ಇಂಡೋನೇಷ್ಯಾ ಹಿಂದಿಕ್ಕಲಿರುವ ಹೋಂಡಾಗೆ ಭಾರತವೇ ನಂ.1

Written By:

ಇಂಡೋನೇಷ್ಯಾ ಹಿಂದಿಕ್ಕಲಿರುವ ಹೋಂಡಾ ಟು ವೀಲರ್ಸ್ ಸಂಸ್ಥೆಗೆ ಭಾರತವೇ ನಂ.1 ಎನಿಸಿಕೊಳ್ಳಲಿದೆ. ಅಧ್ಯಯನ ವರದಿಗಳ ಪ್ರಕಾರ ಭಾರತದಲ್ಲಿ ಹೋಂಡಾ ದ್ವಿಚಕ್ರ ವಾಹನಗಳಿಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದ್ದು, ಮುಂದಿನ ಸಾಲಿನಲ್ಲಿ ಸಂಸ್ಥೆಯ ಅಗ್ರ ಮಾರುಕಟ್ಟೆಯಾಗಿ ಪರಿವರ್ತನೆಗೊಳ್ಳಲಿದೆ.

ಭಾರತ ಹಾಗೂ ನೆರೆಯ ಪಾಕಿಸ್ತಾನ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಗಳಂತಹ ರಾಷ್ಟ್ರಗಳು ಸೇರಿ 2020ರ ವೇಳೆಯಾಗುವ 20 ಮಿಲಿಯನ್ ಯುನಿಟ್ ಗಳ ಮಾರಾಟದ ಗುರಿ ಮುಟ್ಟಲಿದೆ. ಇನ್ನೊಂದೆಡೆ ವಿಯೆಟ್ನಾ, ಇಂಡೋನೇಷ್ಯಾ ಮತ್ತು ಥಾಯ್ಲೆಂಡ್ ಗಳಲ್ಲಿ ಹಿನ್ನಡೆ ಅನುಭವಿಸುತ್ತಿದೆ.

ಹೋಂಡಾ ಟು ವೀಲರ್ಸ್

2020ರ ವೇಳೆಯಾಗುವಾಗ ಭಾರತದಲ್ಲಿ ಮಾತ್ರವಾಗಿ ಏಳರಿಂದ ಎಂಟು ಮಿಲಿಯನ್ ದಾಖಲಾಗಲಿದೆ ಎಂದು ಅಂದಾಜಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಸಂಸ್ಥೆಯು ದೇಶದಲ್ಲಿ 4.5 ಮಿಲಿಯನ್ ಮಾರಾಟ ದಾಖಲಿಸುವ ಸಾಧ್ಯತೆಯಿದೆ.

ಕಳೆದ ನಾಲ್ಕು ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚು ಮಾರಾಟ ದಾಖಲಿಸಿರುವ ಹೋಂಡಾ ಮೋಟಾರ್ ಸೈಕಲ್ಸ್ ಆ್ಯಂಡ್ ಸ್ಕೂಟರ್ಸ್ ಇಂಡಿಯಾ ಸಂಸ್ಥೆಯು 2015ನೇ ಸಾಲಿನಲ್ಲಿ 4.45 ಮಿಲಿಯನ್ ಯುನಿಟ್ ಗಳ ಮಾರಾಟವನ್ನು ದಾಖಲಿಸಿದೆ. ಅಲ್ಲದೆ 2016ರಲ್ಲಿ 4.7 ಮಿಲಿಯನ್ ಹಾಗೂ 2017ರಲ್ಲಿ 6.4 ಮಿಲಿಯನ್ ಗಳ ಗುರಿಯಿರಿಸಿಕೊಂಡಿದೆ.

English summary
India Might Beat Indonesia To Become Honda's Largest Market
Story first published: Friday, November 6, 2015, 8:22 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark