ಹೀರೊ ತಂತ್ರಕ್ಕೆ ಪ್ರತಿತಂತ್ರ ಹೆಣೆದ ಹೋಂಡಾ

Written By:

ಈಗಷ್ಟೇ ದೇಶದ ಎರಡು ಅಗ್ರಗಣ್ಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಗಳ ನಡುವೆ ಮೈಲೇಜ್ ವಾರ್ (ಯುದ್ಧ) ಏರ್ಪಟ್ಟಿತ್ತು. ಇದರ ಬಗ್ಗೆ ನಾವು ವಿಸೃತವಾದ ವರದಿಯನ್ನು ಮಾಡಿರುತ್ತೇವೆ.

ಇಲ್ಲಿಗೆ ಎರಡು ಸಂಸ್ಥೆಗಳ ನಡುವಣ ಪೈಪೋಟಿ ಕೊನೆಗೊಳ್ಳುವುದಿಲ್ಲ. ಹೀರೊ ತಂತ್ರಕ್ಕೆ ಪ್ರತಿತಂತ್ರ ಹೆಣೆದಿರುವ ಹೋಂಡಾ ನೂತನ ತಂತ್ರಜ್ಞಾನದೊಂದಿಗೆ ಮುಂದೆ ಬರುತ್ತಿದೆ.

honda cb shine

ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಹೀರೊದ ಐಸ್ಮಾರ್ಟ್ ತಂತ್ರಗಾರಿಕೆಯು ಹೆಚ್ಚಿನ ಜನಪ್ರಿತೆಗೆ ಕಾರಣವಾಗಿತ್ತು. ಇದು ಮಾರಾಟದಲ್ಲೂ ಪ್ರತಿಫಲಿಸಿತ್ತಲ್ಲದೆ ಅತ್ಯುತ್ತಮ ಇಂಧನ ಕ್ಷಮತೆ ಕಾಪಾಡುವಲ್ಲಿ ಯಶಸ್ವಿಯಾಗಿತ್ತು.

ಈಗ ಹೀರೊ ತಂತ್ರಕ್ಕೆ ಪ್ರತಿತಂತ್ರವಾಗಿ ಮುಂದೆ ಬಂದಿರುವ ಹೋಂಡಾ ಇಸಿಪಿ ತಂತ್ರಜ್ಞಾನವನ್ನು ಅವಿಷ್ಕರಿಸಲಿದೆ. ಅತಿ ಹೆಚ್ಚು ಮಾರಾಟವಾಗುತ್ತಿರುವ ಸಿಬಿ ಶೈನ್ ಸೇರಿದಂತೆ ತನ್ನ ಜನಪ್ರಿಯ ಮಾದರಿಗಳಲ್ಲಿ ಇದನ್ನು ಪರಿಚಯಿಸುವುದು ಸಂಸ್ಥೆಯ ಗುರಿಯಾಗಿದೆ.

ಹೀರೊ ಐಸ್ಮಾರ್ಟ್ ತಂತ್ರಗಾರಿಕೆಯನ್ನು ಹೊಂದಿರುವ ಸ್ಪ್ಲೆಂಡರ್ ಐಸ್ಮಾರ್ಟ್ ಬೈಕ್ ಗರಿಷ್ಠ ಲೀಟರ್ ಗೆ 102.5 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಇದು ಹೋಂಡಾ ಸಂಸ್ಥೆಯನ್ನು ಕೆರಳಿಸುವಂತೆ ಮಾಡಿತ್ತು.

English summary
Hero MotoCorp and Honda are two manufacturers that sell the most commuter motorcycles in India.The Indian and Japanese manufacturer are constantly trying to improve their products.
Story first published: Saturday, May 9, 2015, 11:06 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark