ಬೆಂಗಳೂರು ಟಸ್ಕರ್ ಹಾರ್ಲೆಯಿಂದ 'ಮರಳಿ ಶಾಲೆಗೆ' ಅಭಿಯಾನ
ನಿಜಕ್ಕೂ ಅತ್ಯುತ್ತಮ ವಿದ್ಯಾಭ್ಯಾಸ ದೊರೆತ ನಾವೆಲ್ಲರೂ ಅದೃಷ್ಟವಂತರು ತಾನೇ? ಯಾವತ್ತಾದರೂ ಒಂದು ದಿನ ಯೋಚಿಸಿ ನೋಡಿದ್ದೀರಾ ಬರಿ ಪ್ರಾಥಮಿಕ ವಿದ್ಯಾಭ್ಯಾಸದಿಂದಲೂ ವಂಚಿತರಾದ ಮಕ್ಕಳ ಜೀವನಶೈಲಿ ಹೇಗಿರಬಹುದು?
ಹೌದು, ಇಂತಹದೊಂದು ನಾವೀನ್ಯ ಅಭಿಯಾನವನ್ನು ಬೆಂಗಳೂರು ಹಾರ್ಲೆ ಡೇವಿಡ್ಸನ್ ಮಾಲಿಕರ ಸಂಘವಾದ ಟಸ್ಕರ್ ಚಾಪ್ಟರ್ (Tusker H.O.G. Chapter) ಹಮ್ಮಿಕೊಂಡಿದೆ. ಸದಾ ಹೊಸತನವನ್ನುಂಟು ಮಾಡುವ ಅಭಿಯಾನ ಆಯೋಜಿಸುವ ಈ ತಂಡವು ಜೀವನಕ್ಕೆ ಹೆಚ್ಚಿನ ಅರ್ಥ ಕಲ್ಪಿಸುವ ಇಂತಹ ಕಾರ್ಯಕ್ರಮದಿಂದಾಗಿ ಮೆಚ್ಚುಗೆಗೆ ಪಾತ್ರವಾಗಿದೆ.

'ಮರಳಿ ಶಾಲೆಗೆ' ಅಭಿಯಾನದ ಮುಖಾಂತರ ಮಕ್ಕಳೊಂದಿಗೆ ಸ್ವಲ್ಪ ಸಮಯ ಹಂಚಿಕೊಳ್ಳುವುದಷ್ಟೇ ಯೋಜನೆಯ ಉದ್ದೇಶವಾಗಿರಲಿಲ್ಲ. ಇದರಂತೆ ನಗರದ ಕೂಕ್ ಟೌನ್‌ನಲ್ಲಿರುವ ಸೈಂಟ್ ಮೇರಿ ಅನಾಥಾಶ್ರಮಕ್ಕೆ 20ರಷ್ಟು ಚಾಲಕರು ಕುಟುಂಬ ಸಮೇತ ಭೇಟಿ ಕೊಟ್ಟಿದ್ದರು.
200ರಷ್ಟು ಮಕ್ಕಳ ಜೊತೆ ಸಮಯ ಕಳೆದುಕೊಂಡ ಟಸ್ಕರ್ ಚಾಪ್ಟರ್ ತಂಡವು ಮಕ್ಕಳ ಕಷ್ಟ-ಸುಖವನ್ನು ಹಂಚಿಕೊಂಡರು. ಅಲ್ಲದೆ ವಿದ್ಯಾಭ್ಯಾಸದ ಹಾಗೂ ಚಾಲನೆಯ ಮೂಲಭೂತ ಅಂಶಗಳ ಬಗ್ಗೆ ಪಾಠವನ್ನು ಹೇಳಿಕೊಡಲಾಯಿತು.

ದೈತ್ಯಕಾರಾದ ಹಾರ್ಲೆ ಮೋಟಾರ್ ಸೈಕಲ್ ಗಳನ್ನು ಕಂಡಾಕ್ಷಣ ಮಕ್ಕಳ ಸಂತೋಷಕ್ಕೆ ಪಾರವೇ ಇರಲಿಲ್ಲ. ಅಲ್ಲದೆ ಮಕ್ಕಳನ್ನು ಕುಳ್ಳಿರಿಸಿಕೊಂಡು ಜಾಯ್ ರೈಡ್ ಸಹ ಹಮ್ಮಿಕೊಳ್ಳಲಾಯಿತು.

70,000 ರು.ಗಳ ಆರ್ಥಿಕ ನೆರವು...
ಮಕ್ಕಳ ಜೊತೆ ಕೇವಲ ಒಂದಿಷ್ಟು ಸಮಯವನ್ನು ಕಳೆಯುವುದು ಟಸ್ಕರ್ ಹಾರ್ಲೆ ತಂಡದ ಗುರಿಯಾಗಿರಲಿಲ್ಲ. ಅಲ್ಲದೆ ತಾವು ಸಂಗ್ರಹಿಸಿದ್ದ 70,000 ರು.ಗಳ ಆರ್ಥಿಕ ನೆರವನ್ನು ಸೈಂಟ್ ಮೇರಿ ಅನಾಥಾಶ್ರಮಕ್ಕೆ ನೀಡಲಾಯಿತು.

ಒಟ್ಟಿನಲ್ಲಿ ಹಾರ್ಲೆ ಬೈಕ್ ಖರೀದಿಸುವುದಷ್ಟೇ ಮುಖ್ಯಮಲ್ಲ. ಇದರ ಜೊತೆಗೆ ಮಾನವೀಯತೆ ಮೆರೆಯುವ ಮೂಲಕ ಈ ಸುಂದರ ಜಗ್ಗತ್ತಿಗೆ ಏನೆನ್ನಾದರೂ ಹಿಂತಿರಿಗಿಸುವುದು ನಮ್ಮ ಧ್ಯೇಯವಾಗಿರಬೇಕು. ಈ ನಿಟ್ಟಿನಲ್ಲಿ ಟಸ್ಕರ್ ಹಾರ್ಲೆ ತಂಡವು ಹಮ್ಮಿಕೊಂಡಿರುವ ಸಹಾಯಾರ್ಥ ಕಾರ್ಯಕ್ರಮವು ನಿಜಕ್ಕೂ ಶ್ಲಾಘನೀಯವೇ ಸರಿ.


Click it and Unblock the Notifications








