ಯಮಹಾ ಆರ್1, ಆರ್1ಎಂ ಸೂಪರ್ ಬೈಕ್ಸ್ ಭರ್ಜರಿ ಎಂಟ್ರಿ
ಜಪಾನ್ ಮೂಲದ ಐಕಾನಿಕ್ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಯಮಹಾ ಭಾರತೀಯ ಮಾರುಕಟ್ಟೆಯಲ್ಲಿ ಎರಡು ಹೊಸ ಸೂಪರ್ ಬೈಕ್ ಗಳನ್ನು ಬಿಡುಗಡೆಗೊಳಿಸಿದೆ. ಅದುವೇ ಯಮಹಾ ಆರ್1 ಮತ್ತು ಆರ್1ಎಂ.
ಈ ಪೈಕಿ ಆರ್1 ರಸ್ತೆ ಮಾನ್ಯತೆ ಪಡೆದ ಹಾಗೂ ಆರ್1ಎಂ ಟ್ರ್ಯಾಕ್ ಗೆ ಮಾತ್ರ ಸೀಮಿತವಾಗಿರುವ ಸೂಪರ್ ಬೈಕ್ ಆಗಿರಲಿದೆ. ಈಗ ಎರಡೂ ಸೂಪರ್ ಬೈಕ್ ಬಗ್ಗೆ ವಿವರವಾಗಿ ತಿಳಿದುಕೊಳ್ಳಿರಿ...

ಮೊಟೊಜಿಪಿ ಬೈಕ್ ನಲ್ಲಿರುವ ಹಲವಾರು ವೈಶಿಷ್ಟ್ಯಗಳನ್ನು ಯಮಹಾ ಆರ್1 ಸೂಪರ್ ಬೈಕ್ ನಲ್ಲಿ ಕಾಣಬಹುದಾಗಿದೆ. ಇದು ಯಮಹಾ ಹೈ ಎಂಡ್ ಶ್ರೇಣಿಗಳ ಸಾನಿಧ್ಯವನ್ನು ಮತ್ತಷ್ಟು ಹೆಚ್ಚಿಸುವಂತಾಗಿದೆ.

ಬೆಲೆ ಮಾಹಿತಿ
ಯಮಹಾ ಆರ್1 - 22.34 ಲಕ್ಷ ರು.
ಯಮಹಾ ಆರ್1ಎಂ - 29.43 ಲಕ್ಷ ರು.

ಎರಡು ಬೈಕ್ ಗಳು ಸಮಾನವಾದ 998 ಸಿಸಿ ಇನ್ ಲೈನ್ ಫೋರ್ ಸಿಲಿಂಡರ್ ಡಿಒಎಚ್ ಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, ಬರೋಬ್ಬರಿ 197.18 ಅಶ್ವಶಕ್ತಿ (112.4 ತಿರುಗುಬಲ) ಉತ್ಪಾದಿಸಲಿದೆ. ಹಾಗೆಯೇ 6 ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

ಯಮಹಾ ಸೂಪರ್ ಬೈಕ್ ಗಳಲ್ಲಿ ಡಿಜಿಟಲ್ ಟಚ್ ಸ್ಕ್ರೀನ್ ಇರಲಿದೆ. ಇದು ನಿಮ್ಮ ಚಾಲನೆಯನ್ನು ಆರಾಮದಾಯಕವಾಗಿಸಲಿದೆ.

ಈ ಪೈಕಿ ಆರ್1ಎಂ ವಿಶೇಷ ಸೂಪರ್ ಬೈಕ್ ಆಗಿರಲಿದೆ. ಇದರಲ್ಲಿ ಆಕ್ರಮಣಕಾರಿ ವಿನ್ಯಾಸವನ್ನು ಪಡೆದುಕೊಂಡಿದೆ.

ಕಾರ್ಬನ್ ಪರಿಕರಗಳನ್ನು ಹೊಂದಿರುವ ಆರ್1ಎಂ ಹಗುರವಾಗಿರಲಿದ್ದು, ಇಆರ್ ಎಸ್, ವೈರ್ ಲೆಸ್ ಸಂಪರ್ಕ, 6 ಆಕ್ಸಿಸ್ ಐಎಂಯು ಜೊತೆ ಜಿ ಸೆನ್ಸಾರ್, ಟ್ರಾಕ್ಷನ್/ಸ್ಲೈಡ್ ಕಂಟ್ರೋಲ್, ಲಿಫ್ಟ್/ಲಾಂಚ್ ಕಂಟ್ರೋಲ್, ಎಬಿಎಸ್ ಮುಂತಾದ ವ್ಯವಸ್ಥೆಗಳಿರಲಿದೆ.

ಬಣ್ಣಗಳು
ರೇಸಿಂಗ್ ಬ್ಲೂ
ರೇಸಿಂಗ್ ರೆಡ್
ಸಿಲ್ವರ್ ಬ್ಲೂ ಕಾರ್ಬರ್

ಈಗ ಯಮಹಾ ಸೂಪರ್ ಬೈಕ್ ಗಳ ಬಗ್ಗೆ ನಿಮ್ಮ ಅಭಿಮತ ತಿಳಿಸಿರಿ


Click it and Unblock the Notifications








