ಹೋಂಡಾ ಯೂನಿಕಾರ್ನ್ ಮಾರಾಟ ನಿಲುಗಡೆ?
ಹ್ಹಾಂ! ಇದೇನಿದು ? ಗಾಬರಿಯಾಗದಿರಿ. ಹೋಂಡಾ ಯೂನಿಕಾರ್ನ್ 150 ಸಿಸಿ ಬೈಕ್ ಮಾರಾಟ ನಿಲುಗಡೆಯಾಗಿರುವುದು ನಿಜ. ಇದರ ಬದಲು ಹೆಚ್ಚು ಶಕ್ತಿಶಾಲಿ 160 ಸಿಸಿ ಯೂನಿಕಾರ್ನ್ ಖರೀದಿಗೆ ಲಭ್ಯವಾಗಲಿದೆ. ಸಂಸ್ಥೆಯ ಅಧಿಕೃತ ವೆಬ್ ಸೈಟ್‌ನಿಂದ ಯೂನಿಕಾರ್ನ್ 150 ಸಿಸಿ ಮಾಹಿತಿಯನ್ನು ತೆಗೆದು ಹಾಕಿದ ಮೇಲೆ ಈ ಎಲ್ಲ ಆತಂಕ ಕ್ಷಣಗಳು ಹುಟ್ಟಿಕೊಂಡಿತ್ತು.
ನಿಮಗೆಲ್ಲರಿಗೂ ತಿಳಿದಿರುವಂತೆಯೇ ಕೆಲವು ಸಮಯಗಳ ಹಿಂದೆಯಷ್ಟೇ ಪರಿಷ್ಕೃತ ಯೂನಿಕಾರ್ನ್ ಮಾದರಿಯನ್ನು ದೇಶದ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ ಪರಿಚಯಿಸಿತ್ತು. ಇದರೊಂದಿಗೆ ಹಳೆಯ ಮಾದರಿಯ ಮಾರಾಟಕ್ಕೆ ಬ್ರೇಕ್ ಹಾಕಲಾಗಿದೆ.

ಎಂಟ್ರಿ ವೆಲೆವ್ ನಿರ್ವಹಣಾ ಬೈಕ್ ಗಳಲ್ಲಿ ಯೂನಿಕಾರ್ನ್ ಈಗಾಗಲೇ ತನ್ನದೇ ಆದ ಛಾಪನ್ನು ಒತ್ತಿದೆ. ನಿರ್ವಹಣೆಯಿಂದ ಹಿಡಿದು ಆರಾಮದಯಕ, ಅನುಕೂಲ, ವಿಶ್ವಸಾರ್ಹತೆ ಹಾಗೂ ಬಜೆಟ್ ವಿಷಯದಲ್ಲಿ ಜನ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
2005ನೇ ಇಸವಿಯಿಂದಲೇ ಸಿಬಿ ಯೂನಿಕಾರ್ನ್ 150 ಸಿಸಿ ಬೈಕ್ ಮಾರಾಟದಲ್ಲಿದೆ. ಅಲ್ಲದೆ 2014 ಡಿಸೆಂಬರ್ ತಿಂಗಳಿನಲ್ಲಷ್ಟೇ ಹೊಸ ಯೂನಿಕಾರ್ನ್ ಪರಿಚಯಿಸಲಾಗಿತ್ತು. ಇದರಂತೆ ಹಳೆಯ ಮಾದರಿಯ ಮಾರಾಟವನ್ನು ನಿಲುಗಡೆಗೊಳಿಸಲಾಗಿದೆ.
160 ಸಿಸಿ ಯೂನಿಕಾರ್ನ್ ವಿಶೇಷತೆ:
- ಎಂಜಿನ್: 163 ಸಿಸಿ, ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಪೆಟ್ರೋಲ್ ಎಂಜಿನ್
- ಅಶ್ವಶಕ್ತಿ: 14.5
- ತಿರುಗುಬಲ: 14.61 ತಿರುಗುಬಲ
- ತಂತ್ರಜ್ಞಾನ: ಹೋಂಡಾ ಇಕೊ ಟೆಕ್ನಾಲಜಿ (ಎಚ್ ಇಟಿ), ಕಂಬೈನ್ಡ್ ಬ್ರೇಕಿಂಗ್ ಸಿಸ್ಟಂ (ಸಿಬಿಎಸ್)
- ಗೇರ್ ಬಾಕ್ಸ್: 5 ಸ್ಪೀಡ್


Click it and Unblock the Notifications