್3 320ಸಿಸಿ ಕ್ರೀಡಾ ಬೈಕ್
ದೇಶದ ಮಾರುಕಟ್ಟೆಯಲ್ಲಿ ಶಿಪ್ರ ಗತಿಯಲ್ಲಿ ಬೆಳೆದು ಬರುತ್ತಿರುವ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಯಮಹಾ, ನೂತನ ಆರ್3 320ಸಿಸಿ ಕ್ರೀಡಾ ಬೈಕ್ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ.
ಯಮಹಾ ಆರ್25 ಬಿಡುಗಡೆ ಬಗ್ಗೆ ಊಹಾಪೋಹಗಳಿದ್ದಂತೆಯೇ ಹೊಸ ಆರ್3 ಮಾದರಿಯು ತೆರೆಮರೆಯಲ್ಲಿ ಸಜ್ಜುಗೊಳ್ಳುತ್ತಿರುವುದು ಹೆಚ್ಚು ಕುತೂಹಲ ಮೂಡಿಸಿದೆ.

ಇದರೊಂದಿಗೆ ಆರ್15 ಆವೃತ್ತಿಗೆ ಸ್ಪಷ್ಟ ಉತ್ತರಾಧಿಕಾರಿ ದೊರಕಲಿದೆ. ಈ ಹಿಂದೆ 2014 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿದ್ದ ಆರ್25, ಪರೀಕ್ಷೆಯ ವೇಳೆ ಥಾಯ್ಲೆಂಡ್‌ನಲ್ಲಿ ಅನೇಕ ಬಾರಿ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದವು.
ಪ್ರಮುಖವಾಗಿ ನಿಂಜಾ 300, ಸಿಬಿಆರ್300ಆರ್ ಮಾದರಿಗಳನ್ನು ಪರಿಗಣಿಸಿದಾಗ ಆರ್25, ಸ್ವಲ್ಪ ಕಡಿಮೆ ಸಾಮರ್ಥ್ಯವನ್ನು ಹೊಂದಿರುವುದರಿಂದ ಇದರ ಬದಲಾಗಿ ಹೊಸತಾದ ಆರ್3 ಮಾದರಿ ದೇಶಕ್ಕೆ ಪರಿಚಯಿಸಿದರೂ ಅಚ್ಚರಿಪಡಬೇಕಾಗಿಲ್ಲ.
ವರದಿಗಳ ಪ್ರಕಾರ ಆರ್3 ಮಾದರಿಯು 3 ಸಿಲಿಂಡರ್ ಕ್ರಾಸ್‌ಪ್ಲೇನ್ ಕ್ರಾನ್‌ಶಾಫ್ಟ್ ಎಂಜಿನ್ ಪಡೆದುಕೊಳ್ಳಲಿದೆ. ಅದರೆ ಆರ್25 ಮಾದರಿಯಲ್ಲಿರುವ 250ಸಿಸಿ ಎಂಜಿನ್‌ಗಿಂತಲೂ ಹೆಚ್ಚು ಪವರ್‌ಫುಲ್ ಎನಿಸಿಕೊಳ್ಳಲಿದೆ.


Click it and Unblock the Notifications








