ಹೋಂಡಾ ಒಂದೇ ದಿನದಲ್ಲಿ 56,000 ಮೋಟಾರುಸೈಕಲ್ ಮಾರಾಟ

Written By:

ದೇಶದ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ ಮೋಟಾರ್ ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ (ಎಚ್‌ಎಂಎಸ್‌ಐ) ಸಂಸ್ಥೆಯು ಒಂದೇ ದಿನದಲ್ಲಿ 56,000ದಷ್ಟು ಮೋಟಾರುಸೈಕಲ್ ಗಳನ್ನು (ಬೈಕ್ ಹಾಗೂ ಸ್ಕೂಟರ್) ಮಾರಾಟ ಮಾಡುವ ಮೂಲಕ ಹೊಸ ಉತ್ತುಂಗಕ್ಕೇರಿದೆ.

ಗಣೇಶ ಚತುರ್ಥಿ ಹಾಗೂ ವಿಶ್ವಕರ್ಮ ಜಯಂತಿ ಹಬ್ಬಗಳು ಹೋಂಡಾ ಗರಿಷ್ಠ ಮಾರಾಟಕ್ಕೆ ಉತ್ತೇಜನ ನೀಡಿದ್ದವು. ಇದು ಕಳೆದ ವರ್ಷದ ಗಣೇಶ ಚತುರ್ಥಿ ದಿನದ ಮಾರಾಟಕ್ಕಿಂತಲೂ ಈ ಬಾರಿ ಶೇಕಡಾ 40ರಷ್ಟು ಹೆಚ್ಚಳಗೊಂಡಿದೆ ಎಂದು ಸಂಸ್ಥೆಯು ತಿಳಿಸಿದೆ.

To Follow DriveSpark On Facebook, Click The Like Button
ಹೋಂಡಾ ಆಕ್ಟಿವಾ

ಈ ನಡುವೆ ತನ್ನ ಜನಪ್ರಿಯ ಸಿಬಿ ಶೈನ್ ಮಾದಿರಿಗೆ ಆಕರ್ಷಕ ಆಫರ್ ನೊಂದಿಗೆ ಹೋಂಡಾ ಸಂಸ್ಥೆಯು ಮುಂದೆ ಬಂದಿದೆ. (ಸಮಗ್ರ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿರಿ)

ಸ್ಪ್ಲೆಂಡರ್ ನಂತರ ಜನಪ್ರಿಯ ಬೈಕ್ ಮಾರಾಟವನ್ನೇ ಹಿಂದಿಕ್ಕಿರುವ ಹೋಂಡಾ ಆಕ್ಟಿವಾ ಅನೇಕ ಬಾರಿ ಮಾಸಿಕ ಮಾರಾಟದಲ್ಲಿ ನಂ.1 ಪಟ್ಟವನ್ನು ಗಿಟ್ಟಿಸಿಕೊಂಡಿರುವುದನ್ನು ನೀವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

English summary
Honda India Sells 56,000 Scooters & Motorcycles In A Single Day
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark