ಗುಡು ಗುಡು ಸದ್ದು ಮಾಡಿದ ರಾಯಲ್ ಬುಲೆಟ್
ಭಾರತದ ಐಕಾನಿಕ್ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ರಾಯಲ್ ಎನ್‌ಫೀಲ್ಡ್ ಪ್ರತಿ ವರ್ಷದಂತೆ 2014ನೇ ಸಾಲಿನಲ್ಲೂ ದೇಶದ ರಸ್ತೆಯಲ್ಲಿ ಗುಡು ಗುಡು ಸದ್ದು ಮಾಡುವ ಮೂಲಕ ನೆಚ್ಚಿನ ಬುಲೆಟ್ ಎನಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
2014ನೇ ಸಾಲಿನಲ್ಲಿ ಹಲವಾರು ಬದಲಾವಣೆಗಳೊಂದಿಗೆ ಎನ್‌ಫೀಲ್ಡ್ ಮೋಟಾರ್ ಸೈಕಲ್ ಮುಂದೆ ಬಂದಿತ್ತು. ಇದರಲ್ಲಿ ಪ್ರಮುಖವಾಗಿಯೂ ಸಂಸ್ಥೆಯ ಲಾಂಛನವಾಗಿತ್ತು.

ಇದು ಮಾರಾಟದ ವಿಚಾರದಲ್ಲೂ ಪ್ರತಿಫಲಿಸಿತ್ತು. 2013ನೇ ಡಿಸೆಂಬರ್ ತಿಂಗಳಿಗೆ ಹೋಲಿಸಿದಾಗ ಎನ್‌ಫೀಲ್ಡ್ 2014 ಡಿಸೆಂಬರ್‌ನಲ್ಲಿ ಶೇಕಡಾ 40ರಷ್ಟು ಮಾರಾಟ ವರ್ಧನೆ ದಾಖಲಿಸಿತ್ತು.
ದೇಶೀಯವಾಗಿ ಕಳೆದ ಬಾರಿಯ 19,067 ಯುನಿಟ್‌ಗಳಿಗೆ ವಿರುದ್ಧವಾಗಿ ಈ ಬಾರಿ ಒಟ್ಟು 28,179 ಯುನಿಟ್ ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ.
ಇನ್ನು ರಫ್ತು ವಿಚಾರಕ್ಕೆ ಬಂದಾಗ 2014 ಡಿಸೆಂಬರ್ ತಿಂಗಳಲ್ಲಿ 455 ಯುನಿಟ್‌ಗಳನ್ನು ರಫ್ತು ಮಾಡಿವೆ. ಕಳೆದ ವರ್ಷವಿದು 245 ಯುನಿಟ್‌ಗಳಾಗಿತ್ತು. ಈ ಮೂಲಕ ವಿದೇಶದತ್ತಲೂ ಎನ್‌ಫೀಲ್ಡ್ ಕಣ್ಣಾಯಿಸಿದೆ.


Click it and Unblock the Notifications








