ಬಲ ವೃದ್ಧಿಸಿಕೊಂಡ ಹೀರೊ ಎಕ್ಸ್‌ಟ್ರೀಮ್ ಸ್ಪೋರ್ಟ್ಸ್ 150 ಸಿಸಿ ಬೈಕ್
ಹೀರೊ ಮೊಟೊಕಾರ್ಪ್ ಬೈಕ್ ಎಂದಾಕ್ಷಣ ಅದರಲ್ಲೇನೋ ಹೊಸತನವಿರುತ್ತದೆ. ಇದೇ ಕಾರಣಕ್ಕಾಗಿ ಕಳೆದ ಕೆಲವು ವರ್ಷಗಳಿಂದ ದೇಶದ ನಂ.1 ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯೆಂಬ ಹೆಸರು ಕಾಯ್ದುಕೊಂಡು ಬಂದಿದೆ.
ನಿಮಗೆಲ್ಲರಿಗೂ ತಿಳಿದಿರುವಂತೆಯೇ ಹೀರೊ ಮೊಟೊಕಾರ್ಪ್ ಎಕ್ಸ್‌ಟ್ರೀಮ್ ಸ್ಪೋರ್ಟ್ಸ್ ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ 149.2 ಸಿಸಿ ಎಂಜಿನ್ ಪಡೆದುಕೊಂಡಿದೆ. ಇದು 12.6 ತಿರುಗುಬಲ ಉತ್ಪಾದಿಸುತ್ತದೆ.

ಈಗ ಬಂದಿರುವ ಮಾಹಿತಿಗಳ ಪ್ರಕಾರ ಹೊಸ ಎಕ್ಸ್‌ಟ್ರೀಮ್ ಸ್ಪೋರ್ಟ್ಸ್ 13.5 ತಿರುಗುಬಲದಲ್ಲಿ 15.2 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಇದು ನಿರ್ವಹಣಾ ಬೈಕ್ ಇಷ್ಟಪಡುವ ಗ್ರಾಹಕರಿಗೆ ಇನ್ನಷ್ಟು ರೋಚಕ ಚಾಲನಾ ಅನುಭವ ನೀಡಲಿದೆ.
ಅಂದ ಹಾಗೆ ಹೀರೊ ಎಕ್ಸ್‌ಟ್ರೀಮ್ ಸ್ಪೋರ್ಟ್ಸ್ 5 ಸ್ಪೀಡ್ ಗೇರ್ ಬಾಕ್ಸ್ ಹೊಂದಿರಲಿದೆ. ಇನ್ನು ಸವಾರರಿಗೆ ಹಿಂದುಗಡೆ ಡಿಸ್ಕ್ ಅಥವಾ ಡ್ರಮ್ ಬ್ರೇಕ್ ಆಯ್ಕೆ ಮಾಡುವ ಅವಕಾಶವಿರಲಿದೆ.

ಬಣ್ಣಗಳು
ಫೆಯರಿ ರೆಡ್,
ಪೈರೊ ಆರೆಂಜ್,
ಪ್ಯಾಂಥರ್ ಬ್ಲ್ಯಾಕ್,
ಮೆರ್ಕ್ಯೂರಿಕ್ ಸಿಲ್ವರ್,
ಬ್ಲ್ಯಾಕ್ ಆಂಡ್ ರೆಡ್
ಬೆಲೆ (ಎಕ್ಸ್ ಶೋ ರೂಂ ಮುಂಬೈ)
ಫ್ರಂಟ್ ಡಿಸ್ಕ್ ಬ್ರೇಕ್ - 73,200 ರು.
ಫ್ರಂಟ್ ಆಂಡ್ ರಿಯರ್ ಡಿಸ್ಕ್ ಬ್ರೇಕ್ - 76,500 ರು.


Click it and Unblock the Notifications








