ಗುರ್ಗಾಂವ್‌ನಲ್ಲಿ ಕ್ರೂಸ್ ಇಂಡಿಯಾ ಮೋಟಾರು ಬೈಕ್ ಶೋ
ಇನ್ನೇನು ಕೆಲವೇ ದಿನಗಳಲ್ಲಿ ದೇಶದ ನೆಚ್ಚಿನ ಪ್ರವಾಸಿ ತಾಣವಾಗಿರುವ ಗೋವಾದಲ್ಲಿ ಇಂಡಿಯಾ ಬೈಕ್ ವೀಕ್ ಆಯೋಜನೆಯಾಗಲಿದೆ. ಇಲ್ಲಿಗೆ ಬೈಕ್ ಪ್ರೇಮಿಗಳ ಹಬ್ಬ ಕೊನೆಗೊಳ್ಳುವುದಿಲ್ಲ. ಏಕೆಂದರೆ ಮಗದೊಂದು ಮೋಟಾರು ಬೈಕ್ ಶೋ ಸದ್ಯದಲ್ಲೇ ಆಯೋಜನೆಯಾಗಲಿದೆ.
ಹೌದು, ಕ್ರೂಸ್ ಇಂಡಿಯಾ ಮೋಟಾರುಬೈಕ್ ಶೋ ಎರಡನೇ ಆವೃತ್ತಿಯು ಗುರ್ವಾಂವ್‌ನಲ್ಲಿ ಮಾರ್ಚ್ ತಿಂಗಳಲ್ಲಿ ಆಯೋಜನೆಯಾಗಲಿದೆ. ಹಲವು ಆಕರ್ಷಣೆಗಳಿಗೆ ಕಾರಣವಾಗಲಿರುವ ಕ್ರೂಸ್ ಇಂಡಿಯಾ ಮೋಟಾರ್ ಬೈಕ್ ಶೋ ಮಾರ್ಚ್ 21 ಹಾಗೂ 22ರಂದು ಗುರ್ಗಾಂವ್‌ನ ಹೈಯಾಟ್ ರೆಜೆನ್ಸಿನಲ್ಲಿ ನಡೆಯಲಿದೆ.

ವಿಶೇಷವೆಂದರೆ ಮೊಟೊ ಎಕ್ಸ್ ಟ್ರೀಮ್ ಮ್ಯಾಡ್‌ನೆಸ್ (ಎಂಎಕ್ಸ್‌ಎಂ) ಸ್ಟಂಟ್ ಶೋ ಕೂಡಾ ನಡೆಯಲಿದೆ. ಇಲ್ಲಿ ಭಾರತೀಯ ವೃತ್ತಿಪರ ಸ್ಟಂಟ್ ಸ್ಪರ್ಧಿಗಳಿಗೆ ತಮ್ಮ ಕೌಶಲ್ಯ ಪ್ರದರ್ಶಿಸುವ ಅವಕಾಶ ದೊರಕಲಿದೆ.
ಅಂತೆಯೇ ಬೈಕೋಗ್ರಾಫಿ, ವಿಂಟೇಜ್ ಬೈಕ್ ಶೋ, ಬೈಕ್ ಓವರ್ ಹಾಲ್, ಬೈಕ್ ಕಸ್ಟಮೈಜೇಷನ್ ವರ್ಕ್ ಶಾಪ್ ಮತ್ತು ಕಾಸ್ ರೈಡ್ ಕೂಡಾ ನಡೆಯಲಿದೆ. ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ವಾಹನ ಪ್ರೇಮಿಗಳಿಗೆ ದೇಶದ ಪ್ರತಿಷ್ಠತ ಬೈಕ್ ಶೋಗಳು ಮನರಂಜಿಸಲಿದೆ.


Click it and Unblock the Notifications








