ಎಂಜಿನ್ ದೋಷ: ಸಿಬಿಆರ್150ಆರ್ ಮತ್ತು ಸಿಬಿಆರ್250ಆರ್ ಹಿಂದಕ್ಕೆ ಕರೆ
ದೇಶದಲ್ಲಿ ಮಾರಾಟವಾಗುತ್ತಿರುವ ಹೋಂಡಾದ ಎರಡು ಜನಪ್ರಿಯ ಸೂಪರ್ ಬೈಕ್ ಗಳ ಎಂಜಿನ್ ಗಳಲ್ಲಿ ದೋಷ ಕಂಡುಬಂದಿರುವ ಹಿನ್ನೆಲೆಯಲ್ಲಿ ಜಪಾನ್ ಮೂಲದ ಈ ಪ್ರಖ್ಯಾತ ಸಂಸ್ಥೆಯು, ಸಿಬಿಆರ್150ಆರ್ ಮತ್ತು ಸಿಬಿಆರ್250ಆರ್ ಮಾದರಿಗಳಿಗೆ ಹಿಂದಕ್ಕೆ ಕರೆ ನೀಡಿದೆ.
ಹೋಂಡಾದ ಮಾನೇಸರ್ ಘಟಕದಲ್ಲಿ 2014 ಜುಲೈನಿಂದ 2015 ಜೂನ್ ತಿಂಗಳ ವರೆಗೆ ಜೋಡಣೆಯಾಗಿರುವ ಈ ನಿರ್ದಿಷ್ಟ ಮಾದರಿಗಳಲ್ಲಿ ತೊಂದರೆ ಕಾಣಿಸಿಕೊಂಡಿರುವುದಾಗಿ ಸಂಸ್ಥೆಯು ಸ್ಪಷ್ಟನೆ ನೀಡಿದೆ.

ಈಗ ಸಂಪೂರ್ಣ ಉಚಿತವಾಗಿ ಸಮಸ್ಯೆ ಬಗೆಹರಿಸಿಕೊಡಲಾಗುತ್ತಿದೆ. ಸ್ಟ್ಯಾರ್ಟರ್ ರಿಲೇ ಸ್ವಿಚ್ ಜೋಡಣೆಯಲ್ಲಿ ಕೆಲವೊಂದು ದೋಷಗಳನ್ನು ಎಂಜಿನಿಯರ್ ಗಳು ಪತ್ತೆ ಹಚ್ಚಿದ್ದಾರೆ ಎಂದು ಸಂಸ್ಥೆಯು ವಿವರಿಸಿದೆ.
ಭಾರತದಲ್ಲಿ ಕಂಪ್ಲೀಟ್ ನೌಕ್ಡ್ ಡೌನ್ (ಸಿಕೆಡಿ) ಮುಂಖಾತರ ಸಿಬಿಆರ್150ಆರ್ ಮತ್ತು ಸಿಬಿಆರ್250ಆರ್ ಮಾದರಿಗಳು ಮಾರಾಟವಾಗುತ್ತಿದೆ. ಅಲ್ಲದೆ ಇವೆರಡರ ದರಗಳು ಅನುಕ್ರಮವಾಗಿ 1.29 ಹಾಗೂ 1.67 ಲಕ್ಷ ರು.ಗಳಷ್ಟಿದೆ (ಮುಂಬೈ ಎಕ್ಸ್ ಶೋ ರೂಂ).

ಇತ್ತೀಚೆಗಷ್ಟೇ ಹೋಂಡಾ ರೇವ್ ಫೆಸ್ಟ್ ನಲ್ಲಿ ಸಿಬಿಆರ್150ಆರ್ ಮತ್ತು ಸಿಬಿಆರ್250ಆರ್ ಮಾದರಿಗಳಿಗೆ ಹೊಸ ಬಣ್ಣಗಳ ಆಯ್ಕೆಯನ್ನು ಹೋಂಡಾ ನೀಡಿತ್ತು.


Click it and Unblock the Notifications