ಹೋಂಡಾದಿಂದ ನಾಲ್ಕು ತಿಂಗಳೊಳಗೆ ನಾಲ್ಕು ಹೊಸ ಮಾದರಿ ಬಿಡುಗಡೆ
ವಾಹನ ಪ್ರೇಮಿಗಳೇ ಕಾದಿರಿ! ದೇಶದ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ ಟು ವೀಲರ್ಸ್, ಮುಂಬರುವ ನಾಲ್ಕು ತಿಂಗಳೊಳಗೆ ನಾಲ್ಕು ಹೊಸ ಮಾದರಿಗಳನ್ನು ಬಿಡುಗಡೆ ಮಾಡಲಿದೆ.
ಪ್ರಸಕ್ತ ಸಾಲಿನಲ್ಲಿ ಇನ್ನು ನಾಲ್ಕು ತಿಂಗಳುಗಳು ಮಾತ್ರ ಬಾಕಿ ಉಳಿದಿರುವಂತೆಯೇ ಹೋಂಡಾದಿಂದ ಈ ಮಹತ್ವದ ಘೋಷಣೆ ಹೊರಬಿದ್ದಿದೆ. ಸಂಸ್ಥೆಯು ಇತ್ತೀಚೆಗಷ್ಟೇ 110ಸಿಸಿ ಲಿವೊ ಹಾಗೂ ಸಿಬಿಆರ್ 650 ಮಾದರಿಗಳನ್ನು ಬಿಡುಗಡೆಗೊಳಿಸಿತ್ತು.

ಹೀರೊದಿಂದ ಎರಡು ಹೊಸ ಸ್ಕೂಟರ್...
ಈ ನಡುವೆ ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೀರೊ ಮುಂಬರುವ ಹಬ್ಬದ ಆವೃತ್ತಿಯ ವೇಳೆಯಾಗುವಾಗ ಎರಡು ಹೊಸ ಸ್ಕೂಟರ್ ಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.
ಕಳೆದ ವರ್ಷಕ್ಕೆ ಹೋಲಿಸಿದಾಗ ಈ ಬಾರಿ ಆಗಸ್ಟ್ ತಿಂಗಳಲ್ಲಿ ಹೀರೊ ಮಾರಾಟ ಕುಸಿತ ಕಂಡಿದೆ. ಹಬ್ಬದ ಆವೃತ್ತಿಯ ಆರಂಭವು ಸ್ವಲ್ಪ ವಿಳಂಬವಾಗಿರುವುದೇ ಇದಕ್ಕಿರುವ ಕಾರಣವಾಗಿದೆ ಎಂದು ಸಂಸ್ಥೆಯು ತಿಳಿಸಿದೆ.
ಅಲ್ಲದೆ ಹಬ್ಬದ ಆವೃತ್ತಿಯ ವೇಳೆಯಾಗುವಾಗ ಎರಡು ಹೊಸ ಸ್ಕೂಟರ್ ಗಳನ್ನು ಬೆನ್ನಲ್ಲೇ ನೂತನ ಬೈಕ್ ಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಇವೆಲ್ಲವೂ ಗರಿಷ್ಠ ಮಾರಾಟ ಗಿಟ್ಟಿಸಿಕೊಳ್ಳಲು ನೆರವಾಗಲಿದೆ.


Click it and Unblock the Notifications