ವಿಶ್ವದ ಅತಿ ವೇಗದ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಬೈಕ್

By Nagaraja

ನೂತನ ತಂತ್ರಜ್ಞಾನದ ಅವಿಷ್ಕಾರದೊಂದಿಗೆ ಹೆಚ್ಚೆಚ್ಚು ಪರಿಸರ ಸ್ನೇಹಿ ವಾಹನಗಳ ಆಗಮನವಾಗುತ್ತಿದೆ. ತನ್ನೆಲ್ಲ ಕೊರತೆಗಳನ್ನು ನೀಗಿಸಿಕೊಂಡಿರುವ ಅಮೆರಿಕದ ಲೈಟನಿಂಗ್ ಎಲ್ಎಸ್-218 ಜಗತ್ತಿನ ಅತಿ ವೇಗದ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಬೈಕ್ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಸಾಮಾನ್ಯವಾಗಿ ಮೋಟಾರ್ ಸೈಕಲ್ ವೊಂದನ್ನು ಅಭಿವೃದ್ಧಿಗೊಳಿಸಲು ವರ್ಷಗಳೇ ಬೇಕಾಗುತ್ತದೆ. ಆದರೆ ಅತಿ ಕಡಿಮೆ ಅವಧಿಯಲ್ಲಿ ಅಭಿವೃದ್ಧಿಗೊಳಿಸಲಾಗಿರುವ ಲೈಟನಿಂಗ್ ಎಲ್ ಎಸ್-218, ಜಗತ್ತಿನಲ್ಲೇ ಅತಿ ವೇಗದ ನಿರ್ಮಾಣಗೊಂಡಿರುವ ಎಲೆಕ್ಟ್ರಿಕ್ ಕಾರೆಂಬ ಗೌರವಕ್ಕೂ ಪಾತ್ರವಾಗಿದೆ.

ವಿಶ್ವದ ಅತಿ ವೇಗದ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಬೈಕ್

ವಿಶ್ವ ವಿಖ್ಯಾತ ವಾಹನ ಸಂಗ್ರಹಾಗಾರ ಜೇ ಲೆನೊ ಗ್ಯಾರೇಜ್ ಅನ್ನು ತಲುಪಿರುವ ಲೈಟನಿಂಗ್ ಸ್ಪೋರ್ಟ್ ಬೈಕ್ ಅತ್ಯಂತ ಶಕ್ತಿಶಾಲಿ ಎನಿಸಿಕೊಂಡಿದ್ದು, ಗಂಟೆಗೆ 350 ಕೀ.ಮೀ. ವೇಗದಲ್ಲಿ ಸಂಚರಿಸುವ ಮೂಲಕ ದಾಖಲೆ ಸೃಷ್ಟಿ ಮಾಡಿದೆ.

ವಿಶ್ವದ ಅತಿ ವೇಗದ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಬೈಕ್

ಕ್ರೀಡಾತ್ಮಕ ವಿನ್ಯಾಸ ಹಾಗೂ ನೋಟ, 250 ಅಶ್ವಶಕ್ತಿ, 150 ಕೆಡಬ್ಲ್ಯು ಜೊತೆಗೆ 10,500 ಆರ್ ಪಿಎಂ ಎಲ್ಲವೂ ಲೈಟನಿಂಗ್ ಸೂಪರ್ ಸ್ಪೋರ್ಟ್ ಬೈಕ್ ಅನ್ನು ವಿಶಿಷ್ಟವಾಗಿ ಗುರುತಿಸುವಂತೆ ಮಾಡಿದೆ.

ವಿಶ್ವದ ಅತಿ ವೇಗದ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಬೈಕ್

ಸುಸ್ಥಿರ ಪರಿಸರದ ಸಂರಕ್ಷಣೆಯ ನಿಟ್ಟಿನಲ್ಲಿ ವಿಶ್ವಾಸಾರ್ಹ ಉತ್ಪನ್ನಗಳನ್ನು ನೀಡುವುದು ಅಮೆರಿಕ ಮೂಲಕ ಸಂಸ್ಥೆಯ ಉದ್ದೇಶವಾಗಿತ್ತು. ಅಲ್ಲದೆ ಈಗಾಗಲೇ ಹಲವು ಕಡೆಗಳಿಂದ ಮೆಚ್ಚುಗೆಗೂ ಪಾತ್ರವಾಗಿದೆ.

