ಒಸಾಕಾ ಶೋದಲ್ಲಿ ಹೋಂಡಾ ಬುಲ್ ಡಾಗ್ ಕಾನ್ಸೆಪ್ಟ್ ಅನಾವರಣ
ವಾಹನ ತಯಾರಕ ಸಂಸ್ಥೆ ಹಾಗೂ ಸಾಕು ಪ್ರಾಣಿಗಳಿಗೂ ಎಲ್ಲಿಲ್ಲದ ನಂಟು! ವಿಶ್ವದ ಪ್ರಮುಖ ವಾಹನ ತಯಾರಕ ಸಂಸ್ಥೆಗಳು ತನ್ನ ಅಚ್ಚು ಮೆಚ್ಚಿನ ಮಾದರಿಗಳು ವಿಶಿಷ್ಟ ರೀತಿಯಲ್ಲಿ ಗುರುತಿಸಿಕೊಳ್ಳಲು ಹಾಗೂ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಳ್ಳಲು ಪ್ರಾಣಿಗಳ ಹೆಸರನ್ನು ಬಳಕೆ ಮಾಡುತ್ತದೆ.
ಈಗ ಜಪಾನ್ ನಲ್ಲಿ ಸಾಗುತ್ತಿರುವ ಒಸಾಕಾ ಮೋಟಾರ್ ಸೈಕಲ್ ಶೋದಲ್ಲಿ ತವರೂರಿನ ಸಂಸ್ಥೆಯೇ ಆಗಿರುವ ಹೋಂಡಾ ನೂತನ ಬುಲ್ ಡಾಗ್ ಮಾದರಿಯನ್ನು ಅನಾವರಣಗೊಳಿಸಿದೆ. ಇದು ದೊಡ್ಡ ತಲೆಯ ಜಾತಿ ನಾಯಿಯಾದ ಬುಲ್ ಡಾಗ್ ಹೆಸರು ಪಡೆದುಕೊಂಡಿದೆ.

ಈ ಮೂಲಕ ಬುಲ್ ಡಾಗ್ ಮಾದರಿಯ ದೈತ್ಯಕಾರಾವನ್ನು ವರ್ಣಿಸುವ ಪ್ರಯತ್ನ ಮಾಡಲಾಗಿದೆ. ಒಸಾಕಾ ಹಾಗೂ ಟೊಕಿಯೋ ಮೋಟಾರ್ ಸೈಕಲ್ ಶೋದಲ್ಲಿ ಹೋಂಡಾ ಪ್ರದರ್ಶಿಸಲಿರುವ 21 ಮಾದರಿಗಳ ಪೈಕಿ ಇದು ಒಂದಾಗಿದೆ.
ನೂತನ ಬುಲ್ ಡಾಗ್ ಕಾನ್ಸೆಪ್ಟ್ ಇನ್ ಲೈನ್ ಟು ಸಿಲಿಂಡರ್ ಡಿಒಎಚ್ ಸಿ 399 ಸಿಸಿ ಎಂಜಿನ್ ನಿಂದ ನಿಯಿಂತ್ರಿಸ್ಪಡಲಿದ್ದು, 45.35 ಅಶ್ವಶಕ್ತಿ (37 ತಿರುಗುಬಲ) ಉತ್ಪಾದಿಸಲಿದೆ. ಪ್ರಸ್ತುತ ಕಾನ್ಸೆಪ್ಟ್ ವಾಹನ 15 ಇಂಚಿನ ಅಲಾಯ್ ವೀಲ್ ಸಹ ಪಡೆಯಲಿದ್ದು, 6 ಸ್ಪೀಡ್ ಗೇರ್ ಬಾಕ್ಸ್ ಹೊಂದಿರಲಿದೆ.

ಪ್ರವಾಸ ಇಷ್ಟಪಡುವವರಿಗೆ ಹೋಂಡಾ ಬುಲ್ ಡಾಗ್ ಟೂರಿಂಗ್ ಮಾದರಿಯು ನೆಚ್ಚಿನ ಆಯ್ಕೆಯಾಗಲಿದೆ. ಇದರಲ್ಲಿ ಅನೇಕ ಆಕ್ಸೆಸರಿಗಳನ್ನು ಆಳವಡಿಸುವ ಆಯ್ಕೆಯೂ ಇರುತ್ತದೆ. ಇನ್ನು ಬೆಲೆ ಹಾಗೂ ವೈಶಿಷ್ಟ್ಯ ಇತ್ಯಾದಿ ಮಾಹಿತಿಗಳು ಇನ್ನಷ್ಟೇ ಹೊರಬೇಕಾಗಿದೆ. ಪ್ರಸ್ತುತ ಹೋಂಡಾ ಬುಲ್ ಡಾಗ್ ಭಾರತಕ್ಕೆ ಬಂದರೆ ಮೋಡಿ ಮಾಡಬಹುದೇ? ಈ ಬಗ್ಗೆ ಕೆಳಗೆ ಕೊಟ್ಟಿರುವ ಕಾಮೆಂಟ್ ಬಾಕ್ಸ್ ಮೂಲಕ ನೀವೂ ಪ್ರತಿಕ್ರಿಯಿಸಿರಿ.



Click it and Unblock the Notifications








