ಭಾರತಕ್ಕೆ ಎಂಟ್ರಿ ಕೊಡಲು ಟ್ರಯಂಪ್ ಸಾಹಸಿ ಬೈಕ್‌ಗಳು ರೆಡಿ
ಇತ್ತೀಚೆಗಷ್ಟೇ ಗೋವಾದಲ್ಲಿ ನಡೆದ ಇಂಡಿಯಾ ಬೈಕ್ ವೀಕ್‌ನಲ್ಲಿ ಎರಡು ಹೊಸ ಅಡ್ವೆಂಚರ್ ಮಾದರಿಗಳನ್ನು ಟ್ರಯಂಪ್ ಮೋಟಾರ್‌ಸೈಕಲ್ಸ್ ಪ್ರದರ್ಶಿಸಿತ್ತು. ಅದುವೇ ಟ್ರಯಂಪ್ ಟೈಗರ್ ಎಕ್‌ಸಿಎಕ್ಸ್ ಮತ್ತು ಎಕ್ಸ್‌ಆರ್‌ಎಕ್ಸ್.
ಈಗ ಈ ಎರಡೂ ಬಹುನಿರೀಕ್ಷಿತ ಮಾದರಿಗಳನ್ನು ಭಾರತೀಯ ವಾಹನ ಮಾರುಕಟ್ಟೆಗೆ ಪರಿಚಯಿಸಲು ಬ್ರಿಟನ್ ತಳಹದಿಯ ಈ ಐಕಾನಿಕ್ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯು ನಿರ್ಧರಿಸಿದೆ.

ವರದಿಗಳ ಪ್ರಕಾರ 2015 ಮಾರ್ಚ್ 12ರಂದು ಟ್ರಯಂಪ್ ಟೈಗರ್ ಎಕ್ಸ್‌ಸಿಎಕ್ಸ್ ಮತ್ತು ಎಕ್ಸ್‌ಆರ್‌ಎಕ್ಸ್ ಮಾದರಿಗಳು ಬಿಡುಗಡೆಯಾಗಲಿದೆ. ಈ ಮೂಲಕ ಸಾಹಸಿ ಬೈಕ್ ಪ್ರಿಯರಿಗೆ ಹೊಸ ಅನುಭವ ನೀಡಲಿದೆ.
ಅಂದ ಹಾಗೆ ಟ್ರಯಂಪ್ ಟೈಗರ್ ಎಕ್ಸ್‌ಸಿಎಕ್ಸ್ ಮತ್ತು ಎಕ್ಸ್‌ಆರ್‌ಎಕ್ಸ್ ಮಾದರಿಗಳು ಇನ್ ಲೈನ್ ತ್ರಿ ಸಿಲಿಂಡರ್ 800 ಸಿಸಿ ಲಿಕ್ವಿಡ್ ಕೂಲ್ಡ್ ಎಂಜಿನ್‌ನಿಂದ ನಿಯಂತ್ರಿಸ್ಪಡುತ್ತಿದ್ದು, 93.66 ಅಶ್ವಶಕ್ತಿ (79 ತಿರುಗುಬಲ) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ ಆರು ಸ್ಪೀಡ್ ಗೇರ್ ಬಾಕ್ಸ್ ಸಹ ಇರಲಿದೆ. ಸಂಸ್ಥೆಯ ಪ್ರಕಾರ ಟ್ರಯಂಪ್‌ನ ಈ ಎರಡು ಬೈಕ್‌ಗಳು ಪ್ರತಿ ಲೀಟರ್‌ಗೆ 25 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ವಿಶಿಷ್ಟತೆಗಳು
- ಮುಂದುವರಿದ ಎಬಿಎಸ್ ತಂತ್ರಜ್ಞಾನ,
- ಟ್ರಾಕ್ಷನ್ ನಿಯಂತ್ರಣ,
- ಥ್ರಾಟಲ್ ಮ್ಯಾಪ್,
- ಮೂರು ಚಾಲನಾ ವಿಧ,
- ಕ್ರೂಸ್ ಕಂಟ್ರೋಲ್,
- ಮುಂದುವರಿದ ಟ್ರಿಪ್ ಮಾಹಿತಿ,
- ಆಕ್ಸ್ ಸೊಕೆಟ್,
- ಆಟೋ ಕಾನ್ಸಲ್ ಇಂಡಿಕೇಟರ್,
- ಹೊಂದಾಣಿಸಬಹುದಾದ ವಿಂಡ್ ಸ್ಕ್ರೀನ್,
- ಹ್ಯಾಂಡ್ ಗಾರ್ಡ್,
- ಅಲ್ಯೂಮಿನಿಯಂ ಲಗ್ಗೇಜ್ ಕಂಟೈನರ್ (ಐಚ್ಛಿಕ),
- ಅಲ್ಯೂಮಿನಿಯಂ ಫೋಲ್ಡಿಂಗ್ ಗೇರ್ ಪೆಡಲ್ (ಐಚ್ಚಿಕ),
- ಹ್ಯಾಂಡಲ್ ಬಾರ್ ರೈಸರ್ (ಐಚ್ಚಿಕ),
- ಹೀಟಡ್ ಗ್ರಿಪ್ (ಐಚ್ಚಿಕ),
- ಎಲ್‌ಇಡಿ ಫಾಗ್ ಲೈಟ್ಸ್ (ಐಚ್ಚಿಕ)
ಈ ಎರಡು ಬೈಕ್‌ಗಳ ಪ್ರಮುಖ ವ್ಯತ್ಯಾಸವೇನೆಂದರೆ ಟೈಗರ್ ಎಕ್ಸ್‌ಸಿಎಕ್ಸ್ ಸ್ಪೋಕ್ ವೀಲ್‌ನಿಂದ ಚಲಿಸಿದರೆ ಟೈಗರ್ ಎಕ್ಸ್‌ಆರ್‌ಎಕ್ಸ್ ಅಲಾಯ್ ವೀಲ್ ಪಡೆಯಲಿದೆ. ಇನ್ನು ಎಕ್ಸ್‌ಸಿಎಕ್ಸ್ ಆಫ್ ರೋಡ್ ಹಾಗೂ ಎಕ್ಸ್‌ಆರ್‌ಎಕ್ಸ್ ಟೂರಿಂಗ್ ವಿಧದ ಬೈಕ್ ಆಗಿರಲಿದೆ. ಅಂದ ಹಾಗೆ ಇವೆರಡು 12 ಲಕ್ಷ ರು.ಗಿಂತಲೂ ದುಬಾರಿಯೆನಿಸಲಿದೆ.


Click it and Unblock the Notifications