ವಿಶ್ವದ ಅತಿ ವೇಗದ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಬೈಕ್

380 ವಾಟ್ 12 ಕೆಡಬ್ಲ್ಯುಎಚ್ ಬ್ಯಾಟರಿ ಪ್ಯಾಕ್ ಹೊಂದಿರುವ ಲೈಟನಿಂಗ್ ಮೋಟಾರ್ ಸೈಕಲ್ ಒಂದು ಚಾರ್ಜ್ ನಲ್ಲಿ 100-120 ಮೈಲು ವ್ಯಾಪ್ತಿ ವರೆಗೆ ಚಲಿಸುವ ಸಾಮರ್ಥ್ಯ ಹೊಂದಿರುತ್ತದೆ.

ವಿಶ್ವದ ಅತಿ ವೇಗದ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಬೈಕ್

ಒಂದು ಸೂಪರ್ ಬೈಕ್ ಗೆ ಬೇಕಾದ ಎಲ್ಲ ಸಂಯೋಜನೆಗಳನ್ನು ಇದರಲ್ಲಿ ಆಳವಡಿಸಲಾಗಿದೆ. ಇದು ನಿಜಕ್ಕೂ ಅದ್ಭುತ ಎಂದು ಲೈಟನಿಂಗ್ ಸೂಪರ್ ಬೈಕ್ ನಿಂದ ಪ್ರಭಾವಿತರಾಗಿರುವ ಜೇ ಲೆನೊ ವಿವರಿಸುತ್ತಾರೆ.

ವಿಶ್ವದ ಅತಿ ವೇಗದ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಬೈಕ್

ಅಂದ ಹಾಗೆ ಲೈಟನಿಂಗ್ ಎಲೆಕ್ಟ್ರಿಕ್ ಸ್ಪೋರ್ಟ್ ಬೈಕ್ ಭಾರತೀಯ ರುಪಾಯಿ ಪ್ರಕಾರ 25 ಲಕ್ಷ ರು.ಗಳಷ್ಟು (38,888 ಅಮೆರಿಕನ್ ಡಾಲರ್) ದುಬಾರಿಯೆನಿಸುತ್ತದೆ.

ವಿಶ್ವದ ಅತಿ ವೇಗದ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಬೈಕ್

ವಿಶ್ವದ ಇತರೆ ಸೂಪರ್ ಬೈಕ್ ಗಳನ್ನು ಹೋಲಿಸಿದಾಗ ಲೈಟನಿಂಗ್ ಸಾಧನೆ ನಿಜಕ್ಕೂ ಪ್ರಶಂಸನೀಯವಾಗಿದೆ. ಇನ್ನು ಎಲೆಕ್ಟ್ರಿಕ್ ಆಗಿದುದರಿಂದ ಶಬ್ದ ಮಾಲಿನ್ಯವೂ ಕಡಿಮೆಯಾಗಿದೆ.

ವಿಶ್ವದ ಅತಿ ವೇಗದ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಬೈಕ್

ಹಾಗೊಂದು ವೇಳೆ ನಿಮಗೂ ಲೈಟನಿಂಗ್ ಎಲೆಕ್ಟ್ರಿಕ್ ಸ್ಪೋರ್ಟ್ ಬೈಕ್ ಇಷ್ಟವಾದ್ದಲ್ಲಿ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ನಿಮ್ಮ ಅಭಿಪ್ರಾಯ ತಿಳಿಸಲು ಮರೆಯದಿರಿ.

Article Published On: Thursday, July 16, 2015, 15:24 [IST]
English summary
World's fastest production electric Sportbike Lightning LS-218
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+