ಬಜಾರ್ ನಲ್ಲಿ ದೊರಕುವ 8 ಅಗತ್ಯ ಬೈಕ್ ಆಕ್ಸೆಸರಿಗಳು
ಆಫ್ಟರ್ ಮಾರುಕಟ್ಟೆ ವಿಚಾರ ಬಂದಾಗ ಪ್ರತಿಯೊಬ್ಬ ಬೈಕ್ ಪ್ರೇಮಿಯೂ ಗುಣಮಟ್ಟದ ಉತ್ಪನ್ನಗಳತ್ತ ಹೆಚ್ಚಿನ ಗಮನ ಕೇಂದ್ರಿಕರಿಸುತ್ತಾರೆ. ಬೈಕ್ ಸವಾರನು ಹೊಂದಿರಲೇಬೇಕಾದ ಕೆಲವು ಅಗತ್ಯ ಆಫ್ಟರ್ ಮಾರ್ಕೆಟ್ ಆಕ್ಸೆಸರಿಗಳ ಬಗ್ಗೆ ನಾವಿಂದು ಚರ್ಚಿಸಲಿದ್ದೇವೆ.
ಸವಾರನ ಅಗತ್ಯಕ್ಕಾನುಸಾರವಾಗಿ ಮಾರುಕಟ್ಟೆಯಲ್ಲಿ ಹಲವು ವಿಧದ ಬೈಕ್ ಆಕ್ಸೆಸರಿಗಳು ದೊರಕುತ್ತದೆ. ಇದು ನಿಮ್ಮ ಸವಾರಿಯನ್ನು ಹೆಚ್ಚು ಸುರಕ್ಷಿತವಾಗಿಸುವುದಲ್ಲದೆ ಪ್ರಯಾಣದ ವೇಳೆ ಎದುರಾಗುವ ತೊಂದರೆಗಳನ್ನು ನಿವಾರಿಸಲು ನೆರವಾಗುತ್ತದೆ. ಈಗ ಬೈಕ್ ಸವಾರರು ಹೊಂದಿರಬೇಕಾದ ಕೆಲವು ಆಕ್ಸೆಸರಿಗಳ ಬಗ್ಗೆ ಚರ್ಚಿಸೋಣ.

01. ಚಕ್ರಗಳು
ಬೈಕ್ ಬಜೆಟ್ ಕಡಿಮೆ ಮಾಡುವ ನಿಟ್ಟಿನಲ್ಲಿ ಬಹುತೇಕ ಪ್ರತಿಯೊಂದು ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಗಳು ತೀರಾ ಸಾಮಾನ್ಯ ಗುಣಮಟ್ಟದ ಚಕ್ರಗಳನ್ನು ಒದಿಸುತ್ತದೆ. ಇಂತಹ ತೊಂದರೆಗಳನ್ನು ನಿವಾರಿಸಲು ಬಜಾರ್ ನಲ್ಲಿ ಸ್ಟ್ಯಾಂಡರ್ಡ್ ಚಕ್ರಗಳು ದೊರಕುತ್ತದೆ. ಈ ಪೈಕಿ ಪೈರಲ್ಲಿ, ಮಿಚಿಲಿನ್ ಹಾಗೂ ಕಾಂಟಿನೆಂಟಲ್ ಗಳಂತಹ ಆಫ್ಟರ್ ಮಾರ್ಕೆಟ್ ಸಂಸ್ಥೆಗಳು ಗುಣಮಟ್ಟದ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಟ್ಟಿದೆ. ಇದು ಬೈಕ್ ಹ್ಯಾಂಡ್ಲಿಂಗ್ ಸುಮಗವಾಗಿಸುವುದಲ್ಲದೆ ಹೆಚ್ಚಿನ ಇಂಧನ ಕ್ಷಮತೆ ಕಾಪಾಡಿಕೊಳ್ಳಲು ನೆರವಾಗಲಿದೆ.

02. ಹ್ಯಾಂಡಲ್ ಬಾರ್
ನಿಮಗೆ ನಿಮ್ಮ ಬೈಕ್ ನಲ್ಲಿ ನೀಡಿರುವ ಹ್ಯಾಂಡಲ್ ಬಾರ್ ಖುಷಿ ತಂದಿಲ್ಲವೇ? ದೂರ ಪ್ರಯಾಣದ ವೇಳೆ ಸಮಸ್ಯೆ ಕಾಡುತ್ತಿದೆಯೇ? ಚಿಂತೆ ಬೇಡ. ಇದಕ್ಕೂ ಮಾರುಕಟ್ಟೆಯಲ್ಲಿ ಪರಿಹಾರವಿದೆ. ಕೇವಲ ಹ್ಯಾಂಡಲ್ ಬಾರ್ ಮಾತ್ರವಲ್ಲದೆ ವೇಗವರ್ಧನೆ ಕೇಬಲ್, ಕ್ಲಚ್ ಕೇಬಲ್ ಹಾಗೂ ಬ್ರೇಕ್ ಕೇಬಲ್ ಸಹ ಬದಲಾಯಿಸಬಹುದಾಗಿದೆ.

