ಹೋಂಡಾ ಆಫ್ ರೋಡ್ ಜಾಣ ಆಫ್ರಿಕಾ ಟ್ವಿನ್ ಆಗಮನಕ್ಕೆ ಕಾಲ ಸನ್ನಿಹಿತ

By Nagaraja

ಜಪಾನ್ ನ ಮುಂಚೂಣಿಯ ದ್ವಿಚಕ್ರ ವಾಹನ ಸಂಸ್ಥೆಯಾಗಿರುವ ಹೋಂಡಾ, ತನ್ನ ಐಕಾನಿಕ್ ಸಿಆರ್‌ಎಫ್1000ಎಲ್ ಆಫ್ರಿಕಾ ಟ್ವಿನ್ ಬೈಕ್ ಭರ್ಜರಿ ಅನಾವರಣಗೊಳಿಸಿದೆ. ಆಫ್ರಿಕಾ ಟ್ವಿನ್ ಲಾಂಛನದ ಆಫ್ ರೋಡ್ ಸಾಮರ್ಥ್ಯದ ಈ ಬೈಕ್, ಎಕ್ಸ್‌ಆರ್‌ವಿ750 ನಿರ್ಮಾಣ ಸ್ಥಗಿತದ 12 ವರ್ಷಗಳ ಬಳಿಕ ಎಂಟ್ರಿ ಕೊಡಲು ಸಜ್ಜಾಗುತ್ತಿದೆ.

ಆಫ್ ರೋಡ್ ಉತ್ಸಾಹಿಗಳಿಗೆ ಪರಿಪೂರ್ಣ ಚಾಲನಾ ಅನುಭವ ನೀಡುವುದು ಸಂಸ್ಥೆಯ ಯೋಜನೆಯಾಗಿದೆ. ಅಲ್ಲದೆ ದೀರ್ಘ ಪಯಣ ಇಷ್ಟಪಡುವವರನ್ನು ಪ್ರತಿ ಕ್ಷಣದಲ್ಲೂ ಮನರಂಜಿಸಲಿದೆ. ಇದರಲ್ಲಿ ವಿಶಿಷ್ಟತೆ ಕಾಪಾಡಿಕೊಂಡಿರುವ ಆಕರ್ಷಕ ನೋಟ ಹಾಗೂ ನಿರ್ವಹಣೆ ಹಾಗೂ ನಿರ್ಮಾಣ ಗುಣಮಟ್ಟತೆ ಎದ್ದು ಕಾಣಿಸಲಿದೆ.

ಹೋಂಡಾ ಸಿಆರ್‌ಎಫ್1000ಎಲ್ ಆಫ್ರಿಕಾ ಟ್ವಿನ್

ಹಳೆಯ ಮಾದರಿಯನ್ನು ಪರಿಷ್ಕೃರಿಸುವುದರ ಬದಲು ಹೊಚ್ಚ ಹೊಸ ಉತ್ಪನ್ನದ ವಿನ್ಯಾಸ ಹಾಗೂ ಅಭಿವೃದ್ಧಿಗೆ ಹೋಂಡಾ ಆದ್ಯತೆ ಕೊಟ್ಟಿತ್ತು. ಇದರ 998 ಸಿಸಿ ಎಂಜಿನ್ 98 ಎನ್ ಎಂ ತಿರುಗುಬಲದಲ್ಲಿ 93.8 ಅಶ್ವಶಕ್ತಿ ಉತ್ಪಾದಿಸಲಿದೆ.

ಹೋಂಡಾ ಸಿಆರ್‌ಎಫ್1000ಎಲ್ ಆಫ್ರಿಕಾ ಟ್ವಿನ್

2015 ವರ್ಷಾಂತ್ಯದೊಳಗೆ ಯುರೋಪ್ ಖಂಡವನ್ನು ತಲುಪಲಿರುವ ಹೋಂಡಾ ಸಿಆರ್‌ಎಫ್1000 ಎಲ್ ಇತರ ಜಾಗತಿಕ ಮಾರುಕಟ್ಟೆಗೂ ತಲುಪಲಿದೆ. ಅಲ್ಲದೆ ಆರು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿದೆ.

ಹೋಂಡಾ ಸಿಆರ್‌ಎಫ್1000ಎಲ್ ಆಫ್ರಿಕಾ ಟ್ವಿನ್

ಅತಿ ವಿಶಿಷ್ಟವಾದ ಡ್ಯುಯಲ್ ಕ್ಲಚ್ ಗೇರ್ ಬಾಕ್ಸ್ (ಡಿಸಿಟಿ) ಐಚ್ಛಿಕವಾಗಿ ಕೊಡಲಾಗಿದೆ. ಇದು ಡಿ, ಜಿ ಹಾಗೂ ಎಸ್ ಎಂಬ ವಿಧಗಳನ್ನು ಪಡೆಯಲಿದೆ.

ಹೋಂಡಾ ಸಿಆರ್‌ಎಫ್1000ಎಲ್ ಆಫ್ರಿಕಾ ಟ್ವಿನ್

228 ಕೆ.ಜಿಗಳಷ್ಟು ಭಾರವನ್ನು ಹೊಂದಿರುವ ಈ ಬೈಕ್ 18.8 ಲೀಟರ್ ಟ್ಯಾಂಕ್ ನಲ್ಲಿ 400 ಕೀ.ಮೀ. ವ್ಯಾಪ್ತಿಯ ವರೆಗೂ ಸಂಚರಿಸಬಹುದಾಗಿದೆ.

ಹೋಂಡಾ ಸಿಆರ್‌ಎಫ್1000ಎಲ್ ಆಫ್ರಿಕಾ ಟ್ವಿನ್

ಅಂದ ಹಾಗೆ ಸ್ಟ್ಯಾಂಡರ್ಡ್, ಎಬಿಎಸ್ ಮತ್ತು ಎಬಿಎಸ್-ಡಿಸಿಟಿ ಎಂಬ ಮೂರು ವೆರಿಯಂಟ್ ಗಳಲ್ಲಿ ಲಭ್ಯವಾಗಲಿದೆ.

ಹೋಂಡಾ ಸಿಆರ್‌ಎಫ್1000ಎಲ್ ಆಫ್ರಿಕಾ ಟ್ವಿನ್

ವರ್ಷಾಂತ್ಯದಲ್ಲಿ ಯುರೋಪ್ ಮಾರುಕಟ್ಟೆ ತಲುಪಲಿರುವ ಸಿಆರ್‌ಎಫ್1000ಎಲ್ ಆಫ್ರಿಕಾ ಟ್ವಿನ್ 8.5 ಲಕ್ಷ ರು.ಗಳಷ್ಟು (€12,100) ದುಬಾರಿಯೆನಿಸಲಿದೆ. ಆದರೆ ಭಾರತಕ್ಕೆ ಬರಲಿದೆಯೇ ಎಂಬುದು ಇನ್ನು ಅಸ್ಪಷ್ಟ.


Most Read Articles

Kannada
Read more on ಹೋಂಡಾ honda
English summary
One of the most awaited and teased motorcycle all over the internet was the latest Honda Africa Twin. After all the hype, the company has revealed details about the motorcycle and it beats expectations!
Story first published: Monday, July 27, 2015, 11:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X