ಹೀರೊದಿಂದ ಹೋಂಡಾ ಆಕ್ಟಿವಾ ಪ್ರತಿಸ್ಪರ್ಧಿ ಕಣಕ್ಕೆ

By Nagaraja

ಕಳೆದ ಕೆಲವು ವರ್ಷಗಳಲ್ಲಿ ದ್ವಿಚಕ್ರ ವಾಹನ ವಿಭಾಗದಲ್ಲಿ ನಂ.1 ಆಲಂಕರಿಸಿರುವ ಹೀರೊ ಮೊಟೊಕಾರ್ಪ್ ಕೈಕಟ್ಟಿ ಸುಮ್ಮನೇ ಕುಳಿತುವಂತಿಲ್ಲ. ಇನ್ನೊಂದೆಡೆ 2015-16ನೇ ಸಾಲಿನಲ್ಲಿ 15 ಮಾಡೆಲ್‌ಗಳನ್ನು ಬಿಡುಗಡೆ ಮಾಡುವುದಾಗಿ ಹೋಂಡಾ ಮೋಟಾರುಸೈಕಲ್ ಘೋಷಿಸಿಕೊಂಡಿದೆ.

ಇದರಿಂದ ಎಚ್ಚೆತ್ತುಕೊಂಡಿರುವ ಹೀರೊ ಸಂಸ್ಥೆಯೀಗ, ದೇಶದ ನಂ.1 ಸ್ಕೂಟರ್ ಆಕ್ಟಿವಾಗೆ ನೇರ ಪ್ರತಿಸ್ಪರ್ಧಿ ಕಣ್ಣಕ್ಕಿಳಿಸುವ ಯೋಜನೆಯಲ್ಲಿದೆ. ಒಂದೇ ಸಮಯದಲ್ಲಿ ಪುರುಷರ ಜೊತೆಗೆ ಮಹಿಳಾ ಗ್ರಾಹಕರನ್ನು ಆಕರ್ಷಿಸುವುದು ಹೀರೊ ಗುರಿಯಾಗಿದೆ.

hero maestro

ದೇಶದ ಸ್ಕೂಟರ್ ಮಾರುಕಟ್ಟೆ ಶಿಪ್ರ ಗತಿಯಲ್ಲಿ ಬೆಳೆದು ಬರುತ್ತಿದೆ. ಈಗ ಎಲ್ಲ ಹೊಸತನದಿಂದ ಕೂಡಿರುವ ಫ್ಲ್ಯಾಟ್ ಫಾರ್ಮ್‌‍ನಲ್ಲಿ 110 ಸಿಸಿ ಸ್ಕೂಟರ್ ಅಭಿವೃದ್ಧಿಪಡಿಸಲಿದೆ. ಇನ್ನೊಂದು ಖುಷಿ ಸಂದೇಶವೆಂದರೆ ಪ್ರಸಕ್ತ ಸಾಲಿನ ದ್ವಿತಿಯಾರ್ಧದಲ್ಲೇ ಇದು ಮಾರುಕಟ್ಟೆಯನ್ನು ತಲುಪಲಿದೆ.

ಅಷ್ಟಕ್ಕೂ ಆಕ್ಟಿವಾ ಯಶಸ್ಸನ್ನು ಬೇಧಿಸುವುದು ಸುಲಭ ಮಾತಲ್ಲ ಎಂಬುದನ್ನು ವಿಮರ್ಶಕರು ಅಭಿಪ್ರಾಯಪಡುತ್ತಾರೆ. ಹೋಂಡಾ ಸಂಸ್ಥೆಯು ಇದೀಗಷ್ಟೇ ಆಕ್ಟಿವಾ 3ಜಿ ಎಂಬ ವೆರಿಯಂಟ್ ಕೂಡಾ ಪರಿಚಯಿಸಿತ್ತು. ಅಲ್ಲದೆ 125 ಸಿಸಿ ವಿಭಾಗದಲ್ಲೂ ಆಕ್ಟಿವಾ ತನ್ನ ಅಧಿಪತ್ಯವನ್ನು ಸ್ಥಾಪಿಸುತ್ತಿದೆ. ಹಾಗಿರುವಾಗ ಸ್ಕೂಟರ್ ವಿಭಾಗದಲ್ಲಿ ಈ ಎಲ್ಲ ಸವಾಲುಗಳನ್ನು ಹೀರೊ ಹೇಗೆ ಮೆಟ್ಟಿ ನಿಲ್ಲಲಿದೆ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಲಭ್ಯವಾಗಲಿದೆ.

Article Published On: Tuesday, February 10, 2015, 7:31 [IST]
English summary
Hero MotoCorp will introduce an all-new unisex scooter that will rival India's favourite scooter, the Activa. The Indian manufacturer aims to launch several scooters in India by mid-2015.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+