ಯಮಹಾ ವೈಝಡ್‌ಎಫ್-ಆರ್3 ಕ್ರೀಡಾ ಬೈಕ್ ಮುಖ್ಯಾಂಶಗಳು

By Nagaraja

ಅಂತೂ ಇಂತೂ ಕೊನೆಗೂ ಬಹುನಿರೀಕ್ಷಿತ ಯಮಹಾ ವೈಝಡ್‌ಎಫ್-ಆರ್3 ಕ್ರೀಡಾ ಬೈಕ್ ಭಾರತ ಮಾರುಕಟ್ಟೆಗೆ ಭರ್ಜರಿ ಪ್ರವೇಶ ಪಡೆದಿದೆ. ಪ್ರಮುಖವಾಗಿಯೂ ಕವಾಸಕಿ ನಿಂಜಾ 300 ಮಾದರಿಗೆ ಪ್ರತಿಸ್ಪರ್ಧಿಯಾಗಲಿರುವ ಯಮವಾ ವೈಝಡ್‌ಎಫ್-ಆರ್3 ಬಗೆಗಿನ ಕೆಲವೊಂದು ಕುತೂಹಲದಾಯಕ ಅಂಶಗಳನ್ನು ನಾವಿಲ್ಲಿ ಬಹಿರಂಗ ಮಾಡಲಿದ್ದೇವೆ.

ನಿಮ್ಮ ಮಾಹಿತಿಗಾಗಿ, ಯಮವಾ ವೈಝಡ್‌ಎಫ್-ಆರ್3 ಎಂಟ್ರಿ ಲೆವೆಲ್ ನಿರ್ವಹಣಾ ಬೈಕ್ ಆಗಿದ್ದು, 321 ಸಿಸಿ ಪ್ಯಾರಲಲ್ ಟ್ವಿನ್ ಲಿಕ್ವಿಡ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ. ಇದು 29.6 ಎನ್‌ಎಂ ತಿರುಗುಬಲದಲ್ಲಿ 42 ಅಶ್ವಶಕ್ತಿ ಉತ್ಪಾದಿಸಲಿದೆ.

ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

  • ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್,
  • ಅನಲಾಗ್ ಟ್ಯಾಕೋಮೀಟರ್,
  • ಡಿಜಿಟಲ್ ಸ್ಪೀಡೋಮೀಟರ್,
  • ಟ್ರಿಪ್ ಮೀಟರ್,
  • ಫ್ಲೂಯಲ್ ಗೇಜ್,
  • ಗೇರ್ ಇಂಡಿಕೇಟರ್
  • ರೇಸ್ ಶೈಲಿ

    ರೇಸ್ ಶೈಲಿ

    ಯಮಹಾದ ಐಕಾನಿಕ್ ಆರ್ ಶ್ರೇಣಿಯ ಕ್ರೀಡಾ ಬೈಕ್ ಗಳಿಂದ ಪ್ರೇರಣೆ ಪಡೆದುಕೊಂಡು ವೈಝಡ್ಎಫ್-ಆರ್3 ವಿನ್ಯಾಸವನ್ನು ರಚಿಸಲಾಿಗದೆ. ಅಲ್ಲದೆ ಮಿಡ್ ನೈಟ್ ಬ್ಲ್ಯಾಕ್ ಮತ್ತು ರೇಸ್ ಬ್ಲೂಗಳೆಂಬ ಎರಡು ಬಣ್ಣಗಳ ಆಯ್ಕೆಗಳಲ್ಲೂ ಲಭ್ಯವಾಗಲಿದೆ.

