ಬಜಾಜ್ ಪಲ್ಸರ್ 200 ಎನ್‌ಎಸ್ ಓಡಾಟ ನಿಲುಗಡೆ?

By Nagaraja

ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ಬಜಾಜ್ ಆಟೋ, ತನ್ನ ನಂ.1 ಕ್ರೀಡಾ ಬೈಕ್ ಪಲ್ಸರ್ 200 ಎನ್‌ಎಸ್ ಓಡಾಟವನ್ನು ಸದ್ಯದಲ್ಲಿ ನಿಲುಗಡೆಗೊಳಿಸಿದೆ. ಹ್ಹಂ! ಇದೇನಿದು ಅಂಥ ಗಾಬರಿಯಾಗದಿರಿ.

ವಿಷಯ ಏನೆಂದರೆ ಬಜಾಜ್ ಸಂಸ್ಥೆಯು ಕೆಲವು ಸಮಯಗಳ ಹಿಂದೆಯಷ್ಟೇ ಅತಿ ನೂತನ ಆರ್ ಎಸ್ 200 ಮತ್ತು ಎಎಸ್200 ಮಾದರಿಗಳನ್ನು ಬಿಡುಗಡೆಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಕಳೆಗುಂದಿರುವ ಎನ್ ಎಸ್ 200 ಓಡಾಟ ನಿಲುಗಡೆಗೊಳಿಸಲು ನಿರ್ಧರಿಸಿದೆ.

ಬಜಾಜ್ ಪಲ್ಸರ್ 200ಎನ್‌ಎಸ್

ಜನಪ್ರಿಯ ಎನ್‌ಎಸ್ ಮಾರಾಟ ಸ್ಥಗಿತಗೊಳ್ಳುವ ಬಗ್ಗೆ ಬೇಸರ ಪಟ್ಟುಕೊಳ್ಳಬೇಡಿರಿ. ಯಾಕೆಂದರೆ ಈ ಸ್ಥಾನವನ್ನು ಹೊಚ್ಚ ಹೊಸ ಪಲ್ಸರ್ 180 ಎನ್ ಎಸ್ ತುಂಬಲಿದೆ. ಪಲ್ಸರ್ 200 ಎನ್‌ಎಸ್ ಓಡಾಟ ನಿಲುಗಡೆಯ ಹಿಂದೆ ಮಗದೊಂದು ಕಾರಣವೂ ಇದೆ.

ಅದೇನೆಂದರೆ ಪಲ್ಸರ್ 200 ಎನ್‌ಎಸ್ ಮತ್ತು ಈಗಷ್ಟೇ ಬಿಡುಗಡೆಯಾಗಿರುವ ಎಎಸ್200 ಸಮಾನ ಎಂಜಿನ್ ಹಂಚಿಕೊಳ್ಳುತ್ತಿದೆ. ಹಾಗಾಗಿ ಹೊಸ ಮಾದರಿಯ ಮಾರಾಟಕ್ಕೆ ಹೆಚ್ಚು ಧಕ್ಕೆಯುಂಟಾಗದಿರಲು ಇಂತಹದೊಂದು ನಿರ್ಧಾರ ತಳೆದಿದೆ.

ಅಂತೆಯೇ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಕೆಟಿಎಂಗಳಂತಹ ಗುಣಮಟ್ಟದ ಬೈಕ್ ಗಳ ಆಗಮನದೊಂದಿಗೆ ಪಲ್ಸರ್ ಗೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ಭೀತಿಯೂ ಕಾಡುತ್ತಿದೆ. ಈ ಎಲ್ಲದರ ಹಿನ್ನೆಲೆಯಲ್ಲಿ ಹೆಚ್ಚು ಆಧುನಿಕ ಹಾಗೂ ಮುಂದುವರಿದ ತಂತ್ರಜ್ಞಾನದ ಬೈಕ್ ಗಳನ್ನು ಪರಿಚಯಿಸುವುದು ಅತಿ ಅಗತ್ಯವೆನಿಸಿದೆ.

More from DriveSpark

Article Published On: Saturday, August 8, 2015, 14:10 [IST]
English summary
Bajaj Auto Could Discontinue Pulsar 200NS & Launch 180NS Model
Read more on ಬಜಾಜ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+