03. ಕೇರಿಯರ್ ಬ್ಯಾಗ್
ನೀವು ದೂರ ಪ್ರಯಾಣ ಕೈಗೊಳ್ಳುತ್ತಿದ್ದಲ್ಲಿ ಕೇರಿಯರ್ ಬ್ಯಾಗ್ ನಿಮ್ಮ ಬೈಕ್ ಬದಿಯಲ್ಲಿ ಜೋಡಿಸಿದರೆ ಉತ್ತಮವಾಗಿರಲಿದೆ. ಇದನ್ನು ಲಾಕ್ ಮಾಡುವ ಮೂಲಕ ನಿಮ್ಮ ವಸ್ತುಗಳನ್ನು ಸುರಕ್ಷಿತವಾಗಿಡಬಹುದು. ಹೈ ಎಂಡ್ ಬೈಕ್ ಗಳಲ್ಲಿ ಕೇರಿಯರ್ ಬ್ಯಾಗ್ ಗಳು ಆಡಂಬರ ಶೈಲಿಯ ಸಂಕೇತವಾಗಿದೆ.

04. ಹೆಡ್ ಲೈಟ್
ಹೆಚ್ಚಾಗಿ ನೀವು ರಾತ್ರಿ ವೇಳೆಯಲ್ಲಿ ಪ್ರಯಾಣಿಸುತ್ತಿದ್ದಲ್ಲಿ ಹೆಚ್ಚು ಪ್ರಕಾಶಮಾನವಾದ ಹೆಡ್ ಲೈಟ್ ಗಳು ನೆರವಿಗೆ ಬರಲಿದೆ. ಬಹುತೇಕ ಬಾಹ್ಯ ಸಂಸ್ಥೆಗಳು ಗುಣಮಟ್ಟದ ಹೆಡ್ ಲೈಟ್ ಗಳನ್ನು ನೀಡುತ್ತದೆ.

05. ಕ್ರಾಶ್ ಗಾರ್ಡ್
ಅಪಘಾತ ಸಂದರ್ಭದಲ್ಲಿ ಸುರಕ್ಷತೆಯನ್ನು ಕಾಪಾಡುವ ಕ್ರಾಶ್ ಗಾರ್ಡ್ ಗಳ ಜೋಡಣೆ ಅತಿ ಅಗತ್ಯ. ಇದು ಸಣ್ಣ ಪುಟ್ಟ ಅವಘಡಗಳಿಂದ ರಕ್ಷಣೆ ನೀಡಲಿದೆ.

06. ಲಿವರ್ ಗಾರ್ಡ್
ಬೈಕ್ ಸ್ಕಿಡ್ ಆಗಿ ನೆಲಕ್ಕುರುಳಿದಾಗ ಗೇರ್ ಲಿವರ್ ಗೆ ಪೆಟ್ಟಾಗುವ ಅಥವಾ ಮುರಿಯುವ ಸಾಧ್ಯತೆ ಜಾಸ್ತಿಯಾಗಿರುತ್ತದೆ. ಹಾಗಾಗಿ ಇದಕ್ಕೊಂದು ಸುರಕ್ಷಾ ವಲಯವನ್ನು ಜೋಡಣೆ ಮಾಡಿದ್ದಲ್ಲಿ ಸಂಭವನೀಯ ಹಾನಿಯನ್ನು ತಪ್ಪಿಸಬಹುದು. ಇದಕ್ಕಾಗಿ ಮಾರುಕಟ್ಟೆಯಲ್ಲಿ ಗೇರ್ ಲಿವರ್ ಗಾರ್ಡ್ ಗಳು ದೊರಕುತ್ತದೆ.

07. ಚಾರ್ಜಿಂಗ್ ಪಾಯಿಂಟ್
ಮೊಬೈಲ್ ಚಾರ್ಜ್ ಮಾಡಿಸಲು ಮರೆತು ಬಿಟ್ಟರಾ? ಟೆನ್ಷನ್ ಇಲ್ಲ ಬಿಡಿ. ನಿಮ್ಮ ಸವಾರಿ ವೇಳೆಯೇ ಮೊಬೈಲ್ ಚಾರ್ಜ್ ಮಾಡಿಸಿ.

08. ಏರ್ ಫಿಲ್ಟರ್
ಕಾರುಗಳಲ್ಲಿ ಏರ್ ಫಿಲ್ಟರ್ ಮಾಡುವ ಉಪಕರಣಗಳು ಕಾಣಸಿಗುವುದು ಸಾಮಾನ್ಯ. ಆದರೆ ಬೈಕ್ ಗಳಿಗೂ ಏರ್ ಫಿಲ್ಟರ್ ಲಭ್ಯವಿರುವ ವಿಚಾರ ನಿಮಗೆ ಗೊತ್ತಿದೆಯೇ?


Click it and Unblock the Notifications








