ಮಾರ್ಚ್ 25ರಂದು ಯಮಹಾ ವೈಝಡ್‌ಎಫ್-ಆರ್25 ಲಾಂಚ್
ಬಹುನಿರೀಕ್ಷಿತ ಯಮಹಾ ವೈಝಡ್‌ಎಫ್-ಆರ್25 ಮುಂಬರುವ ಮಾರ್ಚ್ 25ರಂದು ಲಾಂಚ್ ಆಗಲಿದೆ. ಇದಕ್ಕೆ ಸಂಬಂಧಿಸಿದಂತೆ ಹೊಸ ರೆವ್ ಸ್ಟೇಷನ್ ವೆಬ್‌ಸೈಟ್ ರಚಿಸಿರುವ ಜಪಾನ್ ಮೂಲದ ಈ ವಾಹನ ತಯಾರಕ ಸಂಸ್ಥೆಯು, ಆಕರ್ಷಕ ಟೀಸರ್ ವೀಡಿಯೋವೊಂದನ್ನು ಬಿಡುಗಡೆಗೊಳಿಸಿದೆ.
ಇದಕ್ಕೂ ಮೊದಲು ಫೆಬ್ರವರಿ ತಿಂಗಳಲ್ಲಿ ನಡೆದ 2014 ಆಟೋ ಎಕ್ಸ್ ಪೋದಲ್ಲಿ ಯಮಹಾ ವೈಝಡ್‌ಎಫ್-ಆರ್25 ಪ್ರದರ್ಶನಕ್ಕೀಡಲಾಗಿತ್ತು. ಅಲ್ಲದೆ ಸ್ಟೈಲಿಷ್ ವಿನ್ಯಾಸ ಕಾಪಾಡಿಕೊಳ್ಳುವಲ್ಲಿ ಈ ಸ್ಪೋರ್ಟ್ಸ್ ಬೈಕ್ ಯಶಸ್ವಿಯಾಗಿತ್ತು.

ನೂತನ ವೈಝಡ್‌ಎಫ್-ಆರ್25, 250 ಸಿಸಿ ಲಿಕ್ವಿಡ್ ಕೂಲ್ಡ್ ಟ್ವಿನ್ ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 33 ಪಿಎಸ್ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
ಕುತೂಹಲಕಾರಿಯೆಂಬಂತೆ ಇದೇ ಸಂದರ್ಭದಲ್ಲಿ ಮಗದೊಂದು ವೈಝಡ್‌ಎಫ್-ಆರ್3 ಆವೃತ್ತಿಯನ್ನು ಯಮಹಾ ಲಾಂಚ್ ಮಾಡಲಿದೆ. ಇದು 300 ಸಿಸಿ ಎಂಜಿನ್ ಪಡೆದುಕೊಂಡಿದೆ. ಹಾಗೆಯೇ ಟ್ರೈವಿಯಾ ತ್ರಿಚಕ್ರ ವಾಹನ ಸಹ ನಿಮ್ಮ ಗಮನ ಸೆಳೆಯಲಿದೆ.
<center><iframe width="100%" height="450" src="//www.youtube.com/embed/WUxfIp-Hp7M" frameborder="0" allowfullscreen></iframe></center>


Click it and Unblock the Notifications








