ವಾರೆವ್ಹಾ...ಅಗ್ಗವಾಯ್ತು ಕವಾಸಕಿ ಝಡ್800

By Nagaraja

ಹೊಸ ವರ್ಷ ಆಗಮನವಾದಂತೆ ಬೆಲೆ ಏರಿಕೆ ಘೋಷಿಸಿರುವ ಬಹುತೇಕ ಎಲ್ಲ ಕಾರು ತಯಾರಿಕ ಸಂಸ್ಥೆಗಳು ಗ್ರಾಹಕರಿಗೆ ದೊಡ್ಡ ಆಘಾತವನ್ನೇ ನೀಡಿತ್ತು.

ಈ ನಡುವೆ ಜಪಾನ್ ಮೂಲದ ಐಕಾನಿಕ್ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಕವಾಸಕಿ ಇಂಡಿಯಾ ತನ್ನ ಜನಪ್ರಿಯ ಝಡ್800 ಮಾದರಿಗೆ ದರ ಕಡಿತಗೊಳಿಸುವ ಮೂಲಕ ಗಮನ ಸೆಳೆದಿದೆ.

ನಮಗೆ ಲಭ್ಯವಿರುವ ಖಚಿತ ಮಾಹಿತಿಯ ಪ್ರಕಾರ ಕವಾಸಕಿ ಇಂಡಿಯಾವು ತನ್ನ ಫ್ಲ್ಯಾಗ್ ಶಿಪ್ ಮಾದರಿಯಾಗಿರುವ ಝಡ್800 ಮಾದರಿಗೆ 55,000 ರು.ಗಳಷ್ಟು ಬೆಲೆ ಕಡಿಮೆಗೊಳಿಸಿದೆ. ಈ ಲಾಭವನ್ನು ಗ್ರಾಹಕರು 2015 ಮಾರ್ಚ್ ತಿಂಗಳ ವರೆಗೆ ಪಡೆಯಬಹುದಾಗಿದೆ.

kawasaki z800

ಈ ಮೊದಲು ಕವಾಸಿ ಝಡ್800 ಎಕ್ಸ್ ಶೋ ರೂಂ ಬೆಲೆ 7.9 ಲಕ್ಷ ರು.ಗಳಷ್ಟಿತ್ತು. ಈವಾಗ ಈ ಆರ್ಥಿಕ ಸಾಲಿನ ಕೊನೆಯ ತ್ರೈಮಾಸಿಕ ಅವಧಿಯಲ್ಲಿ ಬೆಲೆ ಕಡಿತ ಮಾಡುವುದರೊಂದಿಗೆ ಝಡ್800 ಬೆಲೆ 7.35 ಲಕ್ಷ ರು.ಗಳಿಗೆ (ಎಕ್ಸ್ ಶೋ ರೂಂ) ಕುಸಿತ ಕಂಡಿದೆ.

ಇದೀಗ ಕವಾಸಕಿ ಝಡ್800 ಮಾದರಿಯು ಟ್ರಯಂಪ್ ಸ್ಟ್ರೀಮ್ ಟ್ರಿಪಲ್ ಮಾದರಿಗಿಂತಲೂ 30,000 ರು.ಗಳಷ್ಟು ಅಗ್ಗವೆನಿಸಿದೆ. ಟ್ರಯಂಪ್ ಸ್ಟ್ರೀಟ್ ಟ್ರಿಪಲ್ ದೆಹಲಿ ಎಕ್ಸ್ ಶೋ ರೂಂ ಬೆಲೆ 7.65 ಲಕ್ಷ ರು.ಗಳಿಷ್ಟಿದೆ.

ಅಂದ ಹಾಗೆ 806ಸಿಸಿ ಲಿಕ್ವಿಡ್ ಕೂಲ್ಡ್ ಇನ್ ಲೈನ್ ಫೋರ್ ಮಿಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಕವಾಸಕಿ ಝಡ್800, 113 ಪಿಎಸ್ ಪವರ್ (83.0 ಎನ್‌ಎಂ ಟಾರ್ಕ್) ಉತ್ಪಾದಿಸುತ್ತಿದ್ದು, ಸಿಕ್ಸ್ ಸ್ಪಿಡ್ ಟ್ರಾನ್ಸ್‌ಮಿಷನ್ ಸಹ ಇರಲಿದೆ. ಹಾಗೆಯೇ ಥಾಯ್ಲೆಂಡ್ ಘಟಕದಲ್ಲಿ ನಿರ್ಮಾಣ ವೆಚ್ಚ ಕಡಿತ ಮಾಡಲು ಸಾಧ್ಯವಾಗಿರುವುದೇ ಕಂಪ್ಲೀಟ್ ಬಿಲ್ಡ್ ಯುನಿಟ್ ಮೂಲಕ ಭಾರತವನ್ನು ಪ್ರವೇಶಿಸುತ್ತಿರುವ ಝಡ್800 ಬೆಲೆ ಕಡಿತಗೊಳಿಸಲು ಸಂಸ್ಥೆಗೆ ಸಾಧ್ಯವಾಗಿದೆ.

More from DriveSpark

Article Published On: Friday, January 9, 2015, 16:48 [IST]
English summary
Kawasaki Z800 price slashed by Rs 55,000 in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+