ಒಂದು ಲಕ್ಷ ಮಾರಾಟ ಮೈಲುಗಲ್ಲು ತಲುಪಿದ ಹೋಂಡಾ ಯೂನಿಕಾರ್ನ್ 160

Written By:

ಪ್ರೀಮಿಯಂ ಪ್ರಯಾಣಿಕ ದ್ವಿಚಕ್ರ ವಿಭಾಗದಲ್ಲಿ ಅತ್ಯುತ್ತಮ ಸಾನಿಧ್ಯನವನ್ನು ವ್ಯಕ್ತಪಡಿಸಿರುವ ಭಾರತದ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ ಮೋಟಾರ್ ಸೈಕಲ್ಸ್ ಆಂಡ್ ಸ್ಕೂಟರ್ ಇಂಡಿಯಾದ (ಎಚ್‌ಎಂಎಸ್‌ಐ) ಜನಪ್ರಿಯ ಸಿಬಿ ಯೂನಿಕಾರ್ನ್ 160 ಮಾದರಿಯು ಒಂದು ಲಕ್ಷಗಳ ಮಾರಾಟ ಮೈಲುಗಲ್ಲನ್ನು ತಲುಪಿದೆ.

2014 ವರ್ಷಾಂತ್ಯದಲ್ಲಿ ಹೊಸ ಸ್ವರೂಪದೊಂದಿಗೆ ಬಿಡುಗಡೆಗೊಂಡಿದ್ದ ಯೂನಿಕಾರ್ನ್ 160, ಕಳೆದ ಎಂಟು ತಿಂಗಳಲ್ಲಿ ವಾಹನ ಪ್ರೇಮಿಗಲ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದರ 163 ಸಿಸಿ ಎಂಜಿನ್ 14.6 ತಿರುಗುಬಲದಲ್ಲಿ 14.5 ಅಶ್ವಶಕ್ತಿ ಉತ್ಪಾದಿಸುತ್ತದೆ.

To Follow DriveSpark On Facebook, Click The Like Button
ಸಿಬಿ ಯೂನಿಕಾರ್ನ್ 160

ಪ್ರತಿ ತಿಂಗಳಲ್ಲೂ 13,500ದಿಂದ 15,600 ಯುನಿಟ್ ಗಳ ಸರಾಸರಿ ಮಾರಾಟವವನ್ನು ಕಾಯ್ದುಕೊಂಡಿರುವ ಪ್ರೀಮಿಯಂ ಪ್ರಯಾಣಿಕ ವಿಭಾಗದಲ್ಲಿ ಗ್ರಾಹಕರಿಗೆ ಅತ್ಯುತ್ತಮ ಆಯ್ಕೆಯನ್ನು ಒದಗಿಸುತ್ತದೆ. ಅಲ್ಲದೆ ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ತಮಿಳುನಾಡಗಗಳಂತಹ ರಾಜ್ಯಗಳಲ್ಲಿ ಹೆಚ್ಚಿನ ಬೇಡಿಕೆ ದಾಖಲಾಗಿದೆ.

ಹೋಂಡಾ ಸಿಬಿ ಯೂನಿಕಾರ್ನ್ 160 ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಹಾಗೂ ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಗಳನ್ನು ಪಡೆದುಕೊಂಡಿದೆ. ಅಲ್ಲದೆ ಇಂಪಿರಿಯಲ್ ರೆಡ್ ಮೆಟ್ಯಾಲಿಕ್, ಗೆನಿ ಗ್ರೇ ಮೆಟ್ಯಾಲಿಕ್, ಪಿಯರ್ಲ್ ಇಗ್ನೇಷಿಯಸ್ ಬ್ಲ್ಯಾಕ್ ಮತ್ತು ಪಿಯರ್ಲ್ ಅಮೇಜಿಂಗ್ ವೈಟ್ ಗಳೆಂಬ ನಾಲ್ಕು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

English summary
Japanese based manufacturer has managed to sell over 1,00,000 units of CB Unicorn motorcycle since launch.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark