ಹೋಂಡಾ ಸಿಬಿ ಟ್ವಿಸ್ಟರ್ ಸ್ಥಾನಕ್ಕೆ ಹೊಸ ಬೈಕ್ ಲಿವೊ ?
ವರ್ಷಗಳಿಂದಲೂ ತನ್ನ ವಿಶ್ವಾಸಾರ್ಹತೆಯನ್ನು ಕಾಯ್ದುಕೊಂಡಿರುವ ಹೋಂಡಾ ಸಂಸ್ಥೆಯು ಈಗ ಆಧುನಿಕತೆಗೆ ತಕ್ಕಂತೆ ತನ್ನ ಶ್ರೇಣಿಯ ಬೈಕ್ ಗಳನ್ನು ಬದಲಾಯಿಸುವ ಇರಾದೆಯಲ್ಲಿದೆ.
ಹೊಸ ಬೈಕ್ ಗಳು ಈಗ ಮಾರಾಟದಲ್ಲಿರುವ ಕೆಲವು ಮಾದರಿಗಳ ಸ್ಥಾನವನ್ನು ತುಂಬಲಿದೆ. ಈ ಪೈಕಿ ಸಿಬಿ ಸ್ವಿಸ್ಟರ್ ಸ್ಥಾನಕ್ಕೆ ಹೊಸ ಬೈಕ್ ಪರಿಚಯವಾಗಲಿದೆ.

ಭಾರತದಲ್ಲಿ ಸಿಬಿ ಟ್ವಿಸ್ಟರ್ ಬದಲಾಯಿಸುವ ಇರಾದೆಯನ್ನು ಜಪಾನ್ ನ ಈ ಐಕಾನಿಕ್ ಸಂಸ್ಥೆಯು ಹೊಂದಿದೆ. ಇದರಂತೆ ನೂತನ ಲಿವೊ (livo) ಇದರ ಸ್ಥಾನವನ್ನು ತುಂಬಲಿದೆ.
ನೂತನ ಲಿವೊ ಹೆಚ್ಚು ಆಕ್ರಮಣಕಾರಿ ವಿನ್ಯಾಸವನ್ನು ಪಡೆದುಕೊಂಡಿದ್ದು, ಯೂನಿಕಾರ್ನ್‌ನಿಂದ ವಿನ್ಯಾಸ ಆಮದು ಮಾಡಿಕೊಳ್ಳಲಾಗಿದೆ. ಇದರಲ್ಲಿ ನೂತನ ಎಂಜಿನ್ ಬಳಕೆಯಾಗುವ ಸಾಧ್ಯತೆಯಿದೆ.
ಇತ್ತೀಚೆಗಿನ ಕೆಲವು ಸಮಯಗಳಿಂದ ಟ್ವಿಸ್ಟರ್ ಮಾರಾಟ ಕುಂಠಿತವಾಗಿದೆ. ಇದನ್ನು ಗಮನಲ್ಲಿಟ್ಟುಕೊಂಡಿರುವ ಹೋಂಡಾ ಹೊಸ ಬೈಕ್ ಪರಿಚಯಿಸುವ ಯೋಜನೆಯಲ್ಲಿದೆ. ಇದು ಪ್ರಸಕ್ತ ಸಾಲಿನಲ್ಲಿ ಸಂಸ್ಥೆ ಬಿಡುಗಡೆ ಮಾಡಲಿರುವ 15 ಮಾದರಿಗಳ ಭಾಗವಾಗಿರಲಿದೆ.


Click it and Unblock the Notifications