ಪವರ್‌ಫುಲ್ ಸಿಬಿಆರ್400ಆರ್; ಒಮ್ಮೆ ಓಡಿಸಿ ನೋಡ್ತೀರಾ?
ವಿಶ್ವ ಪ್ರಸಿದ್ಧ ಟೋಕಿಯೋ ಮೋಟಾರು ಶೋದಲ್ಲಿ ತವರೂರಿನ ಸಂಸ್ಥೆ ಹೋಂಡಾ, ಮಗದೊಂದು ಶಕ್ತಿಶಾಲಿ ಬೈಕ್ ಅನಾವರಣಗೊಳಿಸಿದೆ. ಅದುವೇ
2016 ಸಿಬಿಆರ್400ಆರ್
ದ್ವಿಚಕ್ರ ವಿಭಾಗದಲ್ಲಿ ಪಾರುಪತ್ಯ ಸ್ಥಾಪಿಸಿರುವ ಹೋಂಡಾ ಹೊಸ ಉತ್ಪನ್ನವನ್ನು ಬೈಕ್ ಪ್ರೇಮಿಗಳು ಅತ್ಯಂತ ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಇದರೊಂದಿಗೆ ಸಿಬಿಆರ್ ಸಾಲಿಗೆ ಮಗದೊಂದು ಸೂಪರ್ ಬೈಕ್ ಸೇರ್ಪಡೆಯಾಗಿದೆ.

ಮುಂದಿನ ವರ್ಷ ಅನೇಕ ಜಾಗತಿಕ ಮಾರುಕಟ್ಟೆಗಳಿಗೆ 2016 ಸಿಬಿಆರ್400 ಆರ್ ಪರಿಚಯವಾಗಲಿದೆ. ಇದು 399 ಸಿಸಿ ಪ್ಯಾರಲಲ್ ಟ್ವಿನ್ ಲಿಕ್ವಿಡ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 37 ಎನ್‌ಎಂ ತಿರುಗುಬಲದಲ್ಲಿ 45.37 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಂತೆಯೇ 6 ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರಲಿದೆ.
ಹೊಸ ಎಕ್ಸಾಸ್ಟ್ ಸಿಸ್ಟಂ ನೂತನ ಸಿಬಿಆರ್400ಆರ್ ಮಾದರಿಯಲ್ಲಿ ಕಾಣಬಹುದಾಗಿದೆ. ಇನ್ನು ಫೇರಿಂಗ್ ವ್ಯವಸ್ಥೆಯಲ್ಲಿ ಬಂಗಾರದ ಬಣ್ಣವು ಪ್ರಮುಖ ಆಕರ್ಷಣೆಯಾಗಲಿದೆ. ಒಟ್ಟಿನಲ್ಲಿ ಹೆಚ್ಚಿನ ಕ್ರೀಡಾತ್ಮಕ ವಿನ್ಯಾಸಕ್ಕೆ ಆದ್ಯತೆ ಕೊಡಲಾಗಿದೆ.

2016 ಆಟೋ ಎಕ್ಸ್ ಪೋದಲ್ಲೂ ಹೋಂಡಾ ಸಿಬಿಆರ್400ಆರ್ ಅನಾವರಣಗೊಳ್ಳಲಿದೆ. ಈ ಮೂಲಕ ಭಾರತದಲ್ಲೂ ತನ್ನ ಶಕ್ತಿ ಪ್ರದರ್ಶನ ನಡೆಸಲಿದೆ.


Click it and Unblock the Notifications