ಅಚ್ಚರಿ ಅಚ್ಚರಿ: ಹಾರ್ಲೆ ಓವರ್‌ಟೇಕ್ ಮಾಡಿದ ಎನ್‌ಫೀಲ್ಡ್

By Nagaraja

'ರಾಯಲ್ ಎನ್‌ಫೀಲ್ಡ್' ಮೋಟಾರುಸೈಕಲ್‌ಗಳನ್ನು ದೇಶದ 'ಹಾರ್ಲೆ ಡೇವಿಡ್ಸನ್' ಎಂದೇ ಹೆಸರಿಸಲಾಗುತ್ತದೆ. ಅಂತಹ ಎನ್‌ಫೀಲ್ಡ್ ಬೈಕ್‌ಗಳೇ ಈಗ ಜಾಗತಿಕ ಮಟ್ಟದಲ್ಲಿ ಐಕಾನಿಕ್ ಹಾರ್ಲೆ ಬೈಕ್‌ಗಳನ್ನು ಹಿಂದಿಕ್ಕಿದೆ ಅಂದರೆ ನಿಮ್ಮಿಂದ ನಂಬಲು ಸಾಧ್ಯವೇ?

ಹೌದು, ಈ ವರದಿ ಅಚ್ಚರಿ ಮೂಡಿಸಿದರೂ ನೀವು ನಂಬಲೇಬೇಕು. ಏಕೆಂದರೆ 2014ನೇ ಸಾಲಿನಲ್ಲಿ ಮೂರು ಲಕ್ಷ ಮೋಟಾರುಸೈಕಲ್‌ಗಳನ್ನು ಮಾರಾಟ ಮಾಡಿರುವ ಚೆನ್ನೈ ತಳಹದಿಯ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಹಾರ್ಲೆ ಡೇವಿಡ್ಸನ್ ಸಂಸ್ಥೆಯನ್ನೇ ಹಿಮ್ಮೆಟ್ಟಿಸಿದೆ. ಇದೇ ಅವಧಿಯಲ್ಲಿ ಹಾರ್ಲೆ 2.67 ಲಕ್ಷ ಯುನಿಟ್‌ಗಳನ್ನಷ್ಟೇ ಮಾರಾಟ ಮಾಡುವಲ್ಲಿ ಯಶಸ್ವಿಯಾಗಿತ್ತು.

royal enfield

ಈ ಮೂಲಕ 2014ರಲ್ಲಿ ಶೇಕಡಾ 70ರಷ್ಟು ಮಾರಾಟ ವೃದ್ಧಿಯನ್ನು ಎನ್‌ಫೀಲ್ಡ್ ಕಂಡಿದೆ. ಇನ್ನೊಂದೆಡೆ ಹಾರ್ಲೆ ಮಾರಾಟ ವೃದ್ಧಿ ಶೇಕಡಾ 3ಕ್ಕೆ ಮಾತ್ರ ಸೀಮಿತಗೊಂಡಿದೆ. ಈ ಎರಡು ಸಂಸ್ಥೆಗಳು ಜಾಗತಿಕ ಮಟ್ಟದಲ್ಲಿ ಪರಸ್ಪರ ಸ್ಪರ್ಧಿಯಲ್ಲದಿದ್ದರೂ ಈ ಸುದ್ದಿ ಎನ್‌ಫೀಲ್ಡ್ ಪ್ರೇಮಿಗಳಲ್ಲಿ ಅತಿ ಹೆಚ್ಚು ಸಂತಸಕ್ಕೆ ಕಾರಣವಾಗಿದೆ.

ಹಾರ್ಲೆ ಬೈಕ್‌ಗಳಿಗೆ ಹೋಲಿಸಿದಾಗ ಅಗ್ಗದ ದರಗಳಲ್ಲಿ ಲಭ್ಯವಾಗುವುದೇ ರಾಯಲ್ ಯಶಸ್ಸಿಗೆ ಕಾರಣವಾಗಿದೆ. ದೇಶದಲ್ಲಿ ಹಾರ್ಲೆ ಅಗ್ಗದ ಬೈಕ್ ಐದು ಲಕ್ಷ ರು.ಗಳಷ್ಟು ದುಬಾರಿಯೆನಿಸಿದರೆ ಎನ್‌ಫೀಲ್ಡ್ ದುಬಾರಿ ಬೈಕ್ ಎರಡು ಲಕ್ಷ ರು.ಗಳಲ್ಲಿ ಲಭ್ಯವಾಗುತ್ತಿದೆ. ಇದರಿಂದಲೇ ಎರಡು ಬೈಕ್‌ಗಳ ನಡುವಣ ಬೆಲೆ ವ್ಯತ್ಯಾಸದ ಬಗ್ಗೆ ಅರಿಯಬಹುದಾಗಿದೆ.

ಇನ್ನು 2015 ಜನವರಿ ತಿಂಗಳ ಮಾರಾಟದಲ್ಲೂ ರಾಯಲ್ ಎನ್‌ಫೀಲ್ಡ್ ಶೇಕಡಾ 43ರಷ್ಟು ಏರಿಕೆ ಸಾಧಿಸಿದೆ. ಕಳೆದ ವರ್ಷ 20,232 ಯುನಿಟ್‌ಗಳಷ್ಟಿದ್ದ ಈ ಸಂಖ್ಯೆಯು 28,927 ಯುನಿಟ್‌ಗಳಿಗೆ ತಲುಪಿದೆ. ಅಂತೆಯೇ ಜನವರಿ ತಿಂಗಳ ರಫ್ತಿನಲ್ಲೂ ಶೇಕಡಾ 82ರಷ್ಟು ಭರ್ಜರಿ ನೆಗೆತವನ್ನು ಎನ್‌ಫೀಲ್ಡ್ ಕಂಡಿದೆ. ಇಲ್ಲಿಯೂ ಕಳೆದ ಸಾಲಿನಲ್ಲಿ 424ರಷ್ಟಿದ್ದ ಸಂಖ್ಯೆಯು 770 ಯುನಿಟ್‌ಗಳಿಗೆ ತಲುಪಿದೆ.

ರಾಯಲ್ - ಹಾರ್ಲೆ ಮಾರಾಟ ಹೋಲಿಕೆ - ವರ್ಷದಿಂದ ವರ್ಷಕ್ಕೆ

2012
ರಾಯಲ್ ಎನ್‌ಫೀಲ್ಡ್ - 1,13,432
ಹಾರ್ಲೆ ಡೇವಿಡ್ಸನ್ - 2,47,625

2013
ರಾಯಲ್ ಎನ್‌ಫೀಲ್ಡ್ - 1,78,121
ಹಾರ್ಲೆ ಡೇವಿಡ್ಸನ್ - 2,60,829

2014
ರಾಯಲ್ ಎನ್‌ಫೀಲ್ಡ್ - 3,02,591
ಹಾರ್ಲೆ ಡೇವಿಡ್ಸನ್ - 2,67,999

More from DriveSpark

Article Published On: Monday, February 2, 2015, 16:01 [IST]
English summary
Royal Enfield, the Chennai based company has managed to outsell Harley-Davidson globally. Royal Enfield sold over 3 lakh motorcycles in 2014, while the so claimed legendary Harley-Davidson has managed to sell just 2.67 lakh bikes in 2014.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+