ಯಮಹಾ ಸೆಲ್ಯೂಟೊ ಡಿಸ್ಕ್ ಬ್ರೇಕ್ ನಲ್ಲೂ ಲಭ್ಯ

Written By:

ಇತ್ತೀಚೆಗಷ್ಟೇ ಭಾರತೀಯ ಮಾರುಕಟ್ಟೆಗೆ ಪ್ರವೇಶ ಕಂಡಿದ್ದ ಯಮಹಾ ಸೆಲ್ಯೂಟೊ ಈಗ ಡಿಸ್ಕ್ ಬ್ರೇಕ್ ನಲ್ಲೂ ಲಭ್ಯ. ಇದರ ದೆಹಲಿ ಎಕ್ಸ್ ಶೋ ರೂಂ ಬೆಲೆ 54,500 ರು.ಗಳಾಗಿರಲಿದೆ.

ಪ್ರಮುಖವಾಗಿಯೂ 125 ಸಿಸಿ ವಿಭಾಗದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಹೋಂಡಾದ ಜನಪ್ರಿಯ ಸಿಬಿ ಶೈನ್ ಮಾದಿರಗೆ ಪ್ರತಿಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದ ಯಮಹಾ ಸೆಲ್ಯೂಟೊ ಬೈಕ್ ಪ್ರೇಮಿಗಳ ಮನ ಸೆಳೆಯುವ ಇರಾದೆಯಲ್ಲಿದೆ.

ಯಮಹಾ ಸೆಲ್ಯೂಟೊ

ಶೈನ್ ಮಾದರಿಗೆ ಹೋಲಿಸಿದಾಗ ಅತಿ ಕಡಿಮೆ ಬೆಲೆಗೆ ಮಾರುಕಟ್ಟೆ ಪ್ರವೇಶಿಸಿರುವ ನೂತನ ಯಮಹಾ ಸೆಲ್ಯೂಟೊ ಅತಿ ಹೆಚ್ಚು ಮಾರಾಟವನ್ನು ಗುರಿಯಿರಿಸಿಕೊಂಡಿದೆ.

ಎಂಜಿನ್ ತಾಂತ್ರಿಕತೆ

  • 125 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್,
  • 8.17 ಅಶ್ವಶಕ್ತಿ,
  • 10.1 ಎನ್‌ಎಂ ತಿರುಗುಬಲ,
  • 4 ಸ್ಪೀಡ್ ಕಾಸ್ಟಂಟ್ ಮೆಶ್ ಗೇರ್ ಬಾಕ್ಸ್,
  • ಮೈಲೇಜ್: 78 ಕೀ.ಮೀ.

ಹೊಚ್ಚ ಹೊಸ ನಾಲ್ಕು ಬಣ್ಣಗಳಲ್ಲೂ ನೂತನ ಯಮಹಾ ಸೆಲ್ಯೂಟೊ ಲಭ್ಯವಾಗಲಿದೆ. ಅವುಗಳೆಂದರೆ, ಬೋಲ್ಡ್ ಬ್ಲೂ, ಡ್ಯಾಶಿಂಗ್ ವೈಟ್, ಗ್ಲೋರಿ ಗ್ರೀನ್ ಮತ್ತು ಮೆಜೆಸ್ಟಿಕ್ ರೆಡ್.

Read more on ಯಮಹಾ yamaha
English summary
Yamaha India recently launched its commuter motorcycle, which was christened the ‘Saluto'. It is targeted to the mass market in the country that uses commuter bikes for everyday use.
Story first published: Wednesday, July 22, 2015, 7:38 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark