ದೇಶದಲ್ಲಿ ಹಾರ್ಲೆ ಬೈಕ್‌ಗಳಿಗೆ 5 ವಸಂತಗಳ ಸಂಭ್ರಮ
ಅಮೆರಿಕ ಮೂಲದ ಐಕಾನಿಕ್ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹಾರ್ಲೆ ಡೇವಿಡ್ಸನ್ ಐದು ವರ್ಷಗಳ ಹಿಂದೆ ಭಾರತ ಮಾರುಕಟ್ಟೆಯನ್ನು ಪ್ರವೇಶಿಸುವ ಮಹತ್ವದ ನಿರ್ಧಾರವನ್ನು ಕೈಗೊಂಡಿತ್ತು. ಈಗ ತನ್ನ ಗುರಿಯಲ್ಲಿ ಯಶ ಸಾಧಿಸಿರುವ ಈ ಪ್ರಖ್ಯಾತ ಸಂಸ್ಥೆಯು ವಿಶೇಷ ರೀತಿಯಲ್ಲಿ ಸಂಭ್ರಮವನ್ನು ಆಚರಿಸಿಕೊಳ್ಳಲು ನಿರ್ಧರಿಸಿದೆ.
ನಿಮ್ಮ ಮಾಹಿತಿಗಾಗಿ, ಹಾರ್ಲೆ ಡೇವಿಡ್ಸನ್ ಭಾರತದಲ್ಲಿ 11 ಮಾದರಿಗಳನ್ನು ನೀಡುತ್ತಿದೆ. ಅಷ್ಟೇ ಯಾಕೆ ಅಮೆರಿಕ ಹೊರತುಪಡಿಸಿ ನಿರ್ಮಾಣ ಘಟಕ ಹೊಂದಿರುವ ಏಕಮಾತ್ರ ದೇಶ ಭಾರತವಾಗಿದೆ.

2009ರಲ್ಲಿ ಭಾರತದಲ್ಲಿ ಕಾರ್ಯಾಚರಣೆ ಆರಂಭಿಸಿದ್ದ ಹಾರ್ಲೆ 2010ರಲ್ಲಿ ಮೊದಲ ಡೀಲರ್‌ಶಿಪ್ ತೆರೆದುಕೊಂಡಿತ್ತು. ಈಗ 14 ನಗರಗಳಲ್ಲಾಗಿ 17 ಎಕ್ಸ್ ಕ್ಲೂಸಿವ್ ವಿತರಕ ಜಾಲವನ್ನು ಹೊಂದಿದೆ.
ಹಾರ್ಲೆ ಡೇವಿಡ್ಸನ್ ಇದುವರೆಗೆ ದೇಶದಲ್ಲಿ 8,000ಗಿಂತಲೂ ಹೆಚ್ಚು ಮೋಟಾರುಸೈಕಲ್‌ಗಳನ್ನು ಮಾರಾಟ ಮಾಡಿವೆ. ಈ ಪೈಕಿ ಸ್ಟ್ರೀಟ್ 750 ಹಾಗೂ ಸ್ಟ್ರೀಟ್ 500 ಮಾದರಿಗಳು ಹೆಚ್ಚಿನ ಜನಪ್ರಿಯತೆ ಗಿಟ್ಟಿಸಿಕೊಂಡಿದೆ.
ಇನ್ನು ತನ್ನ ಗ್ರಾಹಕರಿಗೆ ಹಾರ್ಲೆ ಸಂಸ್ಥೆಯು ಫೆಬ್ರವರಿ 19ರಂದು ಗೋವಾದಲ್ಲಿ ವಿಶೇಷ ರಾಲಿ ಹಮ್ಮಿಕೊಂಡಿದೆ. ಇದು ಇಂಡಿಯಾ ಬೈಕ್ ವೀಕ್ ರಾಲಿಗಿಂತಲೂ (ಫೆ. 20-21) ಒಂದು ದಿನ ಮುಂಚಿತವಾಗಿ ಆಯೋಜನೆಯಾಗಲಿದೆ.


Click it and Unblock the Notifications








