ಡಕಾರ್ ರಾಲಿಯಲ್ಲಿ ಸಂತೋಷ್ ಮಿಂಚಿನ ಪ್ರದರ್ಶನ
ವಿಶ್ವದ ಅತ್ಯಂತ ಅಪಾಯಕಾರಿ ಕ್ರಾಸ್ ಕಂಟ್ರಿ ಡಕಾರ್ ರಾಲಿ 2015ನೇ ಆವೃತ್ತಿಯಲ್ಲಿ ಪರಿಣಾಮಕಾರಿ ಪ್ರದರ್ಶನ ಮುಂದುವರಿಸಿರುವ ಭಾರತದ ಹೆಮ್ಮೆಯ ಸಿಎಸ್ ಸಂತೋಷ್, ಒಟ್ಟಾರೆಯಾಗಿ 42ನೇ ಸ್ಥಾನ ಕಾಯ್ದುಕೊಂಡಿದ್ದಾರೆ.
ಎಂಟನೇ ಹಂತದಲ್ಲಿ 32ನೇ ಸ್ಥಾನದಲ್ಲಿ ಗುರಿ ಮುಟ್ಟಿರುವ 31ರ ಹರೆಯದ ಈ ಬೆಂಗ್ಳೂರು ರೇಸರ್ ಗಮನಾರ್ಹ ಪ್ರದರ್ಶನ ಮುಂದುವರಿಸಿದ್ದಾರೆ.

ಒಟ್ಟಿನಲ್ಲಿ ಡಕಾರ್ ರಾಲಿಯಲ್ಲಿ ಭಾಗವಹಿಸುತ್ತಿರುವ ಮೊತ್ತ ಮೊದಲ ಭಾರತೀಯನೆಂಬ ಗೌರವಕ್ಕೆ ಪಾತ್ರವಾಗಿರುವ ಸಂತೋಷ್, ದಕ್ಷಿಣ ಅಮೆರಿಕ ರಾಷ್ಟ್ರಗಳಾದ ಚಿಲಿ, ಅರ್ಜೈಂಟೀನಾ ಹಾಗೂ ಬೊಲಿವಿಯಾದಲ್ಲಿ ಸಾಗುತ್ತಿರುವ ಡಕಾರ್ ರಾಲಿಯ ಅಂತಿಮ ಸುತ್ತು ಪ್ರವೇಶಿಸುತ್ತಿರುವಂತೆಯೇ ಮಿಂಚಿನ ಪ್ರದರ್ಶನ ಮುಂದುವರಿಸಿದ್ದಾರೆ.

ಇನ್ನೊಂದೆಡೆ ಎಂಟನೇ ಹಂತದ ಮುಕ್ತಾಯಕ್ಕೆ ನಾಲ್ಕು ಬಾರಿ ಡಕಾರ್ ರಾಲಿ ಚಾಂಪಿಯನ್ ಸ್ಪೇನ್‌ನ ಮಾರ್ಕ್ ಕೋಮಾ ಅಗ್ರಸ್ಥಾನಕ್ಕೇರಿದ್ದಾರೆ.
ಕಳೆದ ದಿನದ ರೇಸ್ ಬಗ್ಗೆ ಮಾತನಾಡುವುದ್ದಾದ್ದಲ್ಲಿ ಉಪ್ಪು ನೀರಿನಿಂದ ಆವರಿಸಲ್ಪಟ್ಟ ಭೂ ಪ್ರದೇಶಯು ಯಾತ್ರಿಕರಿಗೆ ಕಠಿಣ ಸವಾಲನ್ನು ಮುಂದೊಡ್ಡಿತ್ತು. ಆದರೆ ಇವೆಲ್ಲವನ್ನು ಮೀರಿಸುವಲ್ಲಿ ರೇಸರುಗಳು ಯಶಸ್ವಿಯಾಗಿದ್ದಾರೆ.


Click it and Unblock the Notifications