ಜ.7ರಂದು ಮಹೀಂದ್ರ ಅಗ್ಗದ ಸ್ಕೂಟರ್ ಗಸ್ಟೊ ಬೆಂಗಳೂರು ಪ್ರವೇಶ

By Nagaraja

ಈಗಾಗಲೇ ಉತ್ತರ ಹಾಗೂ ಪಶ್ಚಿಮ ಭಾರತವನ್ನು ಪ್ರವೇಶಿಸಿರುವ ಮಹೀಂದ್ರದ ಅಗ್ಗದ ಸ್ಕೂಟರ್ ಆಗಿರುವ ಗಸ್ಟೊ ಇದೇ ಮುಂಬರುವ ಜನವರಿ 07 ಬುಧವಾರದಂದು ಬೆಂಗಳೂರು ಪ್ರವೇಶ ಪಡೆಯಲಿದೆ.

ಇದು ಮಹೀಂದ್ರ ಟು ವೀಲರ್ಸ್‌ನಿಂದ ಬಿಡುಗಡೆಯಾಗುತ್ತಿರುವ ಅತಿ ಅಗ್ಗದ ಸ್ಕೂಟರ್‌ಗಳಲ್ಲಿ ಒಂದಾಗಿದೆ. ಡಿಎಕ್ಸ್ ಹಾಗೂ ವಿಎಕ್ಸ್‌ಗಳೆಂಬ ಎರಡು ಮಾದರಿಗಳಲ್ಲಿ ಲಭ್ಯವಿರುವ ಗಸ್ಟೊ ಸ್ಕೂಟರ್ ಬೆಲೆ ಉತ್ತರ ಹಾಗೂ ಪಶ್ಚಿಮ ಭಾರತದಲ್ಲಿ ಅನುಕ್ರಮವಾಗಿ 43,000 ಹಾಗೂ 47,000 ರು.ಗಳಿಷ್ಟಿದೆ.

mahindra gusto

ಬೀಸುವ ಗಾಳಿಯ ಹೆಸರಿನಲ್ಲಿ ನಾಮಕರಣವಾಗಿರುವ ಹೊಸ ಗಸ್ಟೊ ಕಳೆದ ವರ್ಷ ಸೆಪ್ಟೆಂಬರ್ 29ರಂದು ಉತ್ತರ ಹಾಗೂ ಪಶ್ಚಿಮ ಭಾರತ ಪ್ರವೇಶ ಪಡೆದಿತ್ತು. ಇದು 109.6 ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 8 ಬಿಎಚ್‌ಪಿ (8.5 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಮಹೀಂದ್ರ ಸಂಸ್ಥೆಯ ಪ್ರಕಾರ ಗಸ್ಟೊ ಸ್ಕೂಟರ್ ಪ್ರತಿ ಲೀಟರ್‌ಗೆ 63 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಇದರ ಮಗದೊಂದು ವೈಶಿಷ್ಟ್ಯವೆಂದರೆ ನಿಮ್ಮ ಅಗತ್ಯಕ್ಕೆ ಅನುಸಾರವಾಗಿ ಎತ್ತರ ಹೊಂದಾಣಿಸಬಹುದಾಗಿದೆ. ಅಂತೆಯೇ ಪ್ಲಿಪ್ ಕೀ, ಫೈಂಡ್ ಮಿ ಆಯ್ಕೆಯು ಇದರಲ್ಲಿರುತ್ತದೆ.

ಎಂಜಿನ್: 109.6 ಸಿಸಿ, 4 ಸ್ಟ್ರೋಕ್, ಏರ್ ಕೂಲ್ಡ್
ಪವರ್: 8 ಅಶ್ವಶಕ್ತಿ
ಟಾರ್ಕ್: 8.5 ಎನ್‌ಎಂ
ಗರಿಷ್ಠ ವೇಗ: 80 km/h
ಟ್ರಾನ್ಸ್‌ಮಿಷನ್: ಸಿವಿಟಿ
ಮೈಲೇಜ್: 63 km/l
ಫ್ರೇಮ್: ಅಂಡರ್ ಬಾರ್ಡ್ ಟೈಪ್ (ಸ್ಟೀಲ್)- ಟ್ಯೂಬುಲರ್

ಸಸ್ಪೆಷನ್:
ಫ್ರಂಟ್ - ಟೆಲಿಸ್ಕಾಪಿಕ್, ಹೈಡ್ರಾಲಿಕ್ ವಿಧ
ರಿಯರ್ - ಕಾಯಿಲ್ ವಿಧ, ಹೈಡ್ರಾಲಿಕ್

More from DriveSpark

Article Published On: Tuesday, January 6, 2015, 11:52 [IST]
English summary
Mahindra Two-Wheelers is all set to launch its latest product, the Mahindra Gusto in Bangalore on the 7th of January.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+