ಡಕಾರ್‌ನಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಿದ ಸಂತೋಷ್
2015 ಜನವರಿ 04, ಭಾನುವಾರದಂದು ಅರ್ಜೇಂಟೀನಾದ ಬ್ಯೂನಸ್ ಐರಿಸ್‌ನಲ್ಲಿ 2015 ಡಕಾರ್ ರಾಲಿಗೆ ಅದ್ದೂರಿ ಚಾಲನೆ ದೊರಕಿದೆ. 37ನೇ ಆವೃತ್ತಿಯ ಈ ಜನಪ್ರಿಯ ಹಾಗೂ ಅಷ್ಟೇ ಸಾಹಸ ಪ್ರಿಯ ರಾಲಿಯಲ್ಲಿ 665ರಷ್ಟು ಸ್ಪರ್ಧಿಗಳು ಭಾಗವಹಿಸಿದ್ದರು.
ಇವನ್ನೂ ಓದಿ: ಡಕಾರ್ ರಾಲಿಯಲ್ಲಿ ನಮ್ಮೂರ ಹುಡುಗ ಸಂತೋಷ್
ಜನವರಿ 4ರಿಂದ 17ರ ವರೆಗೆ ನಡೆಯಲಿರುವ ಈ ಮಹತ್ತರ ರಾಲಿಯು ಭಾರತದ ಪಾಲಿಗೂ ಅತ್ಯಂತ ಮಹತ್ವದೆನಿಸಿದೆ. ಯಾಕೆಂದರೆ ಮೋಟಾರುಸೈಕಲ್ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ದೇಶವನ್ನು ಬೆಂಗಳೂರು ಮೂಲದ ಕನ್ನಡಿಗ ಸಿ.ಎಸ್ ಸಂತೋಷ್ ಮುನ್ನಡೆಸುತ್ತಿದ್ದಾರೆ.

ಅಲ್ಲದೆ ಮೊದಲ ಹಂತದಲ್ಲಿ 85ನೇ ಸ್ಥಾನ ಗಿಟ್ಟಿಸಿಕೊಂಡಿರುವ ಸಂತೋಷ್ ಗಮನಾರ್ಹ ಸಾಧನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ನೆಚ್ಚಿನ ಕೆಟಿಎಂ ಬೈಕ್‌ನಲ್ಲಿ ಸ್ಪರ್ಧೆಗಿಳಿದಿದ್ದ ಸಂತೋಷ್ ಅವರು 7 ತಾಸು ಹಾಗೂ 16 ಸೆಕಂಡುಗಳಲ್ಲಿ ಗುರಿ ತಲುಪಿದ್ದರು. ಇಲ್ಲಿ ಬ್ರಿಟನ್‌ನ ಸಂಡರ್‌ಲ್ಯಾಂಡ್ ಪ್ರಥಮರಾಗಿ ಗುರುತಿಸಿಕೊಂಡಿದ್ದಾರೆ.
ಕೇವಲ ಮೋಟಾರುಸೈಕಲ್ ಮಾತ್ರವಲ್ಲದೆ ಕಾರು, ಟ್ರಕ್ ಹಾಗೂ ಕ್ವಾಡ್ ರೇಸ್ ಕೂಡಾ ಇಲ್ಲಿ ಆಯೋಜನೆಯಾಗುತ್ತಿದೆ. ಡಕಾರ್ ರಾಲಿ ಕೇವಲ ಒಂದು ಸಾಮಾನ್ಯ ಆಫ್ ರೋಡ್ ರಾಲಿ ಅಲ್ಲ. ಇಲ್ಲಿ ಚಾಲಕರಿಗೆ ಪರಿಪೂರ್ಣ ಸಾಹಸಿ ಚಾಲನೆಯ ಅನುಭವ ನೀಡುತ್ತದೆ. ಇದು ಅಡ್ಡ ದಿಡ್ಡಿಯಾದ ಒರಟು ರಸ್ತೆಯಿಂದ ಹಿಡಿದು, ಮರಳು, ಬಂಡೆಗಳು ಇನ್ನಿತ್ತರ ಅತಿ ಸಾಹಸ ಚಾಲನೆಯನ್ನು ಹೊಂದಿರಲಿದೆ.


Click it and Unblock the Notifications