    ಬ್ರೇಕ್

    ಬ್ರೇಕ್

    • ಮುಂಭಾಗ: 298 ಎಂಎಂ ಡಿಸ್ಕ್ ಬ್ರೇಕ್
    • ಹಿಂಭಾಗ: 220 ಎಂಎಂ ಡಿಸ್ಕ್ ಬ್ರೇಕ್
    • ಸಸ್ಪೆನ್ಷನ್

      ಸಸ್ಪೆನ್ಷನ್

      • ಮುಂಭಾಗ: ಕೆವೈಬಿ ಟೆಲಿಸ್ಕಾಪಿಕ್ ಫಾರ್ಕ್
      • ಹಿಂಭಾಗ: ಸೆವೆನ್ ಸ್ಟೆಪ್ ಪ್ರಿ ಲೋಡ್ ಹೊಂದಾಣಿಸಬಹುದಾದ ಮೊನೊಶಾಕ್
      • ಎಬಿಎಸ್ ಇಲ್ಲ

        ಎಬಿಎಸ್ ಇಲ್ಲ

        ಇಷ್ಟೆಲ್ಲ ಆದರೂ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ವ್ಯವಸ್ಥೆಯ ಕೊರತೆಯು ಯಮಹಾ ವೈಝಡ್ಎಫ್-ಆರ್3 ಮಾದರಿಯನ್ನು ಕಾಡಲಿದೆ. ಆದರೆ ನಿಕಟ ಭವಿಷ್ಯದಲ್ಲೇ ಎಬಿಎಸ್ ವೆರಿಯಂಟ್ ಪರಿಚಯಿಸುವುದಾಗಿ ಯಮಹಾ ಭರವಸೆ ನೀಡಿದೆ.

        ಡೀಲರ್ ಶಿಪ್ ಮತ್ತು ವಿತರಣೆ

        ಡೀಲರ್ ಶಿಪ್ ಮತ್ತು ವಿತರಣೆ

        ಗ್ರೇಟರ್ ನೋಯ್ಡಾದಲ್ಲಿರುವ ಯಮಹಾ ಘಟಕದಿಂದ ವಿತರಣೆ ಪ್ರಕ್ರಿಯೆ ಆರಂಭವಾಗಲಿದೆ. ಅಲ್ಲದೆ ದೇಶದ್ಯಂತ ಸ್ಥಿತಗೊಂಡಿರುವ 100ರಷ್ಟು ಶೋ ರೂಂಗಳಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ.

        ಕಂಪ್ಲೀಟ್ ನೌಕ್ಡ್ ಡೌನ್

        ಕಂಪ್ಲೀಟ್ ನೌಕ್ಡ್ ಡೌನ್

        ಕಂಪ್ಲೀಟ್ ನೌಕ್ಡ್ ಡೌನ್ (ಸಿಕೆಡಿ) ಸಿದ್ಧಾಂತದ ಮುಖಾಂತರ ಯಮಹಾ ವೈಝಡ್ಎಫ್-ಆರ್3 ಭಾರತವನ್ನು ತಲುಪುತ್ತಿದ್ದು, ಬಳಿಕ ಗ್ರೇಟರ್ ನೋಯ್ಡಾದಲ್ಲಿ ಜೋಡಣೆ ಮಾಡಲಾಗುವುದು.

        ಸ್ಪರ್ಧಾತ್ಮಕ ಬೆಲೆ

        ಸ್ಪರ್ಧಾತ್ಮಕ ಬೆಲೆ

        ಕವಾಸಕಿ ನಿಂಜಾ 300 ಜೊತೆಗೆ ಕೆಟಿಎಂ ಆರ್‌ಸಿ390 ಮಾದರಿಗಳಿಗೂ ಪ್ರತಿಸ್ಪರ್ಧಿಯಾಗಲಿರುವ ಯಮಹಾ ವೈಝಡ್‌ಎಪ್-ಆರ್3 ಮಾದರಿಯು 3.25 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ. ಪ್ರಸ್ತುತ ಕವಾಸಕಿ ನಿಂಜಾ 300 ಮತ್ತು ಕೆಟಿಎಂ ಆರ್‌ಸಿ390 ಅನುಕ್ರಮವಾಗಿ 3.65 ಹಾಗೂ 2.14 ಲಕ್ಷ ರು.ಗಳಷ್ಟು ದುಬಾರಿಯೆನಿಸಿದೆ.


Article Published On: Tuesday, August 18, 2015, 12:20 [IST]
English summary
All You want to know about Yamaha YZF-R3
Read more on ಯಮಹಾ yamaha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